ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಕೆ ಹಂಗರಗಿ
“ನಿತ್ಯನೂತನ”


ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ”
ದರಾ ಬೇಂದ್ರೆಯವರ
ಅದ್ಭುತ ಕವನಗಳ ಸಾಲು
ನೆನೆಯುತ್ತ ಅಡಿ ಇಡೋಣ
ಆಗಲಿ ನಿತ್ಯ ನೂತನ…
ದಿನ ತಿಂಗಳು ವರ್ಷಗಳು
ಮತ್ತೆ ಮತ್ತೆ ಮರಳಲಿ
ಪರಿವರ್ತನೆ ಜಗದ ನಿಯಮ
ಹೊಸ ಮೆಟ್ಟಿಲು, ಹೊಸ ಸಂಕಲ್ಪ ನಮ್ಮದಾಗಲಿ ನವ ನವೀನ
ಹೊಸ ಬದುಕು ನಿತ್ಯ ನೂತನ…
ಸಮಸ್ಟಿ ಇರಲಿ ಚಿಂತನ
ಸಮನ್ವತೆ ಇರಲಿ ಮಂಥನ
ಪ್ರಶಾಂತತೆ ಕಾಪಾಡಿ ಪ್ರಮಾಣಿಕ
ಸಬ್ಯತೆ ಸೌಜನ್ಯತೆ ಕೂಡಿರಲಿ
ಅರಿವಿನ ಪ್ರಯತ್ನ ಮಾಡಿರಿ
ದಿನವೂ ಸಾಗಲಿ ನಿತ್ಯ ನೂತನ…
ಪ್ರಕೃತಿಯ ಮಡಿಲಿನ ಪ್ರೀತಿ
ದಿನವು ನಿತ್ಯ ನೂತನವಾಗಲಿ
ಸೃಷ್ಟಿಯ ಚೈತ್ರ ಆರಂಭ
ಇಬ್ಬನಿಯ ಜೊತೆಗೂಡಿ
ಪ್ರತಿಫಲನ ನೀಡಿ ನೇಸರ
ಬೆಟ್ಟದ ಮಧ್ಯೆ ಇರುವ ರವಿ ಬೆಳಗಲಿ…
ಹೊಂಬಣ್ಣದ ನೇಸರ ಜಗಕೆಲ್ಲ
ಸ್ವಾಗತ ಹೊಸ ಉತ್ಸಾಹ
ಹೊಸ ಚಿಲುಮೆಂತಿರಲಿ
ಅದ್ಭುತ ಪ್ರಪಂಚ ಜ್ಞಾನ ದೀವಿಗೆ
ಸಮಾನತೆ ಸಹಕಾರ ಇರಲಿ
ಹೊಸ ವರುಷದ ಸಂಭ್ರಮ ನಿತ್ಯ ನೂತನವಾಗಲಿ…
ವಿಜಯಲಕ್ಷ್ಮಿ ಕೆ ಹಂಗರಗಿ



