ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಪ್ರೀತಿ ಎಂದರೆ
ಪ್ರದರ್ಶನವಲ್ಲ
ಪರಸ್ಪರ ಸ್ಪಂದಿಸುವುದು
ಬಾಂಧವ್ಯ ಎಂದರೆ
ಬಯಸುವದಲ್ಲ
ಬೆಸೆಯುವುದು
ಸಂತಸ ಎಂದರೆ
ಬರೀ ಸುಖವಲ್ಲ
ಸವಿಯುವುದು
ಭಾವನೆಗಳು ಎಂದರೆ
 ಬಳಸಿಕೊಳ್ಳುವುದಲ್ಲ
ಭರವಸೆ ಹುಟ್ಟಿಸುವುದು
ಕನಸುಗಳು ಎಂದರೆ
ಕಾಣುವದಲ್ಲ
ನನಸಾಗಿಸುವುದು
ನೆನಪುಗಳು ಎಂದರೆ
ಮಾಸುವದಲ್ಲ
ಆರಾಧಿಸುವುದು
ಬದುಕು ಎಂದರೆ
ಜೀವಿಸುವದಲ್ಲ
ಸುಂದರಗೊಳಿಸುವುದು
ಪ್ರೇಮಾಂತರಂಗದ
ನಿನ್ನೊಲುಮೆಗೆ
ಕಟ್ಟುವೆ ತೋರಣ
ನಿನ್ನಾಗಮನ ಎನಗೆ
ಸಹ್ಯಾದ್ರಿ ಚಾರಣ


About The Author

1 thought on “ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಕವಿತೆ”ಪ್ರೀತಿ ಎಂದರೆ””

Leave a Reply

You cannot copy content of this page

Scroll to Top