ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ್ ಅವರ ಕವಿತೆ
ನೀ ನನಗೆ ನಾ ನಿನಗೆ”


ದತ್ತ ಪದ :- ಪ್ರಿಯ ನೀ ನನಗಾಗಿ..
ಶೀರ್ಷಿಕೆ:- ನೀ ನನಗೆ ನಾ ನಿನಗೆ
ನಿನಗೆಂದೆ ಕಾಯ್ದು ಕುಳಿತೆ ಆ ಇರುಳಲಿ
ಮಾಮರವು ಜೊತೆಯಾಗಿ ಮೌನದಲಿ
ಬಂದೆ ಬರುವನೆಂಬ ಭರವಸೆ ಮನದಲಿ
ನೀ ಕೊಟ್ಟ ಮಾತು ನೆನೆದು ನಗುತಲಿ
ಪ್ರಿಯ ನೀ ನನಗಾಗಿ ಮೊಳ ಮಲ್ಲಿಗೆಯ
ತಂದೆ ತರವೆ ಎನ್ನುವ ಆಸೆಯ
ತರದೆ ಇದ್ದರೆ ತೋರೆ ನಾ ನಿರಾಸೆಯ
ಬಲ್ಲೆ ನಾ ನಿನ್ನ ಅಂತಃಕರಣದ ಪ್ರೀತಿಯ
ತೇಲಿದೆ ಮನ ನಿನ್ನ ನಾಮವ ಆಲಿಸೆ
ಹಾರಿದೆ ಹಕ್ಕಿಯಾಗಿ ಆಗಸ ಚುಂಬಿಸೆ
ಬಲ್ಲೆ ಏನು ಮಿಡಿವ ಹೃದಯದ ಒತ್ತಾಸೆ
ಆಗುವಾಸೆ ನಿನ್ನ ಮಡಿಲೊಳು ನಾ ನಿನ್ನ ಕೂಸೆ
ನೀ ನನಗೆ ನಾ ನಿನಗೆ ಜೊತೆಯಾಗುವ
ದುಂಬಿಯಂತಾಗಿ ಮಕರಂದ ಹೀರುವ
ಹೊಸೆದು ಬೆಸೆಯೋಣ ಮಧುರ ಬಂಧವ
ಬೆರೆಯೋಣ ಮರೆತು ಈ ಜಗವ.
ಕಲ್ಪನಾ ಎಸ್ ಪಾಟೀಲ



