ಸಾಮಾಜಿಕ ಸಂಗಾತಿ
ಎಮ್ಮಾರ್ಕೆ
“ಜಾತಿ ಭೂತ”

ಹಿಡ್ಕೊಂಡದ ಬಡ್ಕೊಂಡದ
ಹಾಳು ಜಾತಿಯ ಭೂತ,
ಅದರ ಬೆನ್ನು ಹತ್ತಿ ಹತ್ತಿಯೇ
ಈ ಮನುಷ್ಯಾ ಸೋತ
ಮ್ಯಾಲ ಮ್ಯಾಲಂತ ಇವ್ರು
ತುಂಬಾ ಮೆರಿಲಾಕತ್ತಾರ,
ಕೀಳ ಕೀಳ ಅಂತ ಅವ್ರನ
ತುಂಬ ತುಳಿಲಾಕತ್ತಾರ
ಖೊಟ್ಟಿ ಮಂದಿ ಎಲ್ಲ ಸೇರಿ
ಗಟ್ಟ್ಯಾನ ಗ್ವಾಡಿ ಕಟ್ಟ್ಯಾರ,
ಆರಕ ಜೋತ ಬಿದ್ದ ಮ್ಯಾಲ
ಇದ್ದ ಮೂರನ್ನೂ ಬಿಟ್ಟಾರ
ಜಾತಿಯ ಹೆಸರಲ್ಲಿ ಎಷ್ಟೋ
ಜೀವಗಳ ಬಲಿ ಕೊಟ್ಟಾರ,
ದೇವ್ರು ದಿಂಡ್ರೆಲ್ಲವು ಕೂಡ
ಜಾತಿಗಿ ಸೇರಿಸಿ ಬಿಟ್ಟಾರ
ಭೂಮಿ ಮ್ಯಾಲ ಏನಂತ
ಇಂತವರೆಲ್ಲ ಹುಟ್ಟ್ಯಾರ,
ಜಾತಿ ಜಾತಿ ಅಂತಾ ಹೇಳಿ
ಮನುಷ್ಯತ್ವವ ಸುಟ್ಟಾರ
ಎಮ್ಮಾರ್ಕೆ




