ಕಾವ್ಯ ಸಂಗಾತಿ
ಪರವಿನಬಾನು ಯಲಿಗಾರ
“ಪ್ರೀತಿ”


ಪ್ರೀತಿ ಎಂದರೆ ಅಂಬರ ,
ಅಲ್ಲಿ ಮೇಘದ ತಂಪು ಸಿಂಚನ ,
ಜೊತೆಗೆ ಗುಡುಗು , ಕೋಲ್ಮಿಂಚಿನ
ಅಬ್ಬರವು ಇದೆ…..
ಪ್ರೀತಿ ಎಂದರೆ ಇಳೆ ,
ಕರುಣೆಯ ಹಸಿರು ಇದೆ ,
ಬದುಕು ಕಸಿಯುವ ಜ್ವಾಲೆಯ
ಕಂಪನವೂ ಇದೆ…..
ಪ್ರೀತಿ ಎಂದರೆ ಸಾಗರ ,
ವಡಲಿನಲ್ಲಿ ಮುತ್ತು ಮಾಣಿಕ್ಯ ಇವೆ ,
ರಕ್ಕಸ ರೂಪದ ಅಲೆಗಳ
ಆರ್ಭಟದ ಸುನಾಮಿ ಇದೆ…..
ಪ್ರೀತಿ ಎಂದರೆ ಗಾಳಿ ,
ಉಸಿರು ಕಟ್ಟುವ ಬಿರುಗಾಳಿ ಇದೆ,
ಜೀವ ಕೊಡುವ ಪ್ರಾಣ
ವಾಯುವು ಹೌದು …..
ಪ್ರೀತಿ ಎಂದರೆ ಬೆಂಕಿ ,
ಬೆಳಗುವ ನಂದಾ ದೀಪವು ಆಗುವುದು,
ಸರ್ವನಾಶಕ್ಕೆ ಚಾಚುವ
ಕೆನ್ನಾಲಿಗೆಯೂ ಇದೆ ….
ಪರವಿನಬಾನು ಯಲಿಗಾರ.



