ಹಿರಿಯರ ಸಂಗಾತಿ
ಗೊರೂರು ವಸಂತಿ ಮೂರ್ತಿ (ಕೆನಡಾ)
ಗೊರೂರುರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ
ಕನ್ನಡದ ಶ್ರೇಷ್ಠ ಕವಿ ನಿಸ್ಸಾರ್ ಅಹ್ಮದ್
ಮತ್ತು ಹಿರಿಯ ಸಾಹಿತ್ಯ ದಿಗ್ಗಜರಾದ
ಗೊರೂರು ರಾಮಸ್ವಾಮಿ ಅಯ್ಯಂಗಾರ್
ನಡುವಿನ ಸೌಜನ್ಯ ತುಂಬಿದ ಸ್ನೇಹ”
ಒಂದು ನೆನಪು,



ಈ ದಿನ ಶ್ರೀ ನಿಸ್ಸಾರ್ ಅಹ್ಮದ್ ಅವರ ಜನ್ಮದಿನೋತ್ಸವ. ಅವರು 1936 ಫೆಬ್ರವರಿ 5 ನೆಯ ತಾರೀಕು ಜನಿಸಿದರು. ಕರ್ನಾಟಕದಲ್ಲಿ ಅವರ ಹೆಸರನ್ನು ಕೇಳದವರು ಯಾರಿದ್ದಾರೆ? ಅವರು ನನ್ನ ತಂದೆ Dr. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸ್ನೇಹಿತರು . ಆ ಸ್ನೇಹ, ಸೌಜನ್ಯದಿಂದ ತುಂಬಿದ ಸ್ನೇಹ. ಒಮ್ಮೆ ನಿಸ್ಸಾರ್ ಅಹ್ಮದ್ ಅವರು ನಮ್ಮ ಬೆಂಗಳೂರಿನ ರಾಜಾಜಿನಗರದ ಮನೆಗೆ ಬೆಂಗಳೂರು ಆಕಾಶವಾಣಿಯ ಪರವಾಗಿ ಬಂದು ನಮ್ಮ ತಂದೆಯವರ ಸಂದರ್ಶನವನ್ನು ಧ್ವನಿಮುದ್ರಣ ಮೂಲಕ ಮಾಡಿದರು. ಈ ಸಂದರ್ಶನ ಇಂದಿಗೂ ಯು ಟ್ಯೂಬ್ನಲ್ಲಿ ದೊರೆಯುತ್ತದೆ. ಕನ್ನಡ ಸಾಹಿತ್ಯದ ದಿಗ್ಗಜರು ಕುಳಿತು ಮಾತನಾಡಿರುವ ಅಪೂರ್ವ ಸಂದರ್ಭ. ಈ ಸಂದರ್ಶನವನ್ನು ನೋಡಿದವರಿಗೆ ಅವರಿಬ್ಬರಲ್ಲಿರುವ ಪರಸ್ಪರ ಗೌರವ ತಾನೇತಾನಾಗಿ ವ್ಯಕ್ತ ವಾಗುತ್ತದೆ. ಆ ಸಂದರ್ಶನದ ಲಿಂಕ್ ಇಲ್ಲಿದೆ. ಒತ್ತಿ ಕೇಳಬಹುದು.
https://youtu.be/KYBBBtwaJ7Q?si=UJ3FFcw4dsoSlNsy.
ಶ್ರೀ ನಿಸ್ಸಾರ್ ಅವರ ಉತ್ತಮ ಸಾಹಿತ್ಯ. ಕವನಗಳಿಗೆ ಅನೇಕ ಬಿರುದು, ಪ್ರಶಂಸೆ ಹಾಗೂ ಬಹುಮಾನಗಳು ಸಂದಿವೆ. ಅವರ ನಿತ್ಯೋತ್ಸವದ ಧ್ವನಿಮುದ್ರಣವಂತೂ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿದೆ. ಅವರು ನಿಧನರಾದುದು 2020 May 3 ನೆಯ ತಾರೀಕು. ಆದಿನ ಅನೇಕ ಲೇಖಕರು, ಅಭಿಮಾನಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಆದ ತುಂಬಲಾರದ ನಷ್ಟವನ್ನು ಕುರಿತು ಬರೆದರು. ಆ ಸಮಯದಲ್ಲಿ ಕನ್ನಡ ಓದಲು ಮತ್ತು ಬರೆಯಲು ತಿಳಿಯದ ನನ್ನ ಕೆಲವು ಸ್ನೇಹಿತರಿಗಾಗಿ ನಾನು ನಿಸ್ಸಾರ್ ಅಹ್ಮದ್ ಅವರ ಒಂದು ಖ್ಯಾತ ಪದ್ಯವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದೆ. ಅ ಪದ್ಯದ ಹೆಸರು:
ನಿಮ್ಮೊಡನಿದ್ದರೂ ನಿಮ್ಮಂತಾಗದೇ
ಕನ್ನಡ ಮೂಲ:
ನಿಮ್ಮೊಡನಿದ್ದೂ ನಿಮ್ಮಂತಾಗದೆ
ಸಾಹಿತ್ಯ : ಪ್ರೊ. ಕೆ ಎಸ್ ನಿಸಾರ್ ಅಹಮದ್.
ನಿಮ್ಮೊಡನಿದ್ದೊ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು
ಕೆಣಕಿ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ಒಳಗೊಳಗೆ ಬೇರುಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ
My translation:
Nimmodaniddu Nimmanthagade
By
Nissar Ahmed
Even while being with you
Not being able to become like you,
Not leaning towards any pull and being myself
While all of me and my whole existence are rooted in this land
Yet I am shirking like a foreigner
Trying to lift my head you see
It is a very difficult task!!
In your circle of intoxication, drunkenness, dancing parties
Even while being provoked
Keeping the five senses under the leash
Not sliding down, maintaining discipline
And walking a fine line
While participating in the show you see
It is a very difficult task
While having chopped my roots inside
And pouring water for the purpose of show
Although I know of your hypocrisy
But having to pretend like I do not know this
Without a single sign of objection
Drinking coffee with you
Reading the newspaper and making small talk
Living the entire life like this you see
Is a very difficult talk
ಈ ಪದ್ಯದಲ್ಲಿ.ನಿಸ್ಸಾರ್ ಅಹ್ಮದ್ ಅವರು ತಮ್ಮ ಹೃದಯದ ಅಂತರಾಳದಲ್ಲಿ ಇರುವ ಒಂದು ನೋವನ್ನು ನಮಗೆ ಒಂದು ಸಣ್ಣ ಕಿಂಡಿಯ ಮೂಲಕ ಬೆಳಕು ಬಿಟ್ಟು ತೋರಿಸಿದ್ದಾರೆ. ಈ ಪದ್ಯ ಪ್ರತಿ ದಿನವೂ, ಪ್ರತಿ ಕ್ಷಣವೂ ಅವರ ಮನಸ್ಸಿನಲ್ಲಿ ನಡೆಯುತ್ತಿರುವ ತುಮುಲ ಯುದ್ಧದ ಪರಿಚಯವನ್ನು ನಮಗೆ ಮಾಡಿಸುತ್ತದೆ. ಶ್ರೀ ನಿಸ್ಸಾರ್ ಅಹ್ಮದ್ ಅವರ ಸಾಹಿತ್ಯ ಸಾಧನೆ ಕನ್ನಡ ಭಾಷೆಯಲ್ಲಿ ಅದ್ವಿತೀಯ. ಅವರಿಗೆ ಹೃತ್ಪೂರ್ವಕ ನಮನಗಳು.
ಲೇಖಕಿ: ಗೊರೂರು ವಸಂತಿ ಮೂರ್ತಿ (ಕೆನಡಾ)
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ





Channagide madum
Savita Deshmukh