ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ಸಾಗಿದ ದಾರಿಯು ಸುಲಭವಾಗಿ ಇರಲಿಲ್ಲ ಗಾಲಿಬ್
ನಿನ್ನ ಮನದ ತೊಳಲಾಟ ಸರಳವಾಗಿ ಇರಲಿಲ್ಲ ಗಾಲಿಬ್

ಕಂಬನಿಯಲೂ ಗಜಲ್ ರಚಿಸಿದ ಮಹಾ ಕಲಾಕಾರ ನೀನು
ಅಶಾಂತಿಯಲಿ ಬದುಕು ಸುಂದರವಾಗಿ ಇರಲಿಲ್ಲ ಗಾಲಿಬ್

ವ್ಯಥೆಯೊಳಗೆ ವ್ಯಂಗ್ಯವಿಟ್ಟು ನಕ್ಕ ಪರಿ ನಾ ಮರೆಯಲಿ ಹೇಗೆ
ಹೊರ ಜಗತ್ತಿಗೆ ನಿನ್ನ ನಗು ಸಹಜವಾಗಿ ಇರಲಿಲ್ಲ ಗಾಲಿಬ್

ಮಲ್ಲಿಗೆಯ ಸುಮ ಕಾಯುತಲೆ ಇತ್ತು ಅವಸರ ಮಾಡಿದೆ
ಎದೆಯಲಿ ನೀನಿಟ್ಟ ಹೆಜ್ಜೆ ನಿಧಾನವಾಗಿ ಇರಲಿಲ್ಲ ಗಾಲಿಬ್

ಮರಣವನ್ನೂ ಮೀರಿದ ಚಿರಂಜೀವಿ ನೀ ಮಲ್ಲಿ ಮನದಲಿ
ನೀ ನಡೆಸಿದ ಹೋರಾಟ ಖಚಿತವಾಗಿ ಇರಲಿಲ್ಲ ಗಾಲಿಬ್


About The Author

Leave a Reply

You cannot copy content of this page

Scroll to Top