ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
ಟಂಕಗಳು


ಬಣ್ಣ ಬಣ್ಣದ
ಚಿಟ್ಟೆಯಂತೆ ಮನವು
ಹೊಸತನಕೆ
ಸದಾ ಹಾತೊರೆವುದು
ಇರಲೆಮಗೆ ತಾಳ್ಮೆ
2)ಸಂಪತ್ತು
ನಗುಮೊಗವೇ
ವ್ಯಕ್ತಿತ್ವದ ಸಂಪತ್ತು
ನಗುನಗುತ
ನೋವು ನಲಿವ ನುಂಗಿ
ಬದುಕಬೇಕು ನಾವು
3)ಸುಪ್ರಭಾತ
ಬಾನಂಚಿನಲ್ಲಿ
ರವಿಯ ಹೊಂಗಿರಣ
ಉಷೆ ಮೂಡಲು
ಹಕ್ಕಿಗಳ ನಿನಾದ
ಸುಪ್ರಭಾತ ಕಿವಿಗೆ
4)ತುಂಗಭದ್ರ
ಕನ್ನಡ ನಾಡು
ನದಿಗಳ ಬೀಡಿದು
ತುಂಗಭದ್ರೆಯು
ಜೀವ ಜೀವದುಸಿರು
ಹಸಿರಧಾತೆ ಈಕೆ
5)ಸಂತೋಷ
ಸ್ವಾರ್ಥ ದುರಾಸೆ
ತೊರೆದರೆ ಮನುಜ
ನಿತ್ಯ ಸಂತೋಷಿ
ಆತ್ಮ ತೃಪ್ತಿಯೇ ಸುಖ
ಬದುಕು ಬಂಗಾರವು
ಮಧುಮಾಲತಿರುದ್ರೇಶ್




ತುಂಬು ಧನ್ಯವಾದಗಳು ತಮಗೆ
Super writing kavanagalu