ಕಾವ್ಯ ಸಂಗಾತಿ
ಎ ಹೇಮಗಂಗಾ
ತನಗಗಳು


ಚರ್ಚಿನ ಮುಂದೆ ಮರ
ಗೊಂಚಲ ಹೂ ಪಾದರಿ
ಗಂಧಕ್ಕೆ ಮರುಳಾಗಿ
ಅಲ್ಲೇ ನಿಂತರು ಪಾದ್ರಿ
ರೈಲಿನ ಹಳಿಗಳು
ಎಂದೂ ಸೇರಲಾರವು
ಮುರಿದ ಮನಗಳು
ಮತ್ತೆ ಕೂಡಲಾರವು
ಗಿಣಿಯಂತೆಯೂ ಇದೆ
ಗೂಬೆಯಂತೆಯೂ ಇದೆ
ಹಕ್ಕಿ ಹಾರಲಾಗದು
‘ ಕಾಕಾಪೋ ‘ ಹೆಸರದು
ವಿಭಿನ್ನ ಹಕ್ಕಿಯಿದು
ಗುಂಡು ಗುಂಡಗಿಹುದು
‘ ಗೂಬೆಗಿಣಿ ‘ ಹೆಸರು
ಆಯುಷ್ಯ ವರ್ಷ ನೂರು
ನಿಂದನೆಯ ಭಯಕೆ
ಕೈ ಚೆಲ್ಲಿ ಕೂರದಿರು
ಸಾಧನೆಯತ್ತ ನಿಲ್ಲು
ಅಡಗುವುದು ಸೊಲ್ಲು
ಮರಣಿಸಿದ ವ್ಯಕ್ತಿ
ಮಹಾ ಹೃದಯವಂತ
ಅಂಗಾಂಗ ದಾನದಲಿ
ಆತನಿನ್ನೂ ಜೀವಂತ
ಇಣಚಿ ಬೀಜವನು
ಮಣ್ಣಲಿ ಬಚ್ಚಿಟ್ಟಿತು
ಮಳೆ ಸುರಿದು ಅಲ್ಲಿ
ಸಸಿಯೊಂದು ಹುಟ್ಟಿತು
ಜಾಗತಿಕ ಸಮರ
ಪರಿಣಾಮ ದುರ್ಭರ
ಚಿನ್ನ ಬೆಳ್ಳಿ ಎರಡೂ
ಜೇಬಿಗೆ ಬಲು ಭಾರ
ಕೊಳ್ಳಲೆಂದು ಹೋದಾಗ
ನನ್ನವರು ಹೇಳಿದ್ದು
“ಹೇಮ ಎಂದರೆ ಚಿನ್ನ
ಬೇಡ ದುಬಾರಿ ಸ್ವರ್ಣ”
ಅರವತ್ತರ ವಯ
ಅರಳು ಮರುಳಿದೆ
ಲೆಕ್ಕಿಸದೇ ಮರಳಿ
ನೀ ಅರಳಬೇಕಿದೆ
ಎ. ಹೇಮಗಂಗಾ




ತುಂಬಾ ಸುಂದರ ತನಗಗಳು.
ಸುಜಾತಾ ರವೀಶ್