ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಪ್ರೇಮಲೋಕ.”


ಇವತ್ತು ಪ್ರೇಮಿಗಳ…
ಪ್ರೇಮ ಲಹರಿ ಎಲ್ಲೆಡೆಯು
ಸಡಗರದ ಸಂಭ್ರಮೋತ್ಸವವು,!
ಅದೇನೊ ಪ್ರೀತಿ…
ಉಲ್ಲಾಸ ಯೌವನ ರಸಮಯ
ಪ್ರೇಮ ಲೋಕದ ಸ್ನೇಹ ಸಾಗರವು,!
ಪ್ರೇಮಾಂಕುರದಲಿ….
ಅದೇ ಪ್ರೀತಿ, ವೇಷ, ಪೋಷಾಕು
ಕಾದಿರಲು ಬಯಸಿ ನಿನ್ನ ಆಗಮನವು,!
ಕೈಯಲ್ಲೊಂದು ಗುಲಾಬಿ…
ಬರುವಿಕೆಯ ದಾರಿ ನೋಡುತ್ತ
ಕಾದಿರಲು ಪ್ರಿಯೆ,ಈ ತನುಮನವು,!
ಬಂದು ಬಿಡು ಓ ಗೆಳತಿ…
ಈ ದಿನವ ಅರ್ಥಪೂರ್ಣಗೊಳಿಸು
ಅಮರವಾಗಿರಲಿ ಪ್ರೀತಿ ಅನುದಿನವು.!
ಹಮೀದ್ ಹಸನ್ ಮಾಡೂರು



