ಕಾವ್ಯ ಸಂಗಾತಿ
ಪ್ರೊ ರಾಜೇಶ್ವರಿ ಶೀಲವಂತ
ಎರಡು ಕವಿತೆಗಳು


ಅವಳು ಶಬ್ಧ ಅವನು ಕಾವ್ಯ
ಅವನು ರಾಗ ಅವಳು ತಾಳ
ಅವನು ಭಾವ ಅವಳು ಜೀವ.
ಅರಳಿವೆ ಶಬ್ಧ ಕಾವ್ಯದಲಿ
ಹೊಮ್ಮಿವೆ ರಾಗ
ಸೂಸುತ ಭಾವ.
ತುಂಬಿದಳವಳದಕೆ ಜೀವ
ಧಾರೆಯೆರೆಯುತ ಒಲವ
ಇಮ್ಮಡಿಸುತ ಗೆಲುವ.
ಜಗವೇ
ಈ ಪ್ರೀತಿಯ ನೀನೆಂದರಿವೆ
ನಿನಗಿಲ್ಲ ಇದರ ಪರಿವೆ
ಭಾವನೆಗಳ ಬೆಸುಗೆಗೆ
ಪ್ರತಿದಿನ
ಭೇಟಿಯಾಗ ಬೇಕೆಂದಿಲ್ಲ
ಮಾತಾಡಬೇಕೆಂದಿಲ್ಲ
ಅವ್ಯಕ್ತ ಭಾವನೆಗೆ ಸರಿಸಾಟಿ ಇಲ್ಲ
ಹಿತಬಯಸುವ
ಪ್ರೀತಿ ಹರಿಸುವ
ಉನ್ನತಿ ಹಾರೈಸುವ ಭಾವ
ಎಲ್ಲಿದ್ದರೂ ಹೇಗಿದ್ದರೂ
ನೆಮ್ಮದಿಯಿಂದಿರು
ಮಾತನಾಡಿದರೂ ಮಾತನಾಡದಿದ್ದರೂ
ಹಾರೈಕೆಯೊಂದೇ
ಎಂದೆಂದಿಗೂ ನೀ ಸಂತಸದಿಂದಿರು
ಮೌನದಿ ಎಲ್ಲವ ನುಡಿಯುತಿರು
ಸೂಸುತಿರು ಅಗೋಚರ ಭಾವನೆಗಳ
ಸ್ಪರ್ಶಿಸುತಿರು ಈ ಮನದಾಳದ ಭಾವಗಳ.
ಪ್ರೊ ರಾಜೇಶ್ವರಿ ಶೀಲವಂತ ಪುಣೆ



