ಕಾವ್ಯ ಸಂಗಾತಿ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ
“ಪ್ರೀತಿ ಎಂದರೆ”


ಪ್ರೀತಿ ಎಂದರೆ
ಪ್ರದರ್ಶನವಲ್ಲ
ಪರಸ್ಪರ ಸ್ಪಂದಿಸುವುದು
ಬಾಂಧವ್ಯ ಎಂದರೆ
ಬಯಸುವದಲ್ಲ
ಬೆಸೆಯುವುದು
ಸಂತಸ ಎಂದರೆ
ಬರೀ ಸುಖವಲ್ಲ
ಸವಿಯುವುದು
ಭಾವನೆಗಳು ಎಂದರೆ
ಬಳಸಿಕೊಳ್ಳುವುದಲ್ಲ
ಭರವಸೆ ಹುಟ್ಟಿಸುವುದು
ಕನಸುಗಳು ಎಂದರೆ
ಕಾಣುವದಲ್ಲ
ನನಸಾಗಿಸುವುದು
ನೆನಪುಗಳು ಎಂದರೆ
ಮಾಸುವದಲ್ಲ
ಆರಾಧಿಸುವುದು
ಬದುಕು ಎಂದರೆ
ಜೀವಿಸುವದಲ್ಲ
ಸುಂದರಗೊಳಿಸುವುದು
ಪ್ರೇಮಾಂತರಂಗದ
ನಿನ್ನೊಲುಮೆಗೆ
ಕಟ್ಟುವೆ ತೋರಣ
ನಿನ್ನಾಗಮನ ಎನಗೆ
ಸಹ್ಯಾದ್ರಿ ಚಾರಣ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ



