ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಬದುಕಿನ ಯಾವುದೋ
ಮೂಲೆಯಲ್ಲಿ ಅಡಗಿದ್ದ ಸಂತಸಕ್ಕೆ
ಹಿಗ್ಗೋ ಹಿಗ್ಗು!
ಯಾರ ಕೈಗೂ ಸಿಗದ ಹಾಗೆ
ಕದ್ದು ಕುಳಿತು ಬೀಗುತಿತ್ತು!
ದುಃಖವೊಂದು ಸುಖವನರಸಿ
ಹಿಂಬಾಲಿಸುತ್ತಿತ್ತು
ನಗುವಿಗೆ ನೋವಿನ ಕಡಿವಾಣವಿತ್ತು
ನಗುವ ಕಿತ್ತುಕೊಂಡ ನೋವಿಗೆ
ಹಬ್ಬದ ಸಂಭ್ರಮ!
ನೋವಿಗೆ ನಗುವಿನ ಬಯಕೆ
ದುಃಖಕೆ ಸುಖದ ಕನಸು
ಬಿಟ್ಟೂ ಬಿಡಲಾಗದ ಸಖ್ಯ!!
ಅವ್ಯಕ್ತ ಭಾವವೊಂದು ಸದಾ
ಕಾಡುವಾಗ ನೆಮ್ಮದಿಗೆಲ್ಲಿ ತಾಣ?
ಅಂತರಂಗದ ವೇದಿಕೆಯಲಿ
ನೊವು-ನಲಿವು, ಸುಖ-ದುಃಖಗಳ
ಭೂತದ ಕೋಲಗಳ ಕುಣಿತ
ನಡುವೆಯೇ ಸಜ್ಜಾಯಿತು
ಜಗದ ವ್ಯಾಪಾರಕೆ
ನಗುವಿನ ಮುಖವಾಡ!


About The Author

Leave a Reply

You cannot copy content of this page

Scroll to Top