ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಕೊಡಚಾದ್ರಿ”


ಕೊಡಚಾದ್ರಿ—
ನೀನು ಪರ್ವತವಲ್ಲ,
ಪ್ರತಿದಿನ ಹೊಸದಾಗಿ ಹುಟ್ಟುವ
ನಿತ್ಯ ಸುಂದರಿ.
ಶೋಲಾ ಕಾಡಿನ ಹಸಿರು ಸೀರೆಯಲಿ
ನೀನು ಮೌನವಾಗಿ ನಿಂತಾಗ,
ಮೋಡಗಳು ನಿನ್ನ ಕೆನ್ನೆಗೆ
ಮುತ್ತಿಟ್ಟು ಹೋಗುತ್ತವೆ—
ನನಗೆ ಮಾತ್ರ
ದೂರದಿಂದ ನೋಡುವ ಹಕ್ಕು.
ಹಿಡ್ಲುಮನೆ
ನಿನ್ನ ಕೂದಲ ತುದಿಯಿಂದ
ಜಾರಿ ಬೀಳುವ ನಗುವಿನಂತೆ,
ಅದು ನೆಲ ತಾಕುವ ಮುನ್ನವೇ
ನನ್ನ ಮನಸ್ಸು ತಾಕಿ
ನನ್ನನ್ನು ಕರಗಿಸುತ್ತದೆ.
ನಿನ್ನ ಹಾದಿಯಲ್ಲಿ
ಜಿಗಣೆ ನನ್ನ ರಕ್ತ ಹೀರುವಾಗ,
ನೋವಿಗಿಂತ
ನಿನ್ನ ಹತ್ತಿರ ಇರುವ ಸವಿ
ಹೆಚ್ಚಾಗಿ ಗೊತ್ತಾಗುತ್ತದೆ.
ಬೆವರು ದೇಹ ಬಿಟ್ಟು
ನಿನ್ನ ಮಣ್ಣಲ್ಲಿ ಬೆರೆತಾಗ,
ನಾನು ನಿಧಾನವಾಗಿ
ನಿನ್ನೊಳಗೆ ಲೀನವಾಗುತ್ತೇನೆ—
ಹೆಸರಿಲ್ಲದೆ,
ಆಕಾರವಿಲ್ಲದೆ.
ಏರುವೆಡೆಗೆ ಹೆಜ್ಜೆ ಹಾಕುತ್ತಾ
ಉಸಿರು ಕಷ್ಟವಾದಾಗ,
ನಿನ್ನ ಗಾಳಿ ಬಂದು
ಎದೆಯ ಮೇಲೆ ಕೈ ಇಟ್ಟು
ಹೇಳುತ್ತದೆ—
“ನನ್ನನ್ನು ಬಯಸುವುದೂ
ಒಂದು ತಪಸ್ಸೇ”.
ಸರ್ವಜ್ಞ ಪೀಠದ ಬಳಿ
ನೀನು ಶಾಂತಳಾಗುತ್ತೀಯ,
ಅಲ್ಲಿ
ನನ್ನ ಆಸೆಗಳು ಕೂಡ
ತಲೆಯೊಗ್ಗಿ ಕುಳಿತುಕೊಳ್ಳುತ್ತವೆ.
ಚಿತ್ರಮೂಲದ ಮೌನದಲ್ಲಿ
ನಿನ್ನ ಕಣ್ಣು ಮಿಟುಕಿದಂತೆ
ಒಂದು ಸಂಕೆತ,
ಅದು ನನ್ನೊಳಗೆ
ಹುಟ್ಟು–ಸಾವು ಎರಡನ್ನೂ
ಒಂದೇ ಕ್ಷಣದಲ್ಲಿ ಕಲಿಸುತ್ತದೆ.
ಸೂರ್ಯಾಸ್ತದ ಹೊತ್ತಿಗೆ
ನೀನು ಕೆಂಪಾಗಿ ನಾಚಿದಾಗ,
ಅರಬ್ಬೀ ಸಮುದ್ರವೂ
ನಿನ್ನ ಸೌಂದರ್ಯಕ್ಕೆ
ಅಲೆಗಳನ್ನೇ ಮರೆತು ನಿಂತುಬಿಡುತ್ತದೆ.
ಕೊಡಚಾದ್ರಿ—
ನಿನ್ನನ್ನು ಏರುವುದು
ಚಾರಣವಲ್ಲ,
ನಿನ್ನೊಳಗೆ ಕಳೆದುಕೊಳ್ಳುವ
ಪ್ರೇಮಯಾನ.
ನೀನು ಆಧ್ಯಾತ್ಮ,
ನೀನು ಆಕಾಂಕ್ಷೆ,
ನೀನು ಶಿಖರ,
ನೀನು ಶೃಂಗಾರ.
ಒಂದು ದಿನ
ನಾನು ಸಂಪೂರ್ಣವಾಗಿ
ನಿನ್ನೊಳಗೆ ಲೀನವಾದರೆ—
ಅಂದು
ನಾನು ಮಾನವನಲ್ಲ,
ನಿನ್ನ ಮೌನದ
ಒಂದು ಉಸಿರಾಗಿಬಿಡುತ್ತೇನೆ.
ಅಷ್ಟೇ ಸಾಕು.
ಡಾ. ಹೆಚ್. ನಟರಾಜ್ ಆರ್ಯ




ಡಾ.ಎಚ್.ನಟರಾಜ್ ಆರ್ಯ ಅವರ ಕವಿತೆ “ಕೊಡಚಾದ್ರಿ” ಪ್ರಕೃತಿ ಮಡಿಲಿನ ಬಣ್ಣನೆ ಬಹಳ ಸೊಗಸಾಗಿದೆ. “ಕೊಡಚಾದ್ರಿ” ಯನ್ನು ಹೆಣ್ಣಿಗೆ ಹೋಲಿಸಿ ಬರೆದು ವೈಭವಿಕರಣ ಹಾದಿಯಲ್ಲಿ ಎತ್ತಲೂ ಸಾಗದೇ ಆ ಬೆಟ್ಟದ ಶ್ರೇಣಿಯ ಬಗೆಗಿನ ಈ ಕವಿತೆಗೆ ಅಕ್ಷರ ಜೋಡಿಸಿ ನಮ್ಮ ಹೊಸನಗರ ತಾಲೂಕಿನ ಕೊಡಚಾದ್ರಿಯ ಮಹತ್ವ ಹೆಚ್ಚಿಸಿದ್ದಾರೆ ನಮ್ಮ ಶ್ರೇಷ್ಠ ಕವಿ ಡಾ.ಎಚ್. ನಟರಾಜ್ ಆರ್ಯ ಅವರು. ಅವರು ಬರೆಯುವ ಪ್ರತಿ ಕವಿತೆಯೂ ಮನುಷ್ಯ ಸಂವೇದನೆ,ರಮ್ಯಪರಿಸರದ ಚಿತ್ರಣ ಬಿಂಬಿಸಲಿದೆ. ಇಲ್ಲಿ ಪದಪುಂಜಗಳ ಜೋಡಣೆ ಮಾತ್ರವಲ್ಲ. ಇಲ್ಲಿ ವಾಸ್ತವದ ವರ್ಣನೆ ನಮ್ಮ ಬದುಕಿಗೆ ಹತ್ತಿರವಾಗಿದೆ.ಕವಿ ಡಾ. ನಾ. ಸುಮತಿಂದ್ರ ನಾಡಿಗ, ಪತ್ರಕರ್ತ ಲಕ್ಷ್ಮಣ ಕೊಡ್ಸೆ ಮತ್ತಿತರರೂ ಕೊಡಚಾದ್ರಿಯ ಮೇಲೆ ಕವಿತೆ ಬರೆದಿದ್ದಾರೆ. ಆದರೆ, ಕವಿತೆಯ ಕಾವ್ಯದ ಮಟ್ಟು,ಲಯ ಬಹಳ ವೈವಿದ್ಯತೆ ಇದೆ. ಈ ಚೆಂದದ ಕವಿತೆ ಕೊಟ್ಟ ಡಾ.ಎಚ್. ನಟರಾಜ್ ಆರ್ಯ ಅವರಿಗೆ ಅಭಿನಂದನೆಗಳು. ಪ್ರತಿಯೊಬ್ಬರೂ ಓದಲೇಬೇಕಾದ ಕವಿತೆ ಇದು.
ಅದ್ಭುತ ಕವಿತೆ….ಪ್ರಕೃತಿ ಮತ್ತು ಪರಿಸರ ದ ವರ್ಣನೆಯನ್ನು ಜರೂರಾಗಿ ಧ್ವನಿಸುತ್ತದೆ….. ಆದರೆ ಕವಿತೆ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ…ವಾಗಾರ್ಥಕ್ಕಿಂತ ಭಾಷೆಯಲ್ಲಿ ಧ್ವನ್ಯೋಕ್ತಿ….ಇದ್ದರೆ ವ್ಯಂಗಾರ್ಥವಿದ್ದರೆ…ಕವಿತೆ ಇನ್ನೂ ಸುಂದರ….ಸರ್ ಧನ್ಯವಾದಗಳು…
Excellent poem written by Nataraj sir which is based on Kodachadri hills
ನಿಸರ್ಗ ದ ಜೊತೆ ಒಡನಾಟ ಇರುವವರಿಗೆ ಮಾತ್ರ ನಿಮ್ಮ ಕವಿತೆಯ ಪೂರ್ಣ ಅರ್ಥ ಮತ್ತು ಅದರ ಭಾವನೆ ಗಳು ಮನಮುಟ್ಟುತ್ತವೆ ಸರ್, ಪರಿಸರ ಮತ್ತು ಮನುಷ್ಯನ ಒಡನಾಟ ಬಹಳ ಮುಖ್ಯ ಮತ್ತು ಪರಸ್ಪರ ಅವಲಂಬಿತ ಅದನ್ನು ಅರಿತು ಮನುಷ್ಯ ಬಾಳಿದರೆ ಅದು ಮುಂದಿನ ದಿನಗಳಿಗೆ ಒಳಿತು…. ಡಾ/ನಟರಾಜ್ ಆರ್ಯ ರವರು ಹೆಚ್ಚು ಹೆಚ್ಚು ಕವಿತೆ ನಮಗೆಲ್ಲ ಉಣಬಡಿಸಿ.
ಕೊಡಚಾದ್ರಿ ಕವನದ ಪದಪುಂಜಗಳ ಜೋಡಣೆ ಅದ್ಭುತ ಕೊಡಚಾದ್ರಿಯ ಸೊಬಗು ಭಿನ್ನಾಣ
ಕೊಡಚಾದ್ರಿ ಕವನದಲ್ಲಿನ ಪದಪುಂಜಗಳ ಜೋಡಣೆ ಅದ್ವಿತೀಯ. ಕೊಡಚಾದ್ರಿಯನ್ನು ಹೆಣ್ಣಿಗೆ ಹೋಲಿಸಿ ಬರೆದಿರುವ ಕವಿತೆ ಶ್ಲಾಘನೀಯ, ನೋವಿನಲ್ಲಿ ಸನಿಹ ಇರುವ ಸವಿ, ಮೋಡ ಮುತ್ತಿಡುವ ಕಲ್ಪನೆ, ಇದು ಚಾರಣವಲ್ಲ ಪ್ರೇಮಯಾನ, ಇವೆಲ್ಲವೂ ಬೆರಗು ಮೂಡಿಸುವ ಪರಿ ನಿಜಕ್ಕೂ ಮನದಲ್ಲೂ ಉಳಿಯುವಂತದ್ದು.
“ಕೊಡಚಾದ್ರಿ” ಕವನದಲ್ಲಿ ಕವಿಯ ವರ್ಣನಾ ಶಕ್ತಿ ಕೊಡಚಾದ್ರಿಯಷ್ಟೇ ಉತ್ತುಂಗಕ್ಕೇರಿದೆ.. ಕೊಡಚಾದ್ರಿಯ ಸೊಬಗು ಮತ್ತು ಅಪರಿಮಿತ ನೇಸರದ ನೋಟದ ವಿವರಣೆ ಓದುಗನ ಮುಂದೆ ನೇಸರದ ನಾಟ್ಯ ತರುವುದಂತೂ ಅಚ್ಚರಿಯಲ್ಲ…
ಈ ಕವಿಯ ಇಂತಹ ಅಭಿವ್ಯಕ್ತಿ ಕವನಗಳು ಇನ್ನೂ ಹೆಚ್ಚು ಬರಲೆಂದು ಶುಭಾಷಯಗಳು
ನೀನು ಆಧ್ಯಾತ್ಮ
ನೀ
ನೀನು ಆಧ್ಯಾತ್ಮ
ನೀನು ಆಕಾಂಕ್ಷೆ
ನೀನು ಶಿಖರ
ನೀನು ಶೃಂಗಾರ
ಈ ನಾಲ್ಕು ಸಾಲುಗಳು ಇಡೀ ಕವನದ ಜೀವ ಸಾರ.
ಪ್ರಕೃತಿ ಅದ್ಭುತ, ಪ್ರಕೃತಿಯೊಳಗೆ ಒಂದಾಗಿ ಬದುಕುವ ಆನಂದ ಇನ್ನೂ ಅದ್ಭುತ. ಕೊಡಚಾದ್ರಿಯಂತಹ ಸುಂದರ ಸ್ಥಳದ ಬಗ್ಗೆ
ಡಾ. ನಟರಾಜ್ ಅನುಭವಿಸಿ ಬರೆದಿರುವ ಕವನ ರಮ್ಯವಾಗಿ ಮೂಡಿ ಬಂದಿದೆ.
ತನ್ನ ಕೆಲಸದ ಒತ್ತಡದ ನಡುವೆಯೂ ಕೊಡಚಾದ್ರಿಗೆ ಭೇಟಿ ನೀಡಿ ಆ ಅನುಭವಕ್ಕೆ ಕವನದ ರೂಪ ನೀಡಿರುವ ಶ್ರೀ ನಟರಾಜ್ ಅವರ ಪ್ರಯತ್ನ ಶ್ಲಾಘನೀಯ.
ಶ್ರೀ ನಟರಾಜ್ ಅವರಿಂದ ಇನ್ನಷ್ಟು ಅತ್ಯುತ್ತಮ ಕವನಗಳು ಮೂಡಿ ಬರಲಿ ಎಂಬ ಹಾರೈಕೆಯೊಂದಿಗೆ.
“When honesty turns into poetry.”
While reading it, it really felt like you were speaking from the heart….
The words are simple, but the feelings behind them are very deep
Every line makes us stop and think about life and ourselves…
You’ve written it very honestly, and that honesty is what makes it special….
Keep writing like this. Wishing you all the very best for many more such poems. ✨
ಹೆಣ್ಣು ಮತ್ತು ಕೊಡಚಾದ್ರಿಯ ಒಂದು ತುಲನಾತ್ಮಕ ಅಂಶ ಎಷ್ಟು ವಿಶೇಷ ಹಾಗೂ ಹೊಸ ನವಿರನ್ನು ಹೊಂದಿದೆ.
Dr ನಟರಾಜ್ ರವರ ಈ ಕಾವ್ಯಾತ್ಮಕ personalty ನನಗೆ ಹೊಸದು ಆದರೆ ಓದಿದಾಗ ನನಗೆ ಪಳಗಿದ ಕೈ ಎಂದು ತಿಳಿಸುತ್ತದೆ.
ತಮಗೆ ನನ್ನ ಅಭಿನಂದನೆಗಳು.
ಕಾವ್ಯಲೋಕಕ್ಕೆ ಸ್ವಾಗತ .
Describing nature kodachadri is immense in ur lyrics and beautiful words on nature very nice bro. We are looking forward this kind of nature creation…..thank you
ನಟರಾಜ್ ಸರ್ ಮೊದಲು ತಮಗೆ ಅಭಿನಂದನೆಗಳು ತಮ್ಮಲ್ಲೂ ಇಷ್ಟು ಒಳ್ಳೆ ಕವಿ ಇದ್ದಾನೆಬುದು ನಮಗೆಲ್ಲ ತಿಳಿದೇ ಇರಲಿಲ್ಲ ನೀವು ಕೆಲ್ಸದಲ್ಲಿ ಎಷ್ಟು ಪ್ರಾಮಾಣಿಕರೋ ಅಷ್ಟೇ ನಿಮ್ಮ ಕವಿತೆಯಲ್ಲೂ ತೋರಿಸುತ್ತದೆ ನೀವು ಕೊಡಚಾದ್ರಿ ವರ್ಣಿಸಿದ ರೀತಿಗೆ ಒಂದು ಬಾರಿ ನಾವು ಅಲ್ಲೇ ಇದ್ದ ಅನುಭವ ಮತ್ತೆ ಮತ್ತೆ ಕೊಡಚಾದ್ರಿ ನೋಡಬೇಕು ಎಂದೇನಿಸುವ ಮನದ ಪುಳಕ ನಿಮ್ಮ ಪದ್ಯ ದಲ್ಲೇ ಕಾಣುತ್ತದೆ ನೀವು ಬಳ್ಸಿರುವ ಪ್ರತಿ ಪದವು ಅತ್ಯದ್ಭುತ ನಿಮಗೆ ಹಾಗೂ ನಿಮ್ಮ ಕಾವ್ಯ ದ ಬಗ್ಗೆ ಮಾತಾಡಿದರೆ ಅತಿಶಯೋಕ್ತಿ ಎನ್ನಿಸಬಹುದು ನಿಮಗೆ ನೀವೇ ಸಾಟಿ ಆ ರಾಘವೇಂದ್ರ ಸ್ವಾಮಿ ನಿಮಗೆ ಇನ್ನು ಹೆಚ್ಚಿನ ಚೈತನ್ಯ ನೀಡಲಿ ಎಂದು ಕೇಳಿಕೊಳ್ಳುತ್ತಾ ನೀವು ಒಪ್ಪಿಗೆ ಕೊಟ್ಟಲ್ಲಿ ನಿಮ್ಮ ಕಾವ್ಯವನ್ನು ಒಂದು ಪುಸ್ತಕ ರೂಪದಲ್ಲಿ ಹೊರತರರು ನಾನು ಸಿದ್ಧ ನಿಮ್ಮ ಅನುಮತಿಯನ್ನು ನಿರೀಕ್ಷಿಸುತ್ತಿರುವ ಇಂತಿ ನಿಮ್ಮ ಅಭಿಮಾನಿ ಗುರುದತ್ ಕುಲಕರ್ಣಿ
Superb Anna
ನಟರಾಜ್ ಸರ್, ನಿಮ್ಮ ಅದ್ಭುತ ಕವಿತೆಯಲ್ಲಿ ಕೊಡಚಾದ್ರಿ ಬೆಟ್ಟವನ್ನು ಅತ್ಯಂತ ಮನಮೋಹಕವಾಗಿ ಹಾಗೂ ಜೀವಂತವಾಗಿ ವರ್ಣಿಸಿದ್ದೀರಿ. ನಿಮ್ಮ ಕವನ ಓದಿದಾಗ ಕೊಡಚಾದ್ರಿಯ ಸೌಂದರ್ಯ ಕಣ್ಣೆದುರಿಗೇ ಮೂಡಿಬರುತ್ತದೆ. ನಿಮ್ಮ ಕಾವ್ಯಶೈಲಿ ನಿಜಕ್ಕೂ ಅತ್ಯಂತ ಅದ್ಭುತವಾಗಿದೆ.
ಸತೀಶ್
ನನ್ನ ಕವನವನ್ನು ಓದಿ ಸದಾಭಿಪ್ರಾಯಗಳನ್ನು ವ್ಯಕ್ತಪಡಿಸಿದ ಎಲ್ಲಾ ಸಹೃದಯರಿಗೆ ಹಾಗೂ ಕವನವನ್ನು ಪ್ರಕಟಿಸಿದ ಸಂಗಾತಿ ಪತ್ರಿಕೆಯ ಸಂಪಾದಕ ಮಂಡಳಿಗೂ ನನ್ನ ಗೌರವದ ನಮಸ್ಕಾರಗಳು.
ಡಾ. ಹೆಚ್. ನಟರಾಜ್ ಆರ್ಯ
ಸರ್ ನೀವು ಬರೆದಿರುವ ಕವಿತೆಯ ಪ್ರತಿಯೊಂದು ಸಾಲುಗಳು ಹೃದಯಸ್ಪರ್ಶಿಯಾಗಿದೆ. ಸ್ವತಃ ಪ್ರಕೃತಿಯೇ ತನ್ನ ಬಗ್ಗೆ ಬರೆದಿರುವಂತಿದೆ. ಹೀಗೆಯೇ ನೀವು ಮುಂದೆಯೂ ಸಹ ಸ್ವಯಂ ಪ್ರೇರಣೆಯಿಂದ ಬರೆಯುವಂತಾಗಲಿ.
ನಮಸ್ಕಾರ,
ಮುರಳಿ.
ಶ್ರೀ ಯುತರ ಕವಿತೆ ಅವರು ಪರಿಸರದ ಬಗ್ಗೆ ಹೊಂದಿರುವ ಕಾಳಜಿ ಯನ್ನು ವ್ಯಕ್ತಪಡಿಸುತ್ತದೆ. ತಮ್ಮ ಬಿಡುವಿಲ್ಲದ ವೇಳೆಯಲ್ಲಿಯೂ ಸಹ ಕವಿತೆ ಬರೆಯುವ ಅವರ ಹುಮ್ಮಸ್ಸು ಅವರ ಪ್ರತಿಭೆಗೆ ಕೈಹಿಡಿದ ಕೈಗನ್ನಡಿಯಾಗಿದೆ. ಸರ್ ಇದೇ ರೀತಿಯ ಬರಹ ಗಳು ಹೆಚ್ಚು ಹೆಚ್ಚು ಮೂಡಿ ಬರಲಿ ಯುವ ಪ್ರತಿಭೆ ಗಳಿಗೆ ಪ್ರೇರಣೆ ಯಾಗಲಿ ಸರ್ ಅಭಿನಂದನೆಗಳು ಸರ್ – ಪಾತರಾಜು. ವಿ