ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮ
ಹೆಣ್ಣು ಹೆರಲೂಬೇಡ ,
ಸಿಟ್ಟಾಗಿ ಶಿವನಿಗೆ ಬೈಬೇಡ…


ನಮ್ಮ ಕಡಿಯ ದೀರ್ಘ ಕಾಲದ ಬ್ಯಾಸಗಿ ಧಗಿ ಮುಗಿದು ಚಳಿ ಶುರುವಾದ್ವು.ಅದೂ ಚಳಿಗಾಲ ಶುರು ಆಗಿ ಎರಡು ತಿಂಗಳ ಆದಮ್ಯಾಲ. ಸದಾ ಬಿಸಲು ಧಗಿದಾಗ ಇರೋ ನಮಗ ಒಂದಿಷ್ಟು ಚಳಿ ಆದ್ರ ಸಾಕು ಹಿಮ ಮೈಮಾಲ ಬಿದ್ದವರಂಗ ಮಾಡತೀವಿ.
ಎಲ್ಲಾ ಕೆಲಸ ಮುಗುಸಿ ಬಿಸಿಲಾಗ ಕಾಯಸ್ಕೋಂತ ಕುಂತಾಗ ಬಾಜು ಮನಿ ಅಕ್ಕೊರು ಬಂದ್ರು. ಚಳಿಗಾಲದಾಗ ಮುಂಜಾನಿ ಕೆಲಸ ಬೊಗಸಿ ಮುಗಿಸಿ ನಾವು ಹೆಣ್ಣಮಕ್ಳು ಸ್ವಲ್ಪ ಹೊತ್ತು ಬಿಸಲಾಗ ಬಂದು ಕೂಡೋದು ಚಳಿಗಾಲದ ವಿಶೇಶತೆ.ಸದಾ ಬಿಸಲಿಗಿ ತಪ್ಪಿಸಿ ಕೂಡೋರು ಚಳಿಗಿ ಅಂಜಿ ಬಿಸಲಿಗಿ ಅಪ್ಪಿಕೊಂಡು ಕೂಡತೀವಿ. ಆಗ ಸುತ್ತಮುತ್ತಲಿನ ಹೆಂಗಸರೆಲ್ಲ ಒಂದೆರಡು ಗಂಟೆ ಕುಂತೋ ನಿಂತೋ ಚಳಿ ಬಗ್ಗೆ ಮತ್ಯಾವದರ ವಿಷಯದ ಬಗ್ಗೆ ಮಾತಾಡೋದು ರೂಢಿ.
ಬಾಜು ಮನಿ ಅಕ್ಕೋರು ಬರೊದೆ ತಡ ಅವರ ತಂಗಿ ಹೆಣ್ಣಮಗಳಿಗಿ ಹಡೆದ ಸುದ್ದಿ ಖುಷಿಯಿಂದ ಹೇಳಿದ್ರು. ಹೆಣ್ಣಮಗು ಹುಟ್ಟಿದಕ್ಕ ಅವರ ಅತ್ತಿ ಎಲ್ಲರಿಗೂ ಜೀಲೇಬಿ ಹಂಚಿದ್ರು ಎಂಬ ಸುದ್ದಿನೂ ಖುಷಿಯಿಂದ ಹೇಳಿದ್ರು. ಚೊಚ್ಚಿಲ ಹೆಣ್ಣಮಗು ಖುಷಿ ಅದ , ಎರಡನೇದು ಹೆಣ್ಣಾದ್ರ ಈ ಖುಷಿ ಇಷ್ಟೇ ಇರಬಹುದಾ ಅಂತ ಮನಸ್ಸಿನಾಗೆ ವಿಚಾರ ಮಾಡ್ಧೆ.
ಆಗಷ್ಟೆ ಪೇಪರನಾಗ ಒಂದು ಸುದ್ದಿ ಓದಿದ್ದ , ಮೂರನೇ ಮಗು ಹೆಣ್ಣು ಹುಟ್ಟಿದ್ದಕ್ಕ ತಾಯಿನೆ ಮಗುವಿನ ಕುತ್ತಿಗಿ ಹಿಸುಕಿ ಸಾಯಿಸಿದ್ಲು ಅಂತ.ನನಗ್ಯಾಕೋ ಆ ತಾಯಿಗೆ ಪೂರ್ಣ ಪ್ರಮಾಣದ ದೋಷಿ ಅಂತ ನಿರ್ಧಾರ ಮಾಡಲಕ್ಕ ಮನಸ್ಸು ಒಪ್ಪಲಿಲ್ಲ.ಹೆತ್ತ ಕೂಸನ್ನು ಕತ್ತು ಹಿಸುಕಿ ಕೊಲ್ಲಬೇಕಾದ್ರ ಅವಳು ಹೆಣ್ಣು ಜನ್ಮದ ಬಗ್ಗೆ ಅದೇಷ್ಟು ರೋಸಿ ಹೋಗಿರಬೇಕು. ಕೊಲ್ಲೋದು ಅಪರಾಧನೇ ಆದ್ರ ಆಕಿಗಿ ಈ ಅಪರಾಧ ಮಾಡ್ಲಿಕ್ಕ ಪ್ರೇರೆಪಿಸಿದ್ದು ಸಮಾಜ ಅಲ್ಲ ಅಂತಿರೇನು..!
ಹುಟ್ಟಿದ ದೇವ್ರು ಹುಲ್ಲು ಮೇಯಸಲ್ಲ ಅಂತ ವೇದಾಂತ ಹೇಳೊವ್ರು ಸಾಲಾಗಿ ಹುಟ್ಟಿದ ಹೆಣ್ಣಮಕ್ಳ ತಂದೆ ತಾಯಿ ಪಾಡು ನೋಡಿರಲಿಕ್ಕಿಲ್ಲ.ಕಾಲ ಬದಲಗ್ಯಾದ , ಹೆಣ್ಣು ಗಂಡು ಎಂಬ ಭೆಧಭಾವ ಈಗ ಉಳದಿಲ್ಲ ಅನ್ನಬಹುದು.ಆದ್ರ ನಾಲೈದು ಹೆಣ್ಣಮಕ್ಳೆ ಇದ್ರ ಅವರ ಪಾಲನೆ ಪೋಷಣೆ ಮದುವೆ ವರದಕ್ಷಿಣೆ ತೊಟ್ಟಲು ಬಟ್ಟಲು ಬೀಗರು ಬಂಧುಗಳು ಅಂತ ಅವರನ್ನು ಹೆತ್ತವರಿಗಿ ತಾವು ಸಾಯತನಕ ಅವರಿಗಿ ಮಾಡೊದರಿಂದ ವಿನಾಯ್ತಿ ಸಿಗಲ್ಲ.
ಅವರವರ ಆರ್ಥಿಕ ಪರಿಸ್ಥಿತಿ ಗಿ ಅನುಗುಣವಾಗೆ ಮಾಡ್ತಾರೆ ಅಂದಕೊಂಡ್ರು ನಮ್ಮ ದೇಶದ ಎಷ್ಟು ಜನರ ಆರ್ಥಿಕ ಪರಿಸ್ಥಿತಿ ಉತ್ತಮ ಆಗಿರತದ.ದುಡ್ಡು ಇರದಿದ್ರೂ ಸಾಲಸೋಲ ಮಾಡಿಯಾದ್ರೂ ಹೆಣ್ಣಮಕ್ಳ ಎಲ್ಲಾ ಜವಾಬ್ದಾರಿ ಮುಗಿಸಲೇಬೇಕು.
ಕಾಲ ಬದಲದ್ರೂ ಹೆಣ್ಣಿನ ಸ್ಥಾನ ಮಾನದಾಗ ಯಾವದೂ ಹೆಚ್ಚು ಬದಲಾಗಿಲ್ಲ.ಸ್ವಾತಂತ್ರ್ಯ ಎಂಬ ಪದ ಗಂಡುಮಕ್ಕಳಷ್ಟು ಹೆಣ್ಣುಮಕ್ಳಿಗಿ ಕೊಡೊದಕ್ಕ ಭಯ ಆಗತದ.ಯಾಕಂದ್ರ ಹೆಣ್ಣು ಎಂಬ ಅಂಜಿಕಿಯಿಂದ. ಸುತ್ತಲೂ ಘಟಿಸೋ ಅಹಿತಕರ ಘಟನೆಗಳಿಂದ. .ಉಳ್ಳವ್ರು ಹೆಣ್ಮಕ್ಳಿಗೂ ಓದಲಸ್ತಾರ. ಬ್ಯಾರೆ ಬ್ಯಾರೆ ದೇಶಕ್ಕ ಓದಲಕ್ಕ ಕಳಸಲತಾರ.ಅದೆಲ್ಲ ಕುಟುಂಬದಲ್ಲಿ ಒಂದು ಹೆಣ್ಣಮಗು ಇದ್ದವ್ರು ಮಾಡುವಂಥವು. ಮೂರು ನಾಲ್ಕು ಜನ ಹೆಣ್ಣಮಕ್ಕು ಇದ್ರ ಅವರ ವಿದ್ಯಾಬ್ಯಾಸ ಮದುವಿ ಅಂತ ಹೆತ್ತವರು ಪಡುವ ಪಾಡು ಎಲ್ಕರಿಗೂ ಗೊತ್ತಿದ್ದದ್ದೆ.
ಈಗ ಎಲ್ಲರಿಗೂ ಹೆಚ್ಂದ್ರ ಎರಡು ಮಕ್ಳು. ಗಂಡು ಹಡೆದವರಿಗಿ ಮಗನ ಮದುವಿ ಕುರಿತು ಅತೀ ನಿರೀಕ್ಷೆ. ಹುಡುಗಿ ಓದಿದಕಿ ಇರಬೇಕು.ನೋಡ್ಲಿಕ್ಕೂ ಚಂದ ಇರಬೇಕು , ಚಂದ ಕೊಟ್ಟು ಬಿಟ್ಟು ಮದುವಿ ಮಾಡಿಕೋಡಬೇಕು ಅಂಬೋದು. ನಾಲ್ಕು ಜನ ಹೆಣ್ಣಮಕ್ಳು ಇರೋ ಮನಿಯಿಂದ ಹೆಣ್ಣ ತರಲಕ್ಕ ಲೆಕ್ಕ ಹಾಕತಾರ.ಇಷ್ಟ ಮಂದಿಗಿ ಅವರ ಹೆತ್ತವರು ಅದೇನು ಮಾಡ್ಲಿಕ್ಕಾಗತದ ಅನ್ನೊ ಆಲೋಚನೆ. ಹೌದು ಖರೆನೆ , ನಾಲ್ಕು ಹೆಣ್ಣಮಕ್ಳ
ಮದುವಿ ಜವಾಬ್ದಾರಿ ಸುಲಭ ಅಲ್ಲ ಬಿಡ್ರಿ.
ಹೆಣ್ಣು ಹೆಣ್ಣೆಂದೇಕೆ ಹಳಿಯುವಿರಿ ಕಣ್ಣು ಕಾಣದ ಗಾವಿಲರೇ ಅಂತ ಅಕ್ಕಮಾದೇವಿ ಸುಮ್ನೆ ಹೇಳಿಲ್ಕ , ಆಗ ಆಕಿ ಅನುಭವಿಸಿದ ಎಲ್ಲನೂ ಈಗಲೂ ಹೆಣ್ಣಮಕ್ಳು ಅನುಭವಿಸಲತಾರ.
ಒಂದಕ್ಕಿಂತ ಹೆಚ್ಚು ಹೆಣ್ಣಮಕ್ಳು ಹುಟ್ಟಿದ್ರ ಈಗಲೂ ಗಾಬರಿ ಪಡತಾರ.ಹೆಣ್ಣ ಮಕ್ಕಳ ಯಾವ ಸ್ಥಾನ ಮಾನದಾಗ ಬದಲಾವಣೆ ಆಗ್ಯಾದ ಎಂಬ ಪ್ರಶ್ನೆ ಸದಾ ಕಾಡತದ.ಈಗ ಹೆಣ್ಣಮಕ್ಕಳು ಓದಿ ವಿದ್ಯಾವಂತ ರಾಗತಿದ್ದಾರ.ಆರ್ಥಿಕ ವಾಗಿ ಸಬಲರಾಗತಿದ್ದಾರ ಎಂದು ಮೆಲ್ನೋಟಕ್ಕ ಕಾಣೋ ವಿಷಯ. ಗ್ರಾಮೀಣ ಪ್ರದೇಶದ ಹೆಣ್ಣಮಕ್ಕಳ ಸ್ಥಿತಿ ಏನದ..! ಹೊಟ್ಟೆಪಾಡಿಗಾಗಿ ದುಡಿಯೋದು ಅನಿವಾರ್ಯ.ಕುಡಿಯುವ ಗಂಡನನ್ನು ಸಾಕುವ ಪರಿಸ್ಥಿತಿ. ಇಂಥ ಪರಿಸ್ಥಿತಿ ದಾಗ ದುಡಿತ ಸ್ವಾವಲಂಬಿ ತನ ಅಲ್ಲ ಅನಿವಾರ್ಯ. ಓದಿದ ಹೆಣ್ಣಮಕಗಕಳೆಲ್ಲ ಕರಿಯರ್ ಬಗ್ಗೆ ತಲೆಕೆಡಿಸಿಕೊಂಡಷ್ಟು ಸಂಸಾರದಲ್ಲಿ ಅಸಮತೋಲನ ಉಂಟಾಗಲತದ.ಇದಕ್ಕ ಕಾರಣ ಗಂಡ ಅತ್ತಿಮನೆಯವರ ಅಥವಾ ತವರು ಮನೆಯವರ ಬೆಂಬಲ ಇಲ್ಲದಿರೊದಕ್ಕ. ಮನಿ ಹೊರಗ ದುಡಿಯೋ ಮಹಿಳೆ ಎದುರಿಸೋ ಸವಾಲಗಳು ಅದೇಷ್ಟು..! ಈಗೀನ ಅಧುನಿಕ ಯುಗದಲ್ಲೂ ಮಹಿಳೆ ಅವನ್ನೆಲ್ಲ ಎದುರಿಸಿ ಕೆಲಸ ಮಾಡಬೇಕಾಗತದ. ಅಡುಗಿ ಮಕ್ಕಳು ಮನಿ ಸಂಸಾರ ಎಲ್ಲಕ್ಕೂ ಬೆನ್ನು ಕೊಟ್ಟು ಮಾನಸಿಕವಾಗಿ ದೈಹಿಕವಾಗಿ ಎದುರಿಸೋ ಸಮಸ್ಯೆ ಗಳು ಎಲ್ಲರಿಗೂ ಗೊತ್ತದ. ಈಗ ಗಂಡನ ಸಪೋರ್ಟ್ ಇಲ್ಲ ಅಂತ ಹೇಳಲ್ಲ , ಅವರು ಬೆಂಬಲಿಸಲತಾರ.ಆದ್ರ ಮುಟ್ಟು ಬಾಣಂತನಗಳಂತವುಗಳಿಗೆ ಒಳಪಡುವ ಹೆಣ್ಣಮಕ್ಳಿಗಿ ಮನಿ ಒಳಗಿನ ದುಡಿತ ಹೊರಗಿನ ದುಡಿತ ಎರಡೂ ನಿಭಾಯಿಸೋದು ಅವರ ಜವಾಬ್ದಾರಿ ಹೆಚ್ಚಸಲತದ. ಮಕ್ಕಳನ್ನು ಹೇರೋದು , ಅವು ಬೆಳೆದು ಜವಾಬ್ದಾರಿ ಸ್ವಲ್ಪ ಕಳಿತು ಅನ್ನೊವಷ್ಟರಲ್ಲಿ ಮದುವಿ ಬಾಣಂತನ , ಅದರೊಂದಿಗೆ ಅವಳ ಮುಟ್ಟು ನಿಲ್ಲೊ ಸಮಯ ಅದರೊಂದಿಗೆ ಮಾನಸಿಕ ಏರುಪೇರು.ಜವಾಬ್ದಾರಿ ಗಳು ಇವೆಲ್ಲ ಐವತ್ತರ ಮಹಿಳೆಗೆ ಹಿಂಡಿ ಹಿಪ್ಪೆ ಮಾಡಿಬಿಡತಾವ.
ಆರ್ಥಿಕ ವಾಗಿ ಸಬಲರಿದ್ರ ಇವೆಲ್ಲವೂ ಹೇಗೋ ಸಹಿಸಬಹುದು. ಇಲ್ಲದಿದ್ರ ಇವುಗಳೊಂದಿಗಿ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಹೆಣ್ಣಮಕ್ಳ ಪರಿಸ್ಥಿತಿ ಅದೇಷ್ಟು ಚಿಂತಾಜನಕ ಆಗಿರತದ.
ಈ ಲೇಖನ ಓದುವವರಿಗಿ ಬರಿ ಹೆಣ್ಣಮಕ್ಳ ಗೋಳೆ ಹೇಳತಾರ ಗಂಡಮಕ್ಳ ಪರಿಸ್ಥಿತಿ ಇವರಿಗಿ ಅರಿವೇ ಆಗಲ್ಲೇನೋ ಅನಿಸಬಹುದು. ಆದ್ರ ಸಮಸ್ಯೆ ಇರೋದು ಹೆಣ್ಣಮಕ್ಳು ಹುಟ್ಟೋದು ಅಂದ್ರ ಈಗಲೂ ಯಾಕ ಹುಣ್ಣು ಅಂದ್ಕೋತಿದ್ದೆವು. ಎರಡು ಹೆಣ್ಣಮಕ್ಳೆ ಹುಟ್ಟಿದ್ರೆ ಎರಡೂ ಹೆಣ್ಣೆನಾ..ಅಂತ ಯಾಕ ಉದ್ಗಾರ ತೆಗಿತೇವು.ಹುಟ್ಟಿದ ತಕ್ಷಣ ಅವರ ಮದುವೆ ಬಗ್ಗೆ ಯಾಕ ಅಷ್ಟು ಚಿಂತಿಸ್ತೆವು. ಎಂಥ ಗಂಡ ಸಿಗತಾನೋ ಅಂತ ಯಾಕ ಆತಂಕ ಪಡತೀವಿ. ಇವು ಯಾವವು ಗಂಡಮಗ ಹುಟ್ಟಿದಾಗ ಪಡೋ ಆತಂಕಗಳಲ್ಲ. ಹಾಗಂದ ಮ್ಯಾಲ ಗಂಡು ಹೆಣ್ಣು ಸಮ ಅಂತ ಹ್ಯಾಂಗ ಹೇಳೊದು.
ದೀನಾ ಕೂಲಿ ಮಾಡಿ ಸಂಸಾರ ಸಾಗಿಸೋರಿಗೆ ಒಂದು ಹೆಣ್ಣಮಗುನೂ ಭಾರನೆ.ಅದರ ಭವಿಷ್ಯದ ಚಿಂತಿ ಸದಾ ಕಾಡತಿರತದ.ಗಂಡು ಮಗುವಿನ ಆಸೆಗೆ ಸಾಲಾಗಿ ಹೆತ್ತ ಹೆಣ್ಣಮಕ್ಳು ಹೆತ್ತವರಿಗೆ ಭಾರ . ಅದಕ್ಕೆ ಇನ್ನೂ ಭ್ರೂಣ ಹತ್ಯೆಗಳು ನಡೆಯುತ್ತಿರುವದು. ಹೆಣ್ಣು ಹೆತ್ತಮ್ಯಾಲ ಕತ್ತು ಹಿಸುಕಿ ಕೊಲ್ಲೊದಕ್ಕಿಂತ ಭ್ರೂಣದಲ್ಲಿ ಕೊಲ್ಲೊದು ಸೂಕ್ತ.
ಈಗೀನ ಪರಿಸ್ಥಿತಿ ಯಲ್ಲಿ ಒಂದೋ ಎರಡು ಮಕ್ಳು ಮಾಡಿಕೊಳ್ಳೊದು ಒಳ್ಳೆದೆ.ನಮ್ಮ ದೇಶ ಸುಧಾರಕರು ಹೇಳತಾರ. , ನಾಲೈದು ಮಕ್ಕಳಹ ಹೆತ್ತು ನಮ್ಮ ಹಿಂದೂ ಸಮಾಜದ ಜನಸಂಖ್ಯೆ ಹೆಚ್ಚು ಮಾಡ್ರಿ ಅಂತ. ನೀವು ಮಕ್ಳನ್ನ ಹೆರಿ ನಾವು ಅವರನ್ನು ಚಂದ ಸಲವತೀವಿ ಅಂತನೂ ಭರವಸೆ ಕೊಟ್ರ ಈಗ ಆಸ್ಪತ್ರೆ ದಾಗ ಮೂರನೇ ಮಗುನೂ ಹೆಣ್ಣಾಗಿದ್ದಕ್ಕ ಕತ್ತು ಹಿಸುಕಿ ಆ ತಾಯಿ ಮಗುವನ್ನು ಕೊಲ್ಲುತ್ತಿರಲಿಲ್ಲವೇನೊ.
ಜ್ಯೋತಿ ಡಿ ಬೊಮ್ಮ






ಉತ್ತಮ ಲೇಕನ