ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಂದು ಪ್ರೇಮಿಗಳ ದಿನ ಬಂದೇ ಬಿಟ್ಟಿತಲ್ಲ ಗೆಳತಿ
ನಿನ್ನ ಮೇಲೆ ಪ್ರೀತಿ ಅದೆಂದೋ ಹುಟ್ಟಿತಲ್ಲ ಗೆಳತಿ

ಒಂದು ದಿನವಷ್ಟೇ ಮೀಸಲಿಟ್ಟರೆ ಅದೆಂಥ ಪ್ರೀತಿ
ಪ್ರತಿಕ್ಷಣ ನಿನ್ನುಸಿರೇ ಎದೆ ಕದವ ತಟ್ಟಿತಲ್ಲ ಗೆಳತಿ

ಎಷ್ಟು ಪ್ರೀತಿಸುವೆ ಎಂದು ಕೇಳಿ ತಿಳಿಯುವುದಲ್ಲ
ಭಾವದಿ ಹುಟ್ಟಿ ಬಾಂದಳವನೇ ಮುಟ್ಟಿತಲ್ಲ ಗೆಳತಿ

ಪ್ರೀತಿ ಪರಸ್ಪರ ನಂಬಿಕೆಯ ಮೇಲೆ ನಿಂತಿಹುದಂತೆ
ಸಂಶಯದ ಭೂತಗಳ ಬಿಡದೇ ಸುಟ್ಟಿತಲ್ಲ ಗೆಳತಿ

ತೋ(ಹೇ)ರಿಕೆಗೋ ಪ್ರೀತಿಸುವವನಲ್ಲ ಕುಂಬಾರ
ಬರಡಾದ ಎದೆ ನೆಲದಿ ಹಸಿರನ್ನೇ ನೆಟ್ಟಿತಲ್ಲ ಗೆಳತಿ


About The Author

Leave a Reply

You cannot copy content of this page

Scroll to Top