ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೂವೆಂದು ಕೈಗೆತ್ತಿಕೊಂಡೆ ಮುಳ್ಳಾಗಿ ಚುಚ್ಚಿತು
ಬಳ್ಳಿಯೆಂದು ನೀರೆರೆದೆ ಹಾವಾಗಿ ಮೇಲೆರಗಿತು!!

ಹೇಗೆ ತೋರಲಿ? ಹಸಿಯಾದ ಹೃದಯದ ಗಾಯವನು
ಕರುಣೆಗಾಗಿ ಕೈಮುಗಿದೆ ಕಠೋರವಾಗಿ ಎದೆಗಿರಿಯಿತು!!

ನಂಬಿಸಿ ಅನಾಯಾಸವಾಗಿ ಗಿಚ್ಚಬಹುದೇ ಹೀಗೆ ಮುತ್ತಿಟ್ಟು

ಕೆನ್ನೆಯನು,ಗಲ್ಲವನು ಜೋರಾಗಿ ಕಿರುಚಿ ಹೇಳಿದೆ..ಕಿವುಡಾಗಿ ಕಚ್ಚಿತು!!

ಮಾಯಾವಿ ಮಾತುಗಳು ಮನಸ್ಸಿಗಿಳಿದವು..
ಈ ಯುದ್ಧ ಸಾಕು ಬೇಡವೆಂದೇ,ಮೋಹವಾಗಿ ಪಾಶವಾಯ್ತು!!

ದೀಪಾವಳಿಯ ರಾತ್ರಿ ಕತ್ತಲೆಯಿತ್ತು..
ಬೆಳಕಿನ ಜೊತೆ ಸರಸಬೇಡವೆಂದೇ..ಬೀಜವಾಗಿ  ಸಸಿಯಾಯಿತು!!

ಬಾಳ ಕದ್ದವನಿನ್ನೂ ಸಿಕ್ಕಿಬಿದ್ದಿಲ್ಲಾ,,ಬಗಲಲ್ಲಿ ಕಂದ ನಗುತ್ತಿಲ್ಲಾ
ಹುಡುಕಾಡಿದೆ ಬದುಕೇ ಮರಳುಗಾಡಾಗಿ ಭಾಸವಾಯ್ತು!!

ಮರುಕವಷ್ಟೇ ಹುಟ್ಟೀತು,ನಷ್ಟವನು ಯಾವುದರಿಂದ ತುಂಬಲಿ ಜಯ?
ಅಮೃತವೆಂದು ಸೇವಿಸಿದೆ ವಿಷವಾಗಿ ಕೊಂದಿತು!!


About The Author

Leave a Reply

You cannot copy content of this page

Scroll to Top