ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಬಹುಮಾನ”


ಸದ್ದು ಗದ್ದಲವಿಲ್ಲದ
ಪ್ರಸಿದ್ಧಿ ಪ್ರಚಾರವಿಲ್ಲದ
ಗಟ್ಟಿ ಜೀವ
ಹಲವು ಕನಸು
ನಿತ್ಯ ಪಯಣ
ಹೆಜ್ಜೆ ಹಾಕುವುದು
ನಿಂತಿಲ್ಲ
ಸೋಲೋ ಗೆಲುವೋ
ಗೊತ್ತಿಲ್ಲ
ಅಳುಕು ಆತಂಕ
ಆನಂದ ಐಸಿರಿ
ಎಲ್ಲವೂ ವಿಧಿಯಾಟ
ನಡೆದ ದಾರಿಯ
ಶ್ರಮ ದೂರ
ಸಂತೃಪ್ತಿ ಮೌನ
ನನ್ನ ನಿನ್ನಯ
ಪ್ರೀತಿ ಬಹುಮಾನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಅಬ್ಬಾ ಹೃದಯ ತಟ್ಟುತ್ತಿದೆ ನಿಮ್ಮ ಕವನ
ಅರ್ಥಪೂರ್ಣ ಕಾವ್ಯ ಸರ್