ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಅರ್ಥವಾಗದವಳು”  ನಿಶ್ಶಬ್ದದೊಳಗೆ ಮಾತಾಡುವವಳು,ನಗುವಿನ ಹಿಂದೆ ಸಾವಿರ ಪ್ರಶ್ನೆಗಳನ್ನು ಮರೆಸುವವಳು.ಕಣ್ಣಲ್ಲಿ ಕನಸುಗಳ ನದಿ ಹರಿದರೂಕಾಣದವರ ಮಧ್ಯೆ ಬದುಕುವವಳು.ತನ್ನತನವನ್ನು ತಾನೇ ಹೊತ್ತುಕೊಂಡುಪ್ರಪಂಚದ ತೂಕವನ್ನೂಸಹ ನಗುತ್ತಲೇ ಸಾಗಿಸುವವಳು,“ಬಲಿಷ್ಠ” ಎಂದರೆ ಕಲ್ಲಿನಂತೆಇರಬೇಕು ಎಂದುಕೊಂಡವರಿಗೆಹೂವಿನಂತೆ ಮೃದುವಾಗಿಬಲವಾಗಿರುವವಳು.ಮೌನವನ್ನು ಅಹಂಕಾರವೆಂದವರುಅಳುವನ್ನು ದುರ್ಬಲತೆ ಎಂದರು, ಪ್ರಶ್ನೆಗಳನ್ನು ಬಂಡಾಯವೆಂದರು,ಆದರೆ ಅವಳೊಳಗಿನ ಸತ್ಯವನ್ನುಯಾರೂ ಕೇಳಲಿಲ್ಲ.ತನ್ನವರ ನಡುವೆ ಇದ್ದೂಒಂಟಿಯಾಗಿದ್ದಳು,ತನ್ನ ಭಾಷೆಯನ್ನೇ ಮಾತಾಡುತ್ತಿದ್ದರೂ ಅಂತರಂತೆ,ಅನ್ಯಭಾಷೆಯಂತೆಅವಳ ಮನಸ್ಸಿನ ಅಕ್ಷರಗಳುಅವರ ಕಣ್ಣಿಗೆ ಒಂದಾಗಲೇ   ಇಲ್ಲ,  ಅಸ್ಮಿತೆ ಕಾಣಲೇ ಇಲ್ಲ.ತನ್ನ ನೋವಿಗೆ ತಾನೇಸಮಾಧಾನ ಹೇಳಿಕೊಂಡಳು,ತನ್ನ ಕಣ್ಣೀರಿಗೆ ತಾನೇ ಉತ್ತರವಾದಳು.ಬಿದ್ದಾಗ ಕೈ ಹಿಡಿಯುವವರುಇರಲಿಲ್ಲ,ಆದರೂಮತ್ತೆ ನಿಂತು ನಡೆಯುವ ಧೈರ್ಯಅವಳು ಕಳೆದುಕೊಳ್ಳಲಿಲ್ಲ,ಅವಳು ವಿಭಿನ್ನ. ವಿಶಿಷ್ಟ,ಅವಳು ದುರ್ಬಲ ಅಲ್ಲ,ಅವಳು ಆಳವಾದಳು.ಒಂದು ದಿನ…ಅವಳನ್ನು ಅರ್ಥಮಾಡಿಕೊಳ್ಳದ ಲೋಕವೇಬೆಳಕಿಗೆ ದಾರಿ ಕೇಳುತ್ತದೆ.ಆಗಲೂ  ಕಹಿಯಾಗುವುದಿಲ್ಲ,ನಗುಮುಖದಿಂದಲೇ ದಾರಿದೀಪವಾಗುತ್ತಾಳೆ.ಏಕೆಂದರೆನನ್ನವರಿಗೇ ಅರ್ಥವಾಗದವಳುಒಂದು ದಿನತನ್ನನ್ನೇ ಸಂಪೂರ್ಣವಾಗಿ ಅರ್ಥಮಾಡಿಕೊಂಡವಳು. ಡಾ ತಾರಾ ಬಿ ಎನ್ ಧಾರವಾಡ

“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ Read Post »

ಪುಸ್ತಕ ಸಂಗಾತಿ

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ

ಪುಸ್ತಕ ಸಂಗಾತಿ ಅಂಬಿಕಾ ಅವಟಿ ಚಡಚಣ ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ “ಅಂತರಂಗದ ಪ್ರಣತಿ” ಅವಲೋಕನ ಅಂತರಂಗದ ಪ್ರಣತಿ… ಅಲ್ಪಾಕ್ಷರಗಳಲ್ಲಿ ಅನಂತದರ್ಶನಕನ್ನಡ ಸಾಹಿತ್ಯ ಲೋಕಕ್ಕೆ ‘ತನಗ’  ಎಂಬ ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನು ಪರಿಚಯಿಸಿ, ಅದರಲ್ಲಿ ದೇಸೀ ಸೊಬಗನ್ನು ತುಂಬಿದವರು ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ (ಕನ್ನಡದ ಕಂದ). ಈ ಕೃತಿಯನ್ನು ಲೇಖಕರು ಅತ್ಯಂತ ಪ್ರೀತಿ ಮತ್ತು ಸ್ನೇಹಪೂರ್ವಕವಾಗಿ ನನಗೆ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದು, ಇದನ್ನು ಓದಿದಾಗ ಮನಸ್ಸಿಗೆ ಅಪಾರ ಸಂತೋಷವಾಯಿತು. ಅವರ ‘ಅಂತರಂಗದ ಪ್ರಣತಿ’ ಸಂಕಲನವು ಕೇವಲ ನಾಲ್ಕು ಸಾಲುಗಳಲ್ಲಿ ಬದುಕಿನ ಮಹೋನ್ನತ ಸತ್ಯಗಳನ್ನು ಹಿಡಿದಿಡುವ ಅದ್ಭುತ ಪ್ರಯತ್ನವಾಗಿದೆ. “ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥ”  ಇದು ಆಲಮೇಲರ ಕಾವ್ಯದ ಮಂತ್ರ. ಸಾಗರದ ಅಲೆಗಳು ಮೌನವಾಗಿ ತೇರನ್ನು ಎಳೆಯುವಂತೆ, ಇವರ ತನಗಗಳು ಓದುಗರ ಮನಸ್ಸನ್ನು ಮೌನವಾಗಿ ಆವರಿಸಿಕೊಳ್ಳುತ್ತವೆ. ಇಲ್ಲಿ ಶಬ್ದಗಳ ಆರ್ಭಟವಿಲ್ಲ, ಬದಲಾಗಿ ಅರ್ಥದ ಗಾಂಭೀರ್ಯವಿದೆ. ಮುಂಜಾನೆಯ ಮಂಜಿನ ಚೆಲ್ಲಾಟದಿಂದ ಹಿಡಿದು ಋತುಮಾನಗಳ ಬದಲಾವಣೆಯವರೆಗೆ ಪ್ರಕೃತಿಯ ಪ್ರತಿ ಚಲನೆಯನ್ನು ಇವರು ಕಾವ್ಯವಾಗಿಸಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಬಣ್ಣಿಸುತ್ತಲೇ, ಬದುಕಿನ **”ಹೊಸತನದ ಹಂದರ”**ವನ್ನು ಕವಿ ಇಲ್ಲಿ ಅನಾವರಣಗೊಳಿಸುತ್ತಾರೆ. ಜಗತ್ತು ಎಂಬ ಮಾಯಾಜಾಲದಲ್ಲಿ ಮನುಷ್ಯ ಅನುಭವಿಸುವ ಒದ್ದಾಟ, ದುಶ್ಚಟಗಳು, ಮೋಸ ಮತ್ತು ಅಸತ್ಯಗಳ ಕುರಿತು ಈ ತನಗಗಳು ಎಚ್ಚರಿಸುತ್ತವೆ.   ಗುರುವಿನ ಮಹತ್ವ ಮತ್ತು ಜ್ಞಾನದ ಅಗತ್ಯವನ್ನು ಶಕ್ತವಾಗಿ ಪ್ರತಿಪಾದಿಸಲಾಗಿದೆ.  ಜನನ ಮರಣಗಳ ನಡುವಿನ ಹೋರಾಟ, ನಂಬಿಕೆ ಮತ್ತು ವಿಶ್ವಾಸಗಳ ಮಹತ್ವವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸೂರ್ಯ, ಚಂದ್ರ ಹಾಗೂ ಹೆಣ್ಣಿನ ಸೌಂದರ್ಯವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಡುವುದು ಒಂದು ಸವಾಲೇ ಸರಿ. ಆದರೆ ಆಲಮೇಲರು ಪ್ರೀತಿಯ ಉತ್ತುಂಗವನ್ನು ಮತ್ತು ಪ್ರಕೃತಿಯ ಚೆಲುವನ್ನು ಸೋಜಿಗವೆನಿಸುವಂತೆ ಅಲ್ಪ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾ. ಮಲ್ಲಿಕಾರ್ಜುನ ಸರ್ ಅವರಿಗೆ ಒಂದೆರಡು ಚೆನ್ನುಡಿಗಳು. ಅಕ್ಷರಗಳ ಹಣತೆಯಲ್ಲಿ ಜ್ಞಾನದ ಎಣ್ಣೆ ಹೊಯ್ದು, ಸ್ನೇಹದ ಬತ್ತಿಯ ಮೂಲಕ ‘ಅಂತರಂಗದ ಪ್ರಣತಿ’ಯನ್ನು ಬೆಳಗಿದ್ದೀರಿ ಸರ್. ನಿಮ್ಮ ಈ ಕೃತಿ ಕೇವಲ ಕಾವ್ಯವಲ್ಲ, ಅದು ಬದುಕಿನ ದಾರಿದೀಪ. ತನಗ ಸಾಹಿತ್ಯದ ಮೂಲಕ ಕನ್ನಡದ ಕಣಜಕ್ಕೆ ಹೊಸ ಮೆರುಗು ನೀಡಿದ ನಿಮ್ಮ ಲೇಖನಿ ಹೀಗೆಯೇ ನಿರಂತರವಾಗಿ ಸಾಗಲಿ. ಒಟ್ಟಾರೆಯಾಗಿ ಹೇಳಬೇಕು ಅಂದರೆ‘ಅಂತರಂಗದ ಪ್ರಣತಿ’ ಕೃತಿಯು ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ವಾಸ್ತವಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತದೆ. ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನೇ ಬಳಸಿ ಕನ್ನಡ ಕಾವ್ಯದ ಕಣಜವನ್ನು ಶ್ರೀಮಂತಗೊಳಿಸಿರುವ ಡಾ. ಮಲ್ಲಿಕಾರ್ಜುನ ಆಲಮೇಲರ ಪ್ರಯತ್ನ ಶ್ಲಾಘನೀಯ. ಇದು ಅಂತರಂಗವನ್ನು ಬೆಳಗುವ ನಿಜವಾದ ಪ್ರಣತಿ… ಅಂಬಿಕಾ ಅವಟಿ ಚಡಚಣ.

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ Read Post »

ಕಾವ್ಯಯಾನ

“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ “ಹುಬ್ಬಳಿಯಾಂವ” ಈ ಭೂಮಿಗಿ ಬಿದ್ದಾಂವಆ ಬಾನಿಗಿ ಎದ್ದಾಂವ,ಇದ್ದುದೆಲ್ಲಾನು ಗೆದ್ದಾಂವನೀ ಹುಬ್ಬಳಿಯಾಂವ ಪದ ಪದವ ಕುಣಿಸಾಂವಮುದದಿ ಉಣಿಸಾಂವ,ಎದಿಗುದಿಯ ತಣಿಸಾಂವಅಂದತ್ತನ ನೆನೆಸಾಂವ ಬ್ಯಾನಿ ಹೊತ್ತ ನಡದಾಂವಜ್ಞಾನಪೀಠ ಪಡದಾಂವ,ಮೂಗುದಾನ ಹಿಡದಾಂವಬಿಗುಮಾನ ಬಿಡದಾಂವ ನಿದ್ದಿ ನೀರಡಿಕಿ ಕೆಡಸಾಂವಗಾರುಡಿಯ ನಡಸಾಂವಹಾಳು ಹಂಗು ಬಿಡಸಾಂವಗುಂಗೊಂದ ಹಿಡಸಾಂವ ಬಾಳಿನುದ್ದಕೂ ಬೆಂದಾಂವಬೆಂದ ಬೇಂದ್ರೆಯಾದಾಂವ,ದತ್ತ ಅಂದತ್ತನೇ ಆದಾಂವಇಂದೆತ್ತ ಎದ್ದ ಹೋದಾಂವ ಎಮ್ಮಾರ್ಕೆ

“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ Read Post »

ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ”

ಕಾವ್ಯ ಸಂಗಾತಿ ಜಯಶ್ರೀ ಎಸ್ ಪಾಟೀಲ “ನಿಸ್ವಾರ್ಥ ಭಾವ” ಚಳಿ ಇರಲಿ ಮಳೆ ಇರಲಿಅಂಜದೆ ಅಳುಕದೆಗಟ್ಟಿಯಾಗಿ ನಿಲ್ಲುವೆ ಬಿಸಿಲಿರಲಿ ಬರಡಿರಲಿಆಸೆಗಳನು ಅಳಿಸದೆಕನಸು ಕಾಣುತಲಿರುವೆ ಕೊಡಲಿ ಪೆಟ್ಟು ಬಿದ್ದರೂಟೊಂಗೆಗಳುರುಳಿದರೂಎಲ್ಲ ಸಹಿಸಿಕೊಳ್ಳುವೆ ಮೌನವಾಗಿ ಸಹಿಸುತಛಲವ ಮಾತ್ರ ಬಿಡದೆಮತ್ತೆ ಮತ್ತೆ ಚಿಗುರುವೆ ಕೆಡುಕು ಬಯಸಿದಸ್ವಾರ್ಥ ಮನುಜನಿಗೆನೆರಳಾಗಿ ನಿಲ್ಲುವೆ ಗಿಡ ಮರಗಳನಿಸ್ವಾರ್ಥ ಭಾವ ಅರಿತರೆಮನುಜ ನೀ ಬಾಳುವೆ ಜಯಶ್ರೀ ಎಸ್ ಪಾಟೀಲ

ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ” Read Post »

ಇತರೆ

“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್

ಕಾವ್ಯ ಸಂಗಾತಿ ಸುಜಾತಾ ರವೀಶ್ “ಬೇಂದ್ರೆ_ ಕಾವ್ಯಾಸ್ವಾದ” ಇಂದು ಡಾ. ದಾರಾ ಬೇಂದ್ರೆ ಅವರ ೧೩೦ ನೆಯ ಜಯಂತಿ ಪ್ರಯುಕ್ತ ಅವರದೊಂದು ಪ್ರಸಿದ್ಧ ಭಾವಗೀತೆಯ ಬಗ್ಗೆ ತಿಳಿಯುವ ಪ್ರಯತ್ನ.  ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ  ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರೀಕ್ಷಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ” ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ  ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ.  ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ. (೧)ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾಇನ್ನೂ ಯಾಕ……….ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ.  ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ. (೨)ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ.  ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿಯರು ಅದಕ್ಕೂ ಮೇಲಿನದ್ದು ಜೋಗತಿಯರು.  ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ . (೩)ಇರು ಅಂದರ ಬರತೇನಂತ ಎದ್ದು ಹೊರಡಾಂವಾಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾಇನ್ನೂ ಯಾಕ………. ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ.  ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ (೪)ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾಇನ್ನೂ ಯಾಕ……….ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ.  ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ.  ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು? (೫)ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾಇನ್ನೂ ಇವನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ, ಪತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ . (೬)   ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?ಇನ್ನೂ ಯಾಕ ಬರಲಿಲ್ಲಾ ? ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ.  ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು . ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ.  ಕಣ್ಣಿಗೆಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದತೆಯನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ . ಬೇಂದ್ರೆಯವರ ಸಖೀ ಗೀತದ  ಇಪ್ಪತಾಲ್ಕನೆಯ ಕವನವಾಗಿರುವ ಇದನ್ನು ಅವರ ಸಮಗ್ರ ಕಾವ್ಯ ಔದುಂಬರ ಗಾಥೆಯ 4ನೇ ಸಂಪುಟ ವಿನ್ಯಾಸದಲ್ಲಿ ಸೇರಿಸಲಾಗಿದೆ ಸುಜಾತಾ ರವೀಶ್

“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್ Read Post »

ಕಾವ್ಯಯಾನ

“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ

ಕಾವ್ಯ ಸಂಗಾತಿ ಶ್ರೀನಿವಾಸ್ ಕೆ ಎಂ “ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಮೂಡಣದ ಬಾನಲಿ ಹೊನ್ನ ಕಿರಣವ ಸೂಸುವಉದಿಸಿತೊಂದು ತಾರೆ,ಅಂಬಿಕಾ ತನಯರಾಗಿ,ಅರವಿಂದರ ತತ್ವದೊಳು,ರವೀಂದ್ರರ ಕಾವ್ಯದಲಿಮಿಂದು ಪುನೀತರಾದರಂದು, ಶಬ್ಧಗಾರುಡಿಗಾನಾಗಿ,ಮಾತು ಮಾತು ಮಥಿಸಿ,ನಾದವ ಝೇಂಕರಿಸುತಅಕ್ಕರದ ಅಕ್ಕರೆಯ ಪದವ ಹೊಸೆಯುತ ,ಶಬ್ಧ ನಿಶ್ಶಬ್ಧಗಳ ಜೊತೆಆಡಿ, ಹಾಡಿ, ಕುಣಿದು, ನಲಿಸಿದಾತ,ಹೃದಯಗವ್ವರದೊಳುಒಲವ ಹಣತೆಯ ಬೆಳಗಿಸಿ,ಒಳಗಣ್ಣ ತೆರಸಿ ಅಂತಃಕರಣದಕದವ ತಟ್ಟಿ ಎಬ್ಬಿಸಿದಾತಬದುಕು ಹಿಡಿಗಾಳಿನಂತಿರಲಿಬಿಡಿಗಾಳಿನಂತೆ ಬಿಡಿಯಾಗದಿರಲಿಸರಸದೊಂದಿಗೆ ಸೇರಿವಿರಸವ ತೊರೆದುಸಮರಸದ ಬದುಕನುಜಗಕೆ ತಿಳಿಸಿದಾತ ವಿಧಾತ. ಶ್ರೀನಿವಾಸ ಕೆ.ಎಮ್.

“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ Read Post »

You cannot copy content of this page

Scroll to Top