ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಪ್ಪತ್ತು ವರ್ಷಗಳ ಹಿಂದೆ

ಒಂದು ಸ್ನೇಹದ ಕೂಟದಲ್ಲಿ
ಸ್ನೇಹವೆಂಬ ಬಣ್ಣದ ವಿಷ
ಸ್ನೇಹದ ಲೇಪ ಹಚ್ಚಿದ ಒಮ್ಮೆಗಿನ ಮಾತುಕತೆ –
ಅದು ಮಾತುಕತೆ ಅಲ್ಲ
ಮರೆಯಾಗದ ಗಾಯಕ್ಕೆ ಸವರಿದ ಉಪ್ಪು

ಕಣ್ಣುಗಳಲ್ಲಿ ಸುಳಿದಾಡಿದ ಸುಡಿಗುಂಡಿಗಳು

ಹತ್ತು ವರ್ಷಗಳ ಹಿಂದೆ
ಒಂದು ಮದುವೆ ಮಂಟಪದಲ್ಲಿ
ಮದುವೆಯ ಸಂಭ್ರಮ ತುಟಿಗಳ ನಗುವಾದಾಗ
ಸ್ನೇಹದ ನಗುವಿನೊಂದಿಗೆ ಒಮ್ಮೆಗಿನ ಮಾತುಕತೆ
ಅದು ಮಾತುಕತೆ ಅಲ್ಲ
ವಾಸಿಯಾದ ಪುಣ್ಣಿನ ಮೇಲೆ  ಕಾರದ ಮಳೆ

ಐದು ವರ್ಷಗಳ ಹಿಂದೆ ಬಜಾರಿನಲ್ಲಿ
ಹರಟೆಗಳ ಗಾಳಿಪಟಗಳನ್ನು ಹಾರಿಸುತ್ತಿದ್ದಾಗ
ಗಾಳಿಯ ಹೊಡೆತದಂತೆ ಒಮ್ಮೆಗಿನ ಮಾತುಕತೆ
ಅದು ಮಾತುಕತೆ ಅಲ್ಲ
ಪಟಕ್ಕನೆ ಮಂಜಾ ದಾರಿಯನ್ನು ಕತ್ತರಿಸಿ
ಕುತ್ತಿಗೆಗೆ ಸುತ್ತಿದ ವಿಷದ ನಗು

ನಿನ್ನೆ ಮೊನ್ನೆಯ ರಾತ್ರಿ
ಕನಸಿನಲ್ಲಿ ಕಣ್ಣು ಮುಚ್ಚಲೊಡನೆ
ಕರೆ ಮಾಡಿ ಬಂದು
ಕುನಿಯುತ್ತಿದ್ದ ಕನಸುಗಳನ್ನು
ನೆಟ್ಟಗೆ ಸುಟ್ಟುಹಾಕಿತು
ಅವಳು ಯಾರೇ ಆಗಿರಲಿ;
ಸ್ನೇಹದ ಲೇಪ ಹಚ್ಚಿದ ಕಟುವಾದ ಮುಳ್ಳಿನಿಂದ
ಗುಣವಾಗುತ್ತಿದ್ದ ಹೃದಯಗಾಯವನ್ನು ಕೆದಕಿದಾಗ
ಆ ಕಣ್ಣುಗಳಲ್ಲಿ ಎಷ್ಟು ಮಿನುಗು!
ಅವಳೋ  ಅಥವಾ ಅವನೋ  ಯಾರಾದರೇನು?
ನಮ್ಮ ಸುತ್ತಲೂ ಅಂಥವರು ಎಷ್ಟು ಜನವೋ!


About The Author

Leave a Reply

You cannot copy content of this page

Scroll to Top