“ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್
ಅನುವಾದ ಸಂಗಾತಿ “ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್ ನನ್ನೊಳಗಿನ ನಿಶ್ಶಬ್ದವೇನನಗೆ ಅರ್ಥವಾಗದೆ ಸಾಯುತ್ತಿದೆ;ಇನ್ನು ಎದುರಿಗಿರುವವರ ಮೌನವನುನಾನೇಗೆ ತಾನೇ ಅರಿಯಲಿ? ಹೇಗಾದರೂ ಮಾಡಿ ಈ ಮೌನಕ್ಕೆಒಂದು ಪರಿಹಾರ ಕಂಡುಕೊಳ್ಳಬೇಕು;ಜಗದ ಮಾತುಗಳೆಲ್ಲವೂಬತ್ತಿ ಹೋಗುವ ಮುನ್ನವೇಒಂದು ‘ನಿಶ್ಶಬ್ದರತ್ನಾಕರ’ವ ರೂಪಿಸಿಕೊಳ್ಳಬೇಕು.ನಿಶ್ಶಬ್ದದ ಮರ್ಮಕ್ಕೆ ಸಾವಕಾಶವಾಗಿ ಟೀಕು-ಟಿಪ್ಪಣಿಗಳನ್ನು ಬರೆದಿಡಬೇಕು; ಎದುರಿಗಿರುವವರ ಮೌನವನ್ನಅವರ ಪಾಡಿಗೆ ಬಿಟ್ಟರೆ-ಕನಿಷ್ಠ ಪಕ್ಷ, ಆಗಲಾದರೂನನ್ನ ನಿಶ್ಶಬ್ದ ನನಗೆ ಅರ್ಥವಾಗಬಹುದೇನೋ! ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್
“ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್ Read Post »


