ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಲ ತಡೆಗೋಡೆ ಕಟ್ಟದು ಒಲವಿನ ಮಳೆ ಜಿನುಗಲು ಒಲವರಸಿ
ಯಾರಿಗೂ ಆಗದು ಮಲ್ಲಿಗೆ ಸುಮ ಕಂಪು ತಡೆಯಲು ಒಲವರಸಿ

ನಿನ್ನ ರೂಪವು ಪ್ರೇಮಾಲಯ ನಿರ್ಮಿಸಿ ಯುಗಳ ಗೀತೆ ಹಾಡುತಿದೆ
ಅನುದಿನ ಕಾಯುವೆ ನಿನ್ನ ಚೆಲುವಿನ ಪುಟ ತಿರುವಲು ಒಲವರಸಿ

ಆರುಮೆ ಅಂಗಳದಲಿ ಪೂಜಿಸುವೆನು ಮನದುಂಬಿ ದೀಪ ಬೆಳಗುತ
ಭಾವದೀಪ್ತಿಯು ಕೆಂಪೇರುತದೆ ನಿನ್ನಧರಗಳು ಚದುರಲು ಒಲವರಸಿ

ತನು ಮನ ಮಿಥುನಕೆ ಹಂಬಲಿಸುತ ಕನಸಿನ ಗೋಪುರ ಕಟ್ಟುತಿದೆ
ನನ್ನ ಬೇಟೆಯಾಡು ವದನದ ಅಂಚು ಅಮೃತ ಸುರಿಸಲು ಒಲವರಸಿ

ಮಲ್ಲಿಯ ಉಸಿರಿನ ಉಷ್ಣವು ನಿನ್ನಲಿ ಬೆರೆಯಲು ಕನವರಿಸುತಿದೆ
ಆಲಂಗಿಸು ಬಾ ನನ್ನೆದೆಯ ರಸದೋಕುಳಿ ಎರಚಲು ಒಲವರಸಿ


About The Author

Leave a Reply

You cannot copy content of this page

Scroll to Top