ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

*ಪ್ರೀತಿಸಲು ಉಂಟೆ *

ಪ್ರಣಯ- ಪ್ರೀತಿ- ಪ್ರೇಮ
ಇದೇಲ್ಲ ಹೃದಯ ಮರ್ಮ
ಎರಡು ಆತ್ಮಒಂದಾಗುವ ಧರ್ಮ

ಕೃಷ್ಣನು ಬೀಸಿದ ಬಾನಿನ
ಗಾಳಿಯಲಿ ರಾಧೆ ಉಸಿರಿನ
ಪ್ರೇಮ ಗೀತೆ -ಅಮರ ಕಥನ

ಅಕ್ಕನ ಅರ್ಪಣೆ ಕಥನದಿ
ಒಂದಾದಳು ಶಿವನ ಚರಣದಿ
ಸಾವಿಲ್ಲದ ರೂಪಿಲ್ಲ ಗಂಡನಡಿ

ಮೀರಾಳು ತ್ಯಜಿಸಿದ ನಡೆ
ಹಾಡಿ ಹೊರಟಳು ಕೃಷ್ಣನಡೆ
ವಿಷನುಂಗಿ ಮುಟ್ಟಿದ ಪ್ರೇಮದಡೆ

ಶಿವನು ಪಾರ್ವತಿಗೆ ಅರ್ಪಿಸಿದ್ದೇ
ತನುಮನ  ವರ್ಣಸಲಾದಿತ್ತೇ
ಕಾಲ್ಪನಿಕ ಎನಿತು ಅನ್ನಲಾಗದು….

ಪ್ರೀತಿಸು ಪ್ರೀತಿಸು ಎನ್ನಲು
ಪ್ರೀತಿ ಹೇಳಿ ಕೇಳಿ ಹುಟ್ಟುಲು-
ಅದು ಋಣಾನುಬಂಧ ಕಾಣು

ಕೇಳಿದರೆ ಕೊಡುವ ಬೇಡಿದರೆ
ನೀಡುವ ಪಡಿ ಪದಾರ್ಥವಾದರೆ
ಪ್ರೇಮ ಭ್ರಮೆ ಪ್ರಮೇಯಾದರೆ

 ಪ್ರೀತಿಯು ಹೇಳ ತಿರದ  ಅಂತ
ರಂಗದೈಸಿರಿ  ಅಮೋಘ ಅನಂತ
ಅಜಯ ಅಜರಾಮರ ಅನುಪಮ

ಕೊಡುವುದೇ ಪ್ರೀತಿಯ ಧರ್ಮ
ಮರಳಿ ಪಡೆಯುವ ಆಸೆ ಆರ್ಮಿ
ಎಲ್ಲಾ ಸೀಮೆ ದಾಟಿ ನಿಸ್ಸೀಮ ಕರ್ಮ

ಪ್ರೇಮ ತಿರುತುರುಗಿ ಸುತ್ತಿ ಸುಳಿದು
ಮತ್ತೆ ಅಲ್ಲೇ ಬಂದು ನಿಲುವ ಪ್ರೇಮ
ಪ್ರೀತಿಸಿದ ಹೃದಯದತ  ಪಯಣವು

ನಾವು ಮನಸಾರೆ ಪ್ರೇಮಿಸುವರು
ತಿರುಗಿ ಪ್ರೀತಿಸದಿರಲಿ ಬಿಡಲಿ
ನಿಜ  ಪ್ರೇಮ ಅವರ ನೆರಳಲಿ

ಬಲೆಯುತ ಬೆಳೆಯುತ ಪ್ರೇಮಿಸುತ
ಅವರ ಖುಷಿಯಲಿ ತಾನು ಸಂತೈಸುತ
ಅದೆಲ್ಲಿಯಾದರೂ  ನೀನು ಬಾಳು….

 ನಾನು ಮಾತ್ರ ನನ್ನ ಹೃದಯದ
ತಂಪು ಇಂಪಿನಲಿ ಹುದಿಗಿಹುದು
ಎನ್ನ ಮನ ಸಿಂಚನಗೊಂಡಿಹದು

 ನಿನ್ನಲೇ .ನನ್ನ ಪ್ರಾಣ ಜೀವದ ಜೀವ
 ನೀನೇ ಎನ್ನ  ಆತ್ಮಕ್ಕೆ ಆಧಾರ ಜವ
ನನ್ನ ಆಸ್ತಿ ಪಾಸ್ತಿ ಎಲ್ಲವೂ ನೀನೆ

“ನನ್ನ ಅಸ್ತಿತ್ವಕ್ಕೆ ನೀನೇ ಕಾರಣ
ನೀನೇ ವಿಮಲ ಪ್ರೀತಿಯ ದ್ಯೋತಕ”

ಅಂತ ಯಾರಲ್ಲಿ ಅನ್ನಿಸುವುದು ಅದು ನಿಜವಾದ ಪ್ರೀತಿ


ಸವಿತಾ ದೇಶಮುಖ

About The Author

2 thoughts on “ಸವಿತಾ ದೇಶಮುಖ ಅವರ ಕವಿತೆ “ಪ್ರೀತಿಸಲು ಉಂಟೆ””

Leave a Reply

You cannot copy content of this page

Scroll to Top