ಕಾವ್ಯ ಸಂಗಾತಿ
ಸುಧಾ ಪಾಟೀಲ್
ಗಜಲ್


ಬದಲಾವಣೆಯ ದಾರಿಯನ್ನು ಹುಡುಕಾಡಿದೆ ನಾನು
ನನ್ನಲ್ಲಿನ ಬೆಳಕನ್ನು ಹುಡುಕಾಡಿದೆ ನಾನು
ಯಶಸ್ಸು ಸಿಗುವುದು ಅಷ್ಟು ಸುಲಭವಲ್ಲ ನೋಡು
ಅವಿರತವಾಗಿ ಶ್ರದ್ಧೆಯ ಏಣಿಯನ್ನು ಹುಡುಕಾಡಿದೆ ನಾನು
ಏರಿಳಿತಗಳ ಜೀವನದಲ್ಲಿ ನೆಮ್ಮದಿಯ ಅರಸಿದೆ
ಭಾವ ಭಕ್ತಿಯ ನೆಲೆಯನ್ನು ಹುಡುಕಾಡಿದೆ ನಾನು
ಗೊತ್ತಿದ್ದೂ ತಪ್ಪು ಮಾಡುವವವರ ಕಂಡು ಮರುಗಿದೆ
ನನ್ನಲ್ಲಿನ ಅವಗುಣಗಳ ಸುಧಾರಿಸುವ ಮಾರ್ಗವನ್ನು ಹುಡುಕಾಡಿದೆ ನಾನು
ಭಾವಗಳ ಜೊತೆ ಈಜುವುದ ತೊರೆದೆ
ಸುಧೆಯ ಅಸ್ತಿತ್ವದ ಗಟ್ಟಿತನವನ್ನು ಹುಡುಕಾಡಿದೆ ನಾನು
———-
ಸುಧಾ ಪಾಟೀಲ



