ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ರೀನಿವಾಸ ಕೆ.ಎಂ ಅವರ ಎರಡು ಕವಿತೆಗಳು

ಕಾವ್ಯ ಸಂಗಾತಿ ಶ್ರೀನಿವಾಸ ಕೆ.ಎಂ ಎರಡು ಕವಿತೆಗಳು ಕವಿತೆ-೧ ಕುರುಡು ನಂಬಿಕೆನಿನ್ನಲ್ಲಿ ಮನೆ ಮಾಡಿಸಂಶಯ ಹುತ್ತಗಟ್ಟಿಸುರುಳಿ ಸುತ್ತಿ ಸುಳಿದಾಡಿದೆನಿನ್ನ ಸುತ್ತ.. ಹುಸಿ ಮಾತಿಗೆ ಕಿವಿಗೊಟ್ಟುಆಲಿಸುವ ರಿಸೀವರ್‌ಗಳಮಾತಿಗೆ ಮರಳಾಗುವಮಾಯ ಬಜಾರಿನ ಜಗತ್ತು, ಅಜ್ಜಿಗೆ ಅರಿವೆ ಚಿಂತೆಯಾದರೆಮೊಮ್ಮಗಳಿಗೆ ಮತ್ತೇನೋಚಿಂತೆ,  ಮೈಕ್ ಇಲ್ಲದಸ್ಪೀಕರ್ ಗಳು ಕಿವಿಡೆಬ್ಬಿಸಿವೆ ಜಗವ ಕೇಳುವಂತೆ, ಇದ್ದ ಮೂರು ಜನರ ನಡುವೆಮಳ್ಳ ಬೆಕ್ಕಿನಂತೆ ನೋಡಿದ ಕಣ್ಣು,ಹಿತ್ತಾಳೆ ಕಿವಿಯಂತೆ ಆಲಿಸಿದ ಕಿವಿ,ಬೊಗಳೆ  ಮಾತಿನ ಮನೆಯ ಕಟ್ಟಿದಬಾಯಿಯಲ್ಲವೇ? ನಿದ್ದೆಯಿಂದೆದ್ದ  ಮನಸ್ಸಿಗೆ ತಿಳಿದಿದೆಕುರುಡು ನಂಬಿಕೆಯ ಬಟ್ಟೆ ಕಿತ್ತೆಸೆದುಸಂಶಯದ ಹುತ್ತವ ಕೆಡವಿನಂಬಿಕೆಯ ಮನೆಯಕಟ್ಟಬೇಕೆಂದು. ಕವಿತೆ-೨ ಅನುದಿನದಿ ಕುದಿವ ಮನದ ಬೇಗೆನಭದೆತ್ತರಕೆ ಚಿಮ್ಮುವ ಜ್ವಾಲಾಮುಖಿ, ಆಕ್ರೋಶದಿ ತುಡಿಯುವ ಮೂಕಮನಸ್ಸುಸಾಸಿವೆಯಷ್ಟು ಸಮಾಧಾನವಿಲ್ಲ, ಇಹಪರಗಳಾಚೆಗೂ ನಿಲುಕದ ಮಾಯೆತನ್ನೊಳಗೆ ಮನೆಯ ಮಾಡಿಗುಂಗಿ ಹುಳುವಿನಂತೆ ಕೊರೆದುಕಾಡಿ ಪೀಡಿಸುತಿದೆ, ತನ್ನೊಳಗೆ ಹುದುಗಿರುವ ಮಾಯೆಯಬಲೆಯ ಕಳಚಲು,ಅಟ್ಟ-ಬೆಟ್ಟಗಳ  ದಾಟಿ,ಕಾಡು-ಕಣಿವೆಯ ಸುತ್ತಿ,ಬಟ್ಟ ಬಯಲನು ಇಳಿದುಮುನ್ನಡೆಯಬೇಕು, ಜಗದ ಕತ್ತಲ ಕಳೆಯಲುಅರಿವೆಂಬ ಹಣತೆಯಹೊತ್ತಿಸಲೇ ಬೇಕು. ಶ್ರೀನಿವಾಸ ಕೆ.ಎಂಕನ್ನಡ ಸಹಾಯಕ ಪ್ರಾಧ್ಯಾಪಕರುವೇದಾಂತ ಪದವಿ ಕಾಲೇಜು,ಬೆಂಗಳೂರು.

ಶ್ರೀನಿವಾಸ ಕೆ.ಎಂ ಅವರ ಎರಡು ಕವಿತೆಗಳು Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಬದುಕಿನ ಬಣ್ಣಗಳ ಅರಿವು” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಬದುಕಿನ ಬಣ್ಣಗಳ ಅರಿವು” ಸದಾ ಕಾಲೇಜು, ಸ್ನೇಹಿತರು, ಪ್ರೀತಿಸಿದ ಹುಡುಗಿ ಎಂದು ಬಿಂದಾಸ್ ಆಗಿ ಓಡಾಡುತ್ತಿದ್ದ ಮೊಮ್ಮಗನನ್ನು ಕಂಡು ಆತನ ಅಜ್ಜಿ ತಾತನಿಗೆ ತುಸು ಹೆಚ್ಚೇ ಬೇಸರವಾಗಿತ್ತು. ಅವರ ಏಕೈಕ ಪುತ್ರ ಮತ್ತು ಸೊಸೆ ಅಪಘಾತದಲ್ಲಿ ತೀರಿಹೋದ ಮೇಲೆ ಇರುವ ಒಬ್ಬ ಮೊಮ್ಮಗನನ್ನು ಅತ್ಯಂತ ಪ್ರೀತಿಯಿಂದ ಜೋಪಾನ ಮಾಡುತ್ತಿದ್ದ ಅವರು ತಮ್ಮ ವೃದ್ಧಾಪ್ಯವನ್ನು ಸಂಪೂರ್ಣವಾಗಿ ಆತನನ್ನು ಬೆಳೆಸುವುದರಲ್ಲಿ ಕಳೆದಿದ್ದರು. ಒಳ್ಳೆಯ ಅಂಕಗಳನ್ನು ಗಳಿಸುವಲ್ಲಿ ಅವನೇನು ಹಿಂದೆ ಬಿದ್ದಿರಲಿಲ್ಲ, ನಿಜ ಆದರೆ ಕಾಲೇಜು ಕಟ್ಟೆ ಹತ್ತಿದ ಮೇಲೆ ಸದಾ ಸ್ನೇಹಿತರ ಹಿಂಡಿನೊಂದಿಗೆ ಅಲೆಯುತ್ತಿದ್ದ ಆತ ಮನೆಗೆ ಬರುವುದು ರಾತ್ರಿ ಮಲಗಲು ಮಾತ್ರ ಎಂಬಂತೆ ಆಗಿದ್ದು ಸದಾ ಆತನ ನಿರೀಕ್ಷೆಯಲ್ಲಿ ಇರುತ್ತಿದ್ದ ಅಜ್ಜಿ ತಾತನಿಗೆ ಇದರಿಂದ ಬೇಸರವಾಗಿತ್ತು. ತಮ್ಮ ಜೀವಿತದ ಬಹುಕಾಲವನ್ನು ಮೊಮ್ಮಗನ ಹಿಂದೆ ಮುಂದೆ ಓಡಾಡಿ ಆತನಿಗೆ ತಾಯಿ, ತಂದೆ ಇಲ್ಲದ ನೋವು ಬಾರದಂತೆ ಸಾಕಿ ಸಲಹಿದ ಅವರಿಗೆ ಇದೀಗ ಮೊಮ್ಮಗ ತಮ್ಮನ್ನು ಕಡೆಗಣಿಸುತ್ತಿದ್ದಾನೆ ಎಂಬ ಭಾವ. ಅದು ಎರಡನೇ ಪಿಯುಸಿಯ ಕಾಲ. ಕಳೆದ ವರ್ಷ ಅತ್ಯಂತ ಕಡಿಮೆ ಅಂಕಗಳನ್ನು ತೆಗೆದುಕೊಂಡು ಜಸ್ಟ್ ಪಾಸ್ ಆಗಿದ್ದ ಆತನಿಗೆ ಆ ದಿನ ಅಜ್ಜಿ ಮನೆಯಲ್ಲಿಯೇ ಇರಲು ಹೇಳಿದ್ದರು. ಐದು ನಿಮಿಷದಲ್ಲಿ ಬರುತ್ತೇನೆ ಎಂದು ಹೋದವನು ಸ್ನೇಹಿತರ ಜೊತೆಯಲ್ಲಿ ಸಿನಿಮಾ ನೋಡಿ ಹೋಟೆಲಿನಲ್ಲಿ ತಿಂದು ಮನೆಗೆ ಬಂದಾಗ ಸಂಜೆಯ ಆರು ಗಂಟೆ ಆಗಿತ್ತು. ಮನೆಯ ಕರೆ ಗಂಟೆಯನ್ನು ಆತ ಒತ್ತಿದ ಕೂಡಲೇ ಅಜ್ಜ ಬಾಗಿಲು ತೆರೆದರು. ಇನ್ನೇನು ಆತ ಒಳಗೆ ಬರಬೇಕು ಎನ್ನುವಷ್ಟರಲ್ಲಿ ಅಜ್ಜಿ ಬಾಗಿಲಿಗೆ ಅಡ್ಡಲಾಗಿ ನಿಂತು “ಈ ಮನೆಯಲ್ಲಿ ಇನ್ನು ನಿನಗೆ ಜಾಗವಿಲ್ಲ, ಹೊರಟು ಹೋಗು” ಎಂದು ಹೇಳಿದರು. ಅಜ್ಜಿಯ ಮಾತುಗಳು ಅರ್ಥವಾದರೂ ಏನೂ ತೋಚದೆ ಆತ ಕಕ್ಕಾಬಿಕ್ಕಿಯಾಗಿ ನಿಂತಿರುವುದನ್ನು ನೋಡಿದ ಅಜ್ಜ ಅಜ್ಜಿಯ ಹೆಗಲ ಮೇಲೆ ಕೈ ಇಟ್ಟು ಆಕೆಗೆ ಸಮಾಧಾನ ಮಾಡಲು ನೋಡಿದರು. ಕೂಡಲೇ ಪತಿಯ ಕೈಯನ್ನು ಕೊಸರಿದ ಆಕೆ ಹಿಂದೆ ಸರಿದು ಆತನಿಗೆ ಈ ಮನೆಯಲ್ಲಿ ಜಾಗ ಇಲ್ಲ…..ಇದೇ ಕೊನೆಯ ಮಾತು ಎಂದು ಹೇಳಿ ಆತನ ಮುಖಕ್ಕೆ ರಾಚುವಂತೆ ಬಾಗಿಲನ್ನು ಹಾಕಿಕೊಂಡು ಒಳಗೆ ಹೊರಟು ಹೋದರು. ಒಮ್ಮಿಂದೊಮ್ಮೆಲೆ ಎಲ್ಲವನ್ನು ಕಳೆದುಕೊಂಡ ಹತಾಶ ಭಾವ ಮೊಮ್ಮಗನನ್ನು ಆವರಿಸಿತು. ಮುಂದೇನು ಎಂದು ತೋಚದೆ ಇದ್ದರೂ ನಿಧಾನವಾಗಿ ಮನೆಯ ಮೆಟ್ಟಿಲಿಳಿದು ರಸ್ತೆಗೆ ಬಿದ್ದನು. ಹಾಗೆ ನಡೆಯುತ್ತಾ ಮುಂದೆ ಹೋಗುವಾಗ ತಾನು ಕಾಯಂ ಆಗಿ ಸ್ನೇಹಿತರ ಜೊತೆ ಕೂಡುತ್ತಿದ್ದ ದೂರದ ರಸ್ತೆಯಂಚಿನ ಆಲದ ಮರದ ಬಳಿ ಸಾರಿದನು. ನಿಧಾನವಾಗಿ ಕಾಲೆಳೆದುಕೊಂಡು ಹೋಗಿ ಅಲ್ಲಿ ಆತ ಕುಳಿತಾಗ ಆತನ ಒಂದಿಬ್ಬರು ಸ್ನೇಹಿತರು ಮಾತನಾಡುತ್ತಾ ಅಲ್ಲಿಗೆ ಬಂದರು. ಈತನ ಜೋತು ಬಿದ್ದ ಮುಖವನ್ನು ನೋಡಿ ಏನಾಯ್ತು ಬ್ರೋ? ಯಾಕೆ ಹೀಗೆ ಕುಳಿತಿದ್ದೀಯಾ? ಮನೆಯಲ್ಲಿ ಏನಾದರೂ ಪ್ರಾಬ್ಲಮ್ಮಾ? ಎಂದು ಕೇಳಿದರು. ಕೂಡಲೇ ಯುವಕ “ಅಜ್ಜಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು.. ಎಲ್ಲಿ ಹೋಗಬೇಕೆಂದು ನನಗೆ ತೋಚುತ್ತಿಲ್ಲ. ನನಗೆ ಒಂದೆರಡು ದಿನಗಳ ಕಾಲ ನಿಮ್ಮ ಯಾರದಾದರೂ ಮನೆಯಲ್ಲಿ ಇರೋಕೆ ಅವಕಾಶ ಕೊಡ್ತೀರಾ? ಎಂದು ಅವರಿಬ್ಬರನ್ನು ಕೇಳಿದ. ಪರಸ್ಪರ ಮುಖ ನೋಡಿಕೊಂಡ ಅವರಲ್ಲಿ ಒಬ್ಬ ಸ್ನೇಹಿತ ಇಲ್ಲ ಕಣೋ ನಮ್ಮ ಮನೆಯಲ್ಲಿ ಜಾಗ ಸಾಲೋದಿಲ್ಲ… ಅದು ಅಲ್ದೆ ನನ್ನ ಅಪ್ಪ ಅಮ್ಮ ಒಪ್ಪಲ್ಲ ಎಂದು ಹೇಳಿದ. ಮತ್ತೊಬ್ಬ ಆತನ ಮಾತಿಗೆ ಗೋಣು ಹಾಕುತ್ತಾ“ಸಾರಿ ಕಣೋ ನಮ್ಮನೇಲೂ ಬಹುಶಃ ಇದೇ ಕಥೆ. ಬೆಟರ್ ನೀನು ನಿಮ್ಮ ಅಜ್ಜಿ ಹತ್ರ ಹೋಗಿ ಸಾರಿ ಕೇಳು… ಅವರು ನಿನ್ನನ್ನು ಕ್ಷಮಿಸುತ್ತಾರೆ” ಎಂದು ಈತನ ಮನೆಯ ಹಿನ್ನೆಲೆ ಗೊತ್ತಿದ್ದ ಅವರು ಆತನಿಗೆ ಹೇಳಿದರು. ಆಯ್ತು ಎಂದು ನಿಟ್ಟುಸಿರಿಟ್ಟ ಆತ ತಾನು ಸದಾ ತನ್ನ ಗರ್ಲ್ ಫ್ರೆಂಡ್ ಜೊತೆ ಕೂಡುತ್ತಿದ್ದ ಕೆಫೆಯತ್ತ ಹೆಜ್ಜೆ ಹಾಕಿದ. ಆತನ ಕರೆಯ ಮೇರೆಗೆ ಅಲ್ಲಿಗೆ ಬಂದಿದ್ದ ಗರ್ಲ್ ಫ್ರೆಂಡ್ ಈತನ ಪೇಲವ ಮುಖವನ್ನು ನೋಡಿ ಏನಾಯಿತು ಎಂದು ಕೇಳಿದಳು. ಮನೆಯಲ್ಲಿ ನಡೆದ ವಿಷಯವನ್ನು ಆಕೆಗೆ ಹೇಳಿದ ಆತಕೆಲ ದಿನಗಳ ಕಾಲ ನಿನ್ನ ಮನೆಯಲ್ಲಿ ನನ್ನನ್ನು ಇರಿಸಿಕೊಳ್ಳುತ್ತೀಯಾ? ಎಂದು ಕೇಳಿದಾಗ ತುಸು ಗಾಬರಿ ಬಿದ್ದ ಆಕೆ ನನ್ನ ಪಾಲಕರನ್ನು ಕೇಳಿ ಹೇಳುತ್ತೇನೆ ಎಂದು ಹೇಳಿದಳು. ನಂತರ ಅವರಿಬ್ಬರೂ ಆಕೆಯ ಮನೆಯೆಡೆ ನಡೆದರು. ಆತನನ್ನು ಮನೆಯ ಹೊರಗೆ ಗೇಟ್ ನ ಬಳಿ ನಿಲ್ಲಿಸಿದ ಆಕೆ ಮನೆಯ ಒಳಗೆ ಹೋಗಿ ತನ್ನ ಅಪ್ಪ ಅಮ್ಮನಿಗೆ ವಿಷಯವನ್ನು ತಿಳಿಸಿ ಆತನಿಗೆ ಕೆಲ ದಿನಗಳ ಕಾಲ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ಕೇಳಿದಳು. ಪಾಲಕರು ಒಪ್ಪಲಿಲ್ಲ. ಆಕೆ ಮನೆಯ ಹೊರಗೆ ಬಂದು ಗೇಟಿನ ಬಳಿ ನಿಂತಿದ್ದ ಯುವಕನಿಗೆ “ಸಾರಿ ಕಣೋ… ನನ್ನ ಅಪ್ಪ ಅಮ್ಮ ಒಪ್ತಾ ಇಲ್ಲ ನಾನು ನಿನಗೆ ಯಾವ ರೀತಿನೂ ಸಹಾಯ ಮಾಡೋಕೆ ಆಗುತ್ತಿಲ್ಲ. ಐ ಯಾಮ್ ರಿಯಲಿ ಸಾರಿ ಏನೂ ತಿಳ್ಕೋಬೇಡ” ಎಂದು ಹೇಳಿದಳು.ನಿಟ್ಟುಸಿರಿಟ್ಟ ಆತ ನನ್ನ ಪರಿಸ್ಥಿತಿಯೇ ಹಾಗೆ ಇರುವಾಗ ನೀನಾದರೂ ಏನು ಮಾಡ್ತೀಯಾ? ಇರಲಿ ಬಿಡು ಹೊರಡುತ್ತೇನೆ ಎಂದು ಹೇಳಿ ತನ್ನ ಮನೆಯ ಕಡೆ ನಡೆದನು. ಮನೆಗೆ ಹೋಗಲು ಆತನಿಗೆ ಮನಸ್ಸು ಇರಲಿಲ್ಲ ಆದರೆ ಅನಾಯಾಸವಾಗಿ ಆತನ ಕಾಲುಗಳು ಮನೆಯ ಹತ್ತಿರ ಇರುವ ಪಾರ್ಕಿನ ಬಳಿ ಆತನನ್ನು ಕರೆದೊಯ್ದವು. ಪಾರ್ಕಿನ ಕಲ್ಲು ಬೆಂಚೊಂದರ ಮೇಲೆ ಕುಳಿತ ಆತನಿಗೆ ತಾನು ಚಿಕ್ಕಂದಿನಲ್ಲಿ ಅಜ್ಜ ಅಜ್ಜಿಯರ ಜೊತೆ ಈ ಪಾರ್ಕಿಗೆ ಬಂದು ಆಟವಾಡುತ್ತಿದ್ದುದು ಅವರ ಕೈ ಹಿಡಿದು ವಾಕಿಂಗ್ ಮಾಡುತ್ತಿದ್ದುದು, ಕಣ್ಣಾಮುಚ್ಚಾಲೆ ಆಡುತ್ತಿದ್ದುದು ಎಲ್ಲವೂ ಒಂದರ ಹಿಂದೆ ಒಂದರಂತೆ ಮೆರವಣಿಗೆ ಹೊರಟವು. ಮಗ ಮತ್ತು ಸೊಸೆಯನ್ನು ಕಳೆದುಕೊಂಡ ಅಪಾರ ದುಃಖದ ನಡುವೆಯೂ ಅಜ್ಜಿ ತಾತ ತನಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದು ನೆನಪಾಗಿ ದುಃಖ ಒತ್ತರಿಸಿ ಬಂತು. ಜೋರಾಗಿ ಬಿಕ್ಕಿ ಬಿಕ್ಕಿ ಆತ ಅಳುತ್ತಿರುವಾಗ ಹೆಗಲ ಮೇಲೆ ಕೈಯೊಂದು ಬಿತ್ತು. ತಲೆಯೆತ್ತಿ ನೋಡಿದಾಗ ಅಲ್ಲಿ ಅಜ್ಜ ನಿಂತಿದ್ದರು. ಮೊಮ್ಮಗನನ್ನು ಗಟ್ಟಿಯಾಗಿ ತಬ್ಬಿದ ಅಜ್ಜ ಬೇಸರವಾಯಿತೆ ? ಎಂದು ಕೇಳಿದರು. ಇಲ್ಲ ಅಜ್ಜ, ನೀವು ನನಗಾಗಿ ಅದೆಷ್ಟು ಕಷ್ಟಪಟ್ಟಿರಿ… ಆದರೆ ಅದರ ಅರಿವಿಲ್ಲದ ನಾನು ನಿಮ್ಮಿಬ್ಬರ ಮನಸ್ಸನ್ನು ನೋಯಿಸಿದೆ, ಅದನ್ನು ನೆನೆದು ದುಃಖವಾಯಿತು ಎಂದು ಹೇಳಿದಾಗ ಆತನ ಹೆಗಲ ಮೇಲೆ ಮೆಲುವಾಗಿ ತಟ್ಟಿದ ಅಜ್ಜ ನಡೆ ಮನೆಗೆ ಹೋಗೋಣ ಎಂದು ಹೇಳಿದರು. ಅಯೋಮಯನಾಗಿ ಯುವಕ “ಅಜ್ಜಿ ಬೈತಾರೆ…ನಾನು ಬರಲ್ಲ” ಎಂದು ಹೇಳಿದಾಗ “ಬಾ ಬಾ ನಿನ್ನ ಅಜ್ಜಿ ನಿನಗಿಂತಲೂ ನೋಯುತ್ತಿದ್ದಾಳೆ” ಎಂದು ಹೇಳಿ ಅಜ್ಜ ಆತನ ಕೈ ಹಿಡಿದು ಮನೆಯೆಡೆ ನಡೆದರು. ಅಜ್ಜಿಗೆ ಏಕೆ ನೋವಾಗಿದೆ ಎಂದು ಕುತೂಹಲದಿಂದ ಅಜ್ಜನನ್ನು ಹಿಂಬಾಲಿಸಿದ ಯುವಕ. ಮನೆಯ ಬಾಗಿಲನ್ನು ತೆಗೆಸಲು ಕರೆಗಂಟೆ ಒತ್ತಲೇ ಬೇಕಾಗಿರಲಿಲ್ಲ. ತೆರೆದ ಬಾಗಿಲ ಮುಂದೆ ಗಲ್ಲಕ್ಕೆ ಕೈಕೊಟ್ಟು ಕುಳಿತ ಅಜ್ಜಿಯ ಮ್ಯಾನವದನ ಮೊಮ್ಮಗನ ಮುಖ ನೋಡುತ್ತಲೇ ನೂರು ಕ್ಯಾಂಡಲ್ ಬಲ್ಬು ಬೆಳಗಿದಂತೆ ಆಯಿತು. ಓಡಿಬಂದು ಮೊಮ್ಮಗನನ್ನು ತಬ್ಬಿದ ಆಕೆ ಎಲ್ಲಿ ಹೋಗಿದ್ದೆ ನೀನು? ಎಂದು ಆಕ್ಷೇಪಿಸಿದಳು. ತಪ್ಪಾಯ್ತು ಅಜ್ಜಿ! ನನಗೆ ಈಗ ನಿಜವಾಗಿಯೂ ನನ್ನ ತಪ್ಪಿನ ಅರಿವಾಗಿದೆ…. ಹರೆಯದ ಹುಮ್ಮಸ್ಸಿನಲ್ಲಿ ಯಾರು ನನ್ನವರು, ನನಗಾಗಿ ಮಿಡಿಯುವವರು ತಮ್ಮ ಬದುಕಿನ ಸುಖ ಸಂತೋಷಗಳನ್ನು ನನ್ನಲ್ಲಿ ಕಾಣುವರು ಎಂಬುದರ ಅರಿವಿಲ್ಲದೆ ಸ್ನೇಹಿತರು, ಮೋಜು ಮಸ್ತಿಗಳಲ್ಲಿ ಮುಳುಗಿ ನಿಮ್ಮನ್ನು ಕಡೆಗಣಿಸಿಬಿಟ್ಟಿದ್ದೆ.ಇಂದು ನೀನು ನನ್ನನ್ನು ಮನೆಯಿಂದ ಹೊರಗೆ ಹಾಕದೆ ಹೋಗಿದ್ದರೆ ನನಗೆ ನನ್ನ ತಪ್ಪಿನ ಅರಿವಾಗುತ್ತಿರಲಿಲ್ಲ. ಯಾರು ನನ್ನವರು ಎಂಬುದರ ಅರಿವು ನನಗೀಗ ಆಗಿದೆ. ಇನ್ನು ಮುಂದೆ ಯಾವತ್ತೂ ಇಂತಹ ತಪ್ಪು ಮಾಡುವುದಿಲ್ಲ. ನನ್ನನ್ನು ನೀವಿಬ್ಬರೂ ಕ್ಷಮಿಸಿಬಿಡಿ ಎಂದು ಅವರಿಬ್ಬರ ಕಾಲಿನ ಮೇಲೆ ಬಿದ್ದನು. ನಿಧಾನವಾಗಿ ಆತನನ್ನು ಮೇಲಕ್ಕೆತ್ತಿದ ಅಜ್ಜಿ “ಕಂದ ಬದುಕಿನಲ್ಲಿ ನಮಗೆ ಸ್ವಾತಂತ್ರ್ಯ ಇರುವಷ್ಟೇ ಜವಾಬ್ದಾರಿಗಳು ಇರುತ್ತವೆ. ಬಹಳಷ್ಟು ಬಾರಿ ಸ್ವಾತಂತ್ರ್ಯವನ್ನು ಅನುಭವಿಸುವುದಕ್ಕಿಂತ ಹೆಚ್ಚು ಜವಾಬ್ದಾರಿಯನ್ನು ನಾವು ಹೊರಬೇಕಾಗುತ್ತದೆ. ಸ್ನೇಹಿತರ ಒಡನಾಟ ತಪ್ಪಲ್ಲ ಆದರೆ ಎಲ್ಲವೂ ಇತಿಮಿತಿಯಲ್ಲಿ ಇರಬೇಕು. ಈ ಪಾಠವನ್ನು ನಿನಗೆ ಕಲಿಸಲೆಂದೇ ನಾನು ನಿನ್ನನ್ನು ಮನೆಯಿಂದ ಹೊರಗೆ ಹಾಕಿದ್ದು. ಆದರೆ ಇದರಿಂದ ನಿನಗೆ ಎಷ್ಟು ದುಃಖವಾಯಿತೋ ಅದರ ಹತ್ತು ಪಟ್ಟು ಹೆಚ್ಚು ದುಃಖ ನನಗಾಗಿದೆ ಎಂದರೆ ನೀನು ನಂಬಲೇಬೇಕು. ನೀನಿಲ್ಲದೆ ನಮಗೆ ಬದುಕೇ ಇಲ್ಲ, ನಿನ್ನ ಸಂತಸದಲ್ಲಿ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ” ಎಂದು ಅಜ್ಜಿ ಹೇಳಿದಾಗ ಹೌದೆಂಬಂತೆ ಅಜ್ಜ ತಲೆ ಆಡಿಸಿದರು. ಅಜ್ಜಿಯ ತೊಡೆಯ ಮೇಲೆ ತಲೆ ಆನಿಸಿದ ಮೊಮ್ಮಗ“ನಾನು ಕೂಡ ಇನ್ನು ಮುಂದೆ ಸರಿಯಾದ ಹಾದಿಯಲ್ಲಿ ಸಾಗುತ್ತೇನೆ ಏನಾದರೂ ತಪ್ಪು ಮಾಡಿದರೆ ಕಿವಿ ಹಿಂಡಿ ಬುದ್ದಿ ಕಲಿಸಲು ನೀವಿಬ್ಬರು ಹಿಂಜರಿಯಬೇಡಿ” ಎಂದು ಹೇಳಿದಾಗ ಎಲ್ಲರೂ ಜೋರಾಗಿ ನಕ್ಕು ಆ ನಗುವಿನ ಮಂಜುಳ ದನಿ ಮನೆಯೆಲ್ಲ ತುಂಬಿತು. ಎಷ್ಟು ಸುಂದರವಾದ ಕಥೆಯಲ್ಲವೇ ಸ್ನೇಹಿತರೆ! ಎಷ್ಟೋ ಬಾರಿ ಬದುಕಿನ ನಾಗಾಲೋಟದಲ್ಲಿ ಹರೆಯದ ಹುಮ್ಮಸ್ಸಿನಲ್ಲಿ ನಾವು ನಮ್ಮವರನ್ನು ಕಡೆಗಣಿಸಿ ಮುಂದೆ ಸಾಗುತ್ತೇವೆ. ನಮ್ಮ ಬದುಕಿನಲ್ಲಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವುದು ನಮ್ಮ ಹೆತ್ತವರು, ಒಡಹುಟ್ಟಿದವರು, ಸಂಗಾತಿ ಮತ್ತು ಮಕ್ಕಳು ಮಾತ್ರ. ಉಳಿದೆಲ್ಲರಿಗೂ ಗೌರವವನ್ನು ನೀಡುವ ನಾವು ಕುಟುಂಬದ ಸದಸ್ಯರನ್ನು ಮಾತ್ರ ಅಸಡ್ಡೆಯಿಂದ ಕಾಣುತ್ತೇವೆ. ಮುಂಜಾನೆ ಮನೆಯನ್ನು ಬಿಟ್ಟು ಅದೆಷ್ಟೆ ಊರು ಸುತ್ತಿ ನಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಅಂತಿಮವಾಗಿ ಮತ್ತೆ ನಾವು ಬರುವುದು ನಮ್ಮ ಮನೆಗೆಯೇ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ನಮ್ಮ ಕುಟುಂಬದ ಸದಸ್ಯರೊಂದಿಗೆ ಮಾತ್ರ. ತಡವಾಗಿಯಾದರೂ ಸರಿ ನಮ್ಮವರು ನಮಗೆ ಬೇಕೇ ಬೇಕು ಎಂಬುದನ್ನು ಅರಿತು ನಾವು ಅವರಿಗೆ ಬೇಕಾಗುವಂತೆ ವರ್ತಿಸುವ, ಅವರೊಂದಿಗೆ ಸೌಹಾರ್ದಯುತವಾಗಿ ಬಾಳುವ ಎಂದು ಆಶಿಸುವ ವೀಣಾ ಹೇಮಂತ್ ಗೌಡ ಪಾಟೀಲ್

“ಬದುಕಿನ ಬಣ್ಣಗಳ ಅರಿವು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಕೆ ಹಂಗರಗಿ ಅವರ ಕವಿತೆ,”ಸಾಧಿಸುವ ಛಲವೊಂದೇ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ಸಾಧಿಸುವ ಛಲವೊಂದೇ” ಸಾಗುವ ಜಗದಲಿಹಲವು ಟೀಕೆಗಳಿರಲಿಕೆಲವು ತಪ್ಪುಒಪ್ಪುಗಳಿರಲಿನಡೆಯಬೇಕು ನಮ್ಮತನದಲಿ// ಏನೇ ಬರಲಿ ಕಷ್ಟಹೇಗೆ ಬರಲಿ ಸುಖಹಿಗ್ಗದೆ ಕುಗ್ಗದೆಮುನ್ನುಗ್ಗಿ ಸಾಗು // ಸಾಕಿ ಸಲುಹಲುಯಾರಿಲ್ಲ ಜೊತೆಯಲಿಕೊರಗದಿರು ಮನದಲಿಬೆಳೆಯೋಣ ನಮಗೆ ನಾವೇಜೀವನ ಪಯಣದಲಿ// ಛಲಬೇಕು ಬೆಳೆಯಲುಮನದಲಿ ಬರಬೇಕುಸ್ವಲ್ಪ ಅವಕಾಶ ಸಿಕ್ಕರೂಹಿಡಿದು ಮುನ್ನುಗ್ಗಬೇಕು// ನಿನ್ನ ಒಲವು ನಿನಗೆನಿನ್ನ ಗುರಿ ನಿನಗೆನಿನ್ನ ನೋಟವೊಂದೇಸಾಧಿಸಿ ನಗುವ ಛಲವೊಂದೇ// ವಿಜಯಲಕ್ಷ್ಮಿ ಕೆ ಹಂಗರಗಿ

ವಿಜಯಲಕ್ಷ್ಮಿ ಕೆ ಹಂಗರಗಿ ಅವರ ಕವಿತೆ,”ಸಾಧಿಸುವ ಛಲವೊಂದೇ” Read Post »

ಇತರೆ

“ಮಹಿಳೆಯರ ಮೇಲಿನ ಡಿಜಿಟಲ್ ಹಿಂಸಾಚಾರ ತಡೆಯುವುದು” ಎನ್.ವಿ.ರಮೇಶ್‌ ಅವರ ಲೇಖನ

ಡಿಜಿಟಲ್‌ ಸಂಗಾತಿ ಎನ್.ವಿ.ರಮೇಶ್‌ “ಮಹಿಳೆಯರ ಮೇಲಿನ ಡಿಜಿಟಲ್ ಹಿಂಸಾಚಾರ ತಡೆಯುವುದು” ಮಿರಾಬಲ್ ಸಹೋದರಿಯರ ಹತ್ಯೆಯ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಒಂದು ದಿನವನ್ನು ಗೊತ್ತುಪಡಿಸಲಾಗಿದೆ.     ಈ ಆಚರಣೆಯ ಉದ್ದೇಶ ದೈಹಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವುದು, ಲಿಂಗ-ಆಧಾರಿತ ಅಸಮಾನತೆಗಳನ್ನು ತಡೆಗಟ್ಟುವುದು ಮತ್ತು ಮಹಿಳೆಯರು ಮುಕ್ತವಾಗಿ ಬದುಕಲು ಅವಕಾಶ ಕಲ್ಪಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದರ‍್ಜನ್ಯವು ವಿಶ್ವದಲ್ಲಿ ಅತ್ಯಂತ ಪ್ರಚಲಿತ ಮತ್ತು ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಒಂದಾಗಿದೆ. ಜಾಗತಿಕವಾಗಿ, ಸುಮಾರು ಮೂರು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ದೈಹಿಕ ಮತ್ತು/ಅಥವಾ ಲೈಂಗಿಕ ನಿಕಟ ಪಾಲುದಾರ ಹಿಂಸೆ, ಪಾಲುದಾರರಲ್ಲದ ಲೈಂಗಿಕ ಹಿಂಸೆ ಅಥವಾ ಎರಡಕ್ಕೂ ಒಳಗಾಗಿದ್ದಾರೆ.ಇದು ವಿಭಿನ್ನ ಸನ್ನಿವೇಶಗಳಲ್ಲಿ ತೀವ್ರಗೊಂಡಿರುವ ಒಂದು ಪಿಡುಗು, ಡಿಜಿಟಲ್ ಕ್ಷೇತ್ರ. ಆನ್ಲೈನ್ ಪ್ಲಾಟ್ಫರ‍್ಮ್ಗಳಲ್ಲಿ ಮಹಿಳೆಯರ ಮೇಲಿನ ದರ‍್ಜನ್ಯವು ಇಂದು ಗಂಭೀರ ಮತ್ತು ವೇಗವಾಗಿ ಬೆಳೆಯುತ್ತಿರುವ ಬೆದರಿಕೆಯಾಗಿದ್ದು, ಇದು ಅನೇಕ ಮಹಿಳೆಯರ ಧ್ವನಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತದೆ-ವಿಶೇಷವಾಗಿ ರಾಜಕೀಯ, ಕ್ರಿಯಾಶೀಲತೆ ಅಥವಾ ಪತ್ರಿಕೋದ್ಯಮದಂತಹ ಕ್ಷೇತ್ರಗಳಲ್ಲಿ ಬಲವಾದ ಸರ‍್ವಜನಿಕ ಮತ್ತು ಡಿಜಿಟಲ್ ಉಪಸ್ಥಿತಿಯನ್ನು ಹೊಂದಿರುವವರು.ದರ‍್ಬಲ ತಾಂತ್ರಿಕ ನಿಯಂತ್ರಣ, ಹೊಂದಿದ್ದಾರೆ.  ಕೆಲವು ದೇಶಗಳಲ್ಲಿ ಈ ರೀತಿಯ ಆಕ್ರಮಣಕ್ಕೆ ಕಾನೂನು ಮಾನ್ಯತೆಯ ಕೊರತೆ, ಡಿಜಿಟಲ್ ಪ್ಲಾಟ್ಫರ‍್ಮ್ಗಳ ಶಿಕ್ಷೆಯ ವಿನಾಯಿತಿ, ಂI ಬಳಸಿಕೊಂಡು ಹೊಸ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ದುರುಪಯೋಗದ ರೂಪಗಳು, ಲಿಂಗ ಸಮಾನತೆಯನ್ನು ವಿರೋಧಿಸುವ ಚಳುವಳಿಗಳು, ಅಪರಾಧಿಗಳ ಅನಾಮಧೇಯತೆ ಮತ್ತು ಡಿಜಿಟಲ್ ಬಲಿಪಶುಗಳಿಗೆ ಸೀಮಿತ ಬೆಂಬಲದಿಂದಾಗಿ ಇದು ಹೆಚ್ಚುತ್ತಿರುವ ಹಿಂಸೆಯ ಒಂದು ರೂಪವಾಗಿದೆ.. ಡಿಜಿಟಲ್ ದುರುಪಯೋಗ ಎಂದರೇನು? ಮಹಿಳೆಯರು ಮತ್ತು ಹುಡುಗಿಯರನ್ನು ಹಿಂಬಾಲಿಸಲು, ಕಿರುಕುಳ ನೀಡಲು ಮತ್ತು ನಿಂದಿಸಲು ಡಿಜಿಟಲ್ ಪರಿಕರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ . ಇದರಲ್ಲಿ ಇವು ಸೇರಿವೆ:• ಚಿತ್ರ ಆಧಾರಿತ ನಿಂದನೆ/ಒಪ್ಪಂದವಿಲ್ಲದೆ ಆತ್ಮೀಯ ಚಿತ್ರಗಳ ಹಂಚಿಕೆ – ಇದನ್ನು ಸಾಮಾನ್ಯವಾಗಿ ಸೇಡಿನ ಅಶ್ಲೀಲ ಅಥವಾ ಸೋರಿಕೆಯಾದ ನಗ್ನ ಚಿತ್ರಗಳು ಎಂದು ಕರೆಯಲಾಗುತ್ತದೆ.• ಸೈರ‍್ಬುಲ್ಲಿಂಗ್, ಟ್ರೋಲಿಂಗ್ ಮತ್ತು ಆನ್ಲೈನ್ ಬೆದರಿಕೆಗಳು.• ಆನ್ಲೈನ್ ಕಿರುಕುಳ ಮತ್ತು ಲೈಂಗಿಕ ಕಿರುಕುಳ.• ಲೈಂಗಿಕವಾಗಿ ಸ್ಪಷ್ಟವಾದ ಚಿತ್ರಗಳು, ಡೀಪ್ಫೇಕ್ ಅಶ್ಲೀಲತೆ ಮತ್ತು ಡಿಜಿಟಲ್ ಆಗಿ ಕುಶಲತೆಯಿಂದ ಮಾಡಿದ ಚಿತ್ರಗಳು, ವೀಡಿಯೊಗಳು ಅಥವಾ ಆಡಿಯೊದಂತಹ – ರಚಿತವಾದ ಡೀಪ್ಫೇಕ್ಗಳು.• ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದ್ವೇಷ ಭಾಷಣ ಮತ್ತು ತಪ್ಪು ಮಾಹಿತಿ.• ಡಾಕ್ಸಿಂಗ್ – ಖಾಸಗಿ ಮಾಹಿತಿಯನ್ನು ಪ್ರಕಟಿಸುವುದು.        • ಯಾರೊಬ್ಬರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಆನ್ಲೈನ್ನಲ್ಲಿ ಹಿಂಬಾಲಿಸುವುದು ಅಥವಾ ಕಣ್ಗಾವಲು/ಟ್ರ‍್ಯಾಕಿಂಗ್.• ಆನ್ಲೈನ್ ಶೃಂಗಾರ ಮತ್ತು ಲೈಂಗಿಕ ಶೋಷಣೆ..• ಸ್ತ್ರೀದ್ವೇಷಿ ಜಾಲಗಳು – ಉದಾ. ಮಾನೋಸ್ಪಿಯರ್ , ಇನ್ಸೆಲ್ ವೇದಿಕೆಗಳು.ಈ ಕೃತ್ಯಗಳು ಆನ್ಲೈನ್ನಲ್ಲಿ ಮಾತ್ರ ನಡೆಯುವುದಿಲ್ಲ. ಅವು ಹೆಚ್ಚಾಗಿ ನಿಜ ಜೀವನದಲ್ಲಿ ಆಫ್ಲೈನ್ ಹಿಂಸಾಚಾರಕ್ಕೆ (Iಖಐ) ಕಾರಣವಾಗುತ್ತವೆ, ಉದಾಹರಣೆಗೆ ಬಲವಂತ, ದೈಹಿಕ ಕಿರುಕುಳ ಮತ್ತು ಸ್ತ್ರೀ ಹತ್ಯೆ – ಮಹಿಳೆಯರು ಮತ್ತು ಹುಡುಗಿಯರ ಹತ್ಯೆ. ಈ ಹಾನಿ ದರ‍್ಘಕಾಲೀನವಾಗಿರಬಹುದು ಮತ್ತು ದರ‍್ಘಕಾಲದವರೆಗೆ ಬದುಕುಳಿದವರ ಮೇಲೆ ಪರಿಣಾಮ ಬೀರುತ್ತದೆ.ಡಿಜಿಟಲ್ ಹಿಂಸಾಚಾರವು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚಾಗಿ ಗುರಿಯಾಗಿಸುತ್ತದೆ, ಜೀವನದ ಎಲ್ಲಾ ಹಂತಗಳಲ್ಲಿ, ವಿಶೇಷವಾಗಿ ಸರ‍್ವಜನಿಕ ಅಥವಾ ಆನ್ಲೈನ್ ಗೋಚರತೆಯನ್ನು ಹೊಂದಿರುವವರು – ಉದಾಹರಣೆಗೆ ಕರ‍್ಯರ‍್ತರು, ಪತ್ರರ‍್ತರು, ರಾಜಕೀಯದಲ್ಲಿರುವ ಮಹಿಳೆಯರು, ಮಾನವ ಹಕ್ಕುಗಳ ರಕ್ಷಕರು ಮತ್ತು ಯುವತಿಯರು .ಜನಾಂಗ, ಅಂಗವೈಕಲ್ಯ, ಲಿಂಗ ಗುರುತಿಸುವಿಕೆ ಅಥವಾ ಲೈಂಗಿಕ ದೃಷ್ಟಿಕೋನ ಸೇರಿದಂತೆ ಪರಸ್ಪರ ಭಿನ್ನವಾದ ತಾರತಮ್ಯವನ್ನು ಎದುರಿಸುತ್ತಿರುವ ಮಹಿಳೆಯರ ಮೇಲೆ ಇದರ ಪರಿಣಾಮ ಇನ್ನೂ ಕೆಟ್ಟದಾಗಿದೆ . ೮೫% ಮಹಿಳೆಯರು ವೈಯಕ್ತಿಕವಾಗಿ ಡಿಜಿಟಲ್ ಹಿಂಸೆಯನ್ನು ಅನುಭವಿಸಿದ್ದಾರೆ ಅಥವಾ ಇತರ ಮಹಿಳೆಯರ ವಿರುದ್ಧ ಅದನ್ನು ವೀಕ್ಷಿಸಿದ್ದಾರೆ.ತಪ್ಪು ಮಾಹಿತಿ ಮತ್ತು ಮಾನನಷ್ಟವು ಮಹಿಳೆಯರ ವಿರುದ್ಧದ ಆನ್ಲೈನ್ ಹಿಂಸೆಯ ಅತ್ಯಂತ ಪ್ರಚಲಿತ ರೂಪಗಳಾಗಿವೆ . ಡಿಜಿಟಲ್ ಹಿಂಸೆಯನ್ನು ಅನುಭವಿಸಿದ ೬೭% ಮಹಿಳೆಯರು ಮತ್ತು ಹುಡುಗಿಯರು ಈ ತಂತ್ರವನ್ನು ವರದಿ ಮಾಡಿದ್ದಾರೆ.ಎಲ್ಲಾ ಆನ್ಲೈನ್ ಡೀಪ್ಫೇಕ್ಗಳಲ್ಲಿ ೯೦ – ೯೫% ರಷ್ಟು ಒಮ್ಮತವಿಲ್ಲದ ಅಶ್ಲೀಲ ಚಿತ್ರಗಳಾಗಿದ್ದು, ಇವುಗಳಲ್ಲಿ ಸುಮಾರು ೯೦ ಪ್ರತಿಶತ ಮಹಿಳೆಯರನ್ನು ಚಿತ್ರಿಸುತ್ತವೆ.೭೩% ಮಹಿಳಾ ಪತ್ರರ‍್ತರು ಆನ್ಲೈನ್ ಹಿಂಸಾಚಾರವನ್ನು ಅನುಭವಿಸಿರುವುದಾಗಿ ವರದಿ ಮಾಡಿದ್ದಾರೆ. ಪದೇ ಪದೇ ಕೇಳಲಾಗುವ ಪ್ರಶ್ನೆಗಳು: ಡಿಜಿಟಲ್ ನಿಂದನೆ, ಟ್ರೋಲಿಂಗ್, ಹಿಂಬಾಲಿಸುವಿಕೆ ಮತ್ತು ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ತಂತ್ರಜ್ಞಾನ-ಸಹಾಯಿತ ಹಿಂಸೆಯ ಇತರ ರೂಪಗಳು ನಿಮ್ಮ ದಿನಚರಿಯ ಬಗ್ಗೆ ನಿಖರವಾದ ವಿವರಗಳನ್ನು ಹೊಂದಿರುವ ಅಪರಿಚಿತ ವ್ಯಕ್ತಿಯಿಂದ ಸಂದೇಶ ಬರುವುದನ್ನು ಕಲ್ಪಿಸಿಕೊಳ್ಳಿ. ಅಥವಾ ನಿಮ್ಮ ದೃಶ್ಯಗಳನ್ನು ಡಿಜಿಟಲ್ ರೂಪದಲ್ಲಿ ಸ್ಪಷ್ಟ ವಿಷಯವಾಗಿ ಮರ‍್ಪಡಿಸಿ ಇಂರ‍್ನೆಟ್ನಾದ್ಯಂತ ಹರಡಲಾಗಿದೆ ಎಂದು ಕಂಡುಹಿಡಿದಾಗ ಉಂಟಾಗುವ ಆಘಾತವನ್ನು ಪರಿಗಣಿಸಿ. ಇವು ಡಿಜಿಟಲ್ ದುರುಪಯೋಗದ ಕಾಲ್ಪನಿಕ ಸನ್ನಿವೇಶಗಳಲ್ಲ – ಇಂದು ಡಿಜಿಟಲ್ ಜಗತ್ತಿನಲ್ಲಿ ಸಂಚರಿಸುವ ಲಕ್ಷಾಂತರ ಮಹಿಳೆಯರು ಮತ್ತು ಹುಡುಗಿಯರಿಗೆ ಅವು ಭಯಾನಕ ವಾಸ್ತವವಾಗಿದೆ. ತಂತ್ರಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿರುವುದರಿಂದ, ಮಹಿಳೆಯರು ಮತ್ತು ಹುಡುಗಿಯರಿಗೆ ಹೊಸ ಮತ್ತು ಆತಂಕಕಾರಿ ರೀತಿಯಲ್ಲಿ ಹಾನಿ ಮಾಡಲು ಇದನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಹೊಸ ವಿದ್ಯಮಾನವಲ್ಲದಿದ್ದರೂ, ಇತ್ತೀಚಿನ ರ‍್ಷಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ತಂತ್ರಜ್ಞಾನ-ಪ್ರೇರಿತ ಹಿಂಸೆ ವೇಗವಾಗಿ ಹೆಚ್ಚುತ್ತಿದೆ , ಇದು ಎಲ್ಲೆಡೆ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿದೆ. ಆನ್ಲೈನ್ ನಿಂದನೆಯಿಂದ ಪ್ರಾರಂಭವಾಗುವ ಅಪಾಯವು ಪರದೆಗಳು ಮತ್ತು ಗಡಿಗಳನ್ನು ಮೀರಿ ವಿಸ್ತರಿಸಬಹುದು, ಇದರಿಂದಾಗಿ ಅನೇಕ ಮಹಿಳೆಯರು ಮನೆಯಲ್ಲಿ, ಕೆಲಸದಲ್ಲಿ ಅಥವಾ ಸರ‍್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿರುವುದು ಅಸಾಧ್ಯವಾಗುತ್ತದೆ. ಎನ್.ವಿ.ರಮೇಶ್

“ಮಹಿಳೆಯರ ಮೇಲಿನ ಡಿಜಿಟಲ್ ಹಿಂಸಾಚಾರ ತಡೆಯುವುದು” ಎನ್.ವಿ.ರಮೇಶ್‌ ಅವರ ಲೇಖನ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” ಇನ್ನು ಇದೆ ಹೇಳುವುದು…ಕೇಳಿಕೊಳ್ಳಿ ಬಂಧುಗಳೇನಿಮ್ಮ ಜೊತೆ ಬಹುಪಾಲು ವಿಷಯ ಹಂಚಿಕೊಳ್ಳಬೇಕಿದೆಸಮಯ ಗಮನ ಕೊಟ್ಟು ಕೇಳಿನಾನು ನೀವು ಇಲ್ಲಿ ಬದುಕ ಬೇಕಿದೆ. ಮೋಸ ವಂಚನೆ ಸುಳ್ಳುಗಳು ಅಧಿಕಾರ ಹಿಡಿದಿರುವಾಗ ಹತ್ತಿಕುವುದು ದಮನಿಸುವುದು ಕಾನೂನು ಕಟ್ಟಳೆಯಾಗಿವೆಸತ್ಯಕ್ಕೆ, ನ್ಯಾಯಕ್ಕೆ ಸಂಘರ್ಷಕೆಇನ್ನೂ ಇದೆಯಾ ಬದುಕು? ಸತ್ಯವ ನುಡಿದರೆ ಭಯೋತ್ಪಾದಕ ಎನ್ನುವರುನ್ಯಾಯವ ಕೇಳಿದರೆನಗರ ನಕ್ಷಲೈಟ್ ಎನ್ನುವರು ಮಾರಾಟವಾಗಿವೆ ಕೋರ್ಟ್ ಕಚೇರಿ ಹಕ್ಕಿಗೆ ಕೂಗುವ  ಹಾಗಿಲ್ಲಧ್ವನಿ ಎತ್ತುವ ಹಾಗಿಲ್ಲಚಳುವಳಿ ಮಾಡುವ ಸ್ಥಿತಿಯಿಲ್ಲ ಪೊಲೀಸರ ಗುಂಡು ಬೂಟಿನ ಸದ್ದುರಾತ್ರಿಗೆ ಹಗಲೆನ್ನಬೇಕುಕೋಳಿಗೆ ನವಿಲೆನ್ನಬೇಕು ಬುದ್ಧ ಬಸವ ಎಂದರೆತಾಲಿಬಾನಿ ಎನ್ನುವರುಜಾತಿ ಧರ್ಮದ ದ್ವೇಷ ಬಿತ್ತುವರುವೋಟಿನ ಮಾರುಕಟ್ಟೆಗೆಬಿಕರಿಯಾಗಿವೆ ಮಠ ಮಸೀದಿಚರ್ಚ್ ವಿಹಾರ ಬಸದಿಗಳುಇನ್ನೂ ಇದೆಯಾ ಭವಿಷ್ಯ ? ದೇಶ ಹತ್ತಿ ಉರಿಯುತ್ತಿದೆರಾಜರ ವಿದೇಶಿ ಪ್ರವಾಸಮಂತ್ರಿಗಳು ಕೊಳ್ಳೆ ಹೊಡೆಯುತ್ತಿದ್ದಾರೆಬುದ್ಧಿ ಜೀವಿಗಳ ಗಾಢ ನಿದ್ದೆಪತ್ರಿಕೆ ಟಿವಿ ನೋಡುವ ಜನರುಇನ್ನೂ ಎದ್ದಿಲ್ಲ ದೇಶಕ್ಕೆ ನಾಡಿಗೆ ದಸರಾ ಪಲ್ಲಕ್ಕಿಯಲಿ ಮೆರವಣಿಗೆಸೋತವರ ಸತ್ತವರ ಗೊಂಬೆ ಕುಣಿತಪೊಲೀಸರ ಕವಾಯತ ನಮನಆನೆ ಒಂಟಿ ಕುದುರೆ ಸವಾರಿಮೋಸವೋ ಮೋಜು ಗೊತ್ತಾಗುತ್ತಿಲ್ಲ ಕೂಗುವ ಹಾಗಿಲ್ಲ ಶೋಷಕರ ವಿರುದ್ಧಇಂಕಿಲಾಬ್ ಘೋಷಣೆಒಬ್ಬನ ಸುಡಲು ಸಿದ್ಧ ನೂರು ಕೆಜಿ  ಸಿಡಿ ಮದ್ದುನ್ಯಾಯಕ್ಕೆ ಬೆಲೆಯಿಲ್ಲ ಜಾಮೀನಿಲ್ಲಸತ್ಯವಂತರ ಹತ್ಯೆ ನಿತ್ಯ ನಡೆದಿವೆ ಅದಕೆಂದೇ ನಾನೂಕೂಗಿ ಹೇಳುತ್ತೇನೆ…ನಾನು ಬಸವ ಧರ್ಮಿಗಣಾಚಾರವೇ ನನ್ನ ಅಸ್ತ್ರನಾನು ಇರುಳಿಗೆ ಹಗಲೆನ್ನುವುದಿಲ್ಲಕೋಳಿಗೆ ನವಿಲೆನ್ನುವುದಿಲ್ಲ ಈಗ ಮುಸ್ಸಂಜೆ ಕರಾಳ ಕತ್ತಲೆಯಾಗುವುದುಜೈಲಿನ ಬಿರುಕು ಗೋಡೆಯಲ್ಲಿಚಿಗುರಿದೆ ಬುದ್ಧನ ಅರಳಿ ಮರಮುಂಜಾನೆ ಕ್ರಾಂತಿಯ ಸೂರ್ಯಮತ್ತೆ ಹುಟ್ಟುವನುಭ್ರಮೆ ಭ್ರಾಂತಿ ಅಳೆದು ಬನ್ನಿ ಎದ್ದೇಳಿ ದುಷ್ಟ ಕಾರಸ್ಥಾನಕ್ಕೆಬಲಿಯಾದವರ ಉಳಿಸ ಬನ್ನಿನಿಮ್ಮ ಹಕ್ಕಿಗೆ ಘೋಷಣೆಯಾಗ ಬನ್ನಿಬುದ್ಧ ಬಸವ ಬಾಪು ಬಾಬಾಸಾಹೇಬರಮತ್ತೆ ಭುವಿಗೆ ಹೊತ್ತ ತನ್ನಿ ನಾನು ಬಸವನ ಒಕ್ಕಲುಬಸವ ಪಥಿಕ ಬಸವ ಧರ್ಮಿಎದ್ದು ಬನ್ನಿ ಗುದ್ದು ಬನ್ನಿಅಸಮತೆ ಅನ್ಯಾಯ ಶೋಷಣೆಗೆಕೊನೆ ಹೇಳೋಣ ಬನ್ನಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ,”ಮನದಾಳದ ಮೌನ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಮನದಾಳದ ಮೌನ” ಕನಸುಗಳನ್ನು ಮಾರಿದ್ದೇನೆ ಆದರೆ ಕೊಳ್ಳುವವರಿಲ್ಲಮೂಕವಾಗಿ ರೋದಿಸುತ್ತಿದೆ ಮನ ಸಾಂತ್ವಾನ ಹೇಳುವವರಿಲ್ಲನನ್ನೊಡಲು ಬರಿದಾಗಿದೆ ಹೇಗೆಂದು ಅರ್ಥೈಸಲಾಗುತ್ತಿಲ್ಲ.ಜಗತ್ತಿನ ನಿಯತ್ತಿನ ಬಾಗಿಲು ತೆರೆಯುತ್ತಿದೆ ಯಾರಿಗೆ ಯಾರಿಲ್ಲ ಎಂಬುದು ಒಳ ಮನಸು ಕೇಳುತ್ತಿದೆ. ಎಲ್ಲವ ತಿಳಿಯುವುದು ತಡವಾಗಿದೆಆದರೂ ಬದುಕಲ್ಲಿ ಬದುಕುವ ಆಸೆ ಅವಮಾನಿಸಿದವರ ಮುಂದೆಅಭಿಮಾನದಿಂದ ಬೆಳೆವ ಬಯಕೆ ಚಿಗುರೋಡೆಯುತ್ತಿದೆ.ಕರ್ತವ್ಯ ನಿಭಾಯಿಸುವ ಭರದಲ್ಲಿ ದೇಹದ ಶಕ್ತಿ ಕುಂದುತ್ತಿದೆ ಆತ್ಮದಲ್ಲಿ ನೀನಿನ್ನು ಜೀವಂತ ವಾಗಿರುವೆ ಫಿನಿಕ್ಸ್ ಹಕ್ಕಿಯಂತೆಮರುಜನ್ಮ ಪಡೆಯುವ ಹೊಸ ಬಾಳಿನ ಹೊಂಗನಸಿನತ್ತ ವಾಸ್ತವತೆಯ ಲೋಕದಲಿನಿನ್ನ ಅಳಲು ಕೇಳುವವರಿಲ್ಲನಿನ್ನೊಲವು ಬೇಕಿಲ್ಲ ಯಾರಿಗೂಬರಡು ಭೂಮಿಯಂತಿರದೇಹೊಸತನದ ಹೊಸತರಲ್ಲಿ ಬದುಕಾಗಲಿ ಹಸನು ಹೊಸ ಹೂಗಳ ಚೆಲುವಂತೆ ಅರಳಲಿ ದಿಟ್ಟತನ ಸವೆಸಿದ ಕೆಟ್ಟ ಘಟನೆಗಳ ದಾರಿ ಮರೆತುಹೊಂಗಿರಣಗಳ ಬೆಳಕಾಗಲಿ ಮಧುರತೆಯ ಜೀವನ“ಓ ಹೃದಯವೇ ನೀ ಪರರಿಗಾಗಿ ಮಿಡಿದು ಸೋತಿರುವೆ ಕ್ಷಮಿಸಿ ಬಿಡು ನನ್ನನ್ನು “……. ನನಗಾಗಿ ನೀ ಮಿಡಿಯುತ್ತಿರು ಎಂದೆಂದಿಗೂ ನೀ ನಿಲ್ಲುವವರೆಗೂ……. ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ,”ಮನದಾಳದ ಮೌನ” Read Post »

You cannot copy content of this page

Scroll to Top