ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
“ನನ್ನೊಲವಿನ ಪಯಣ”


ಸನಿಹ ಬಾ ಮೌನವೆಲ್ಲ ತೊರೆದು
ಭಾವಗಳ ಪಥವನ್ನು ತುಳಿದು
ಒಲವಲ್ಲಿ ನಗುವನ್ನು ಕರೆದು
ಒಡಲನ್ನು ಸೇರು ಬಂಧ ಬೆಸೆದು
ಬದುಕೊಳಗೆ ನೀನಿರಬೇಕು ಒಲವೆ
ಹೃದಯದ ಕದ ತಟ್ಟು ಬೇಗ ಚೆಲುವೆ
ತವಕಿಸುತಿಹುದು ಈ ನನ್ನ ಮನವೆ
ಬಾಗಿಲಲ್ಲಿ ಕಾದು ನಿಂತಿಹೆನು ನೀ ನನ್ನ ಜಗವೆ
ಕಣ್ಣ ಅಪ್ಪುವ ಕನಸುಗಳು ಬಳಿಯಿರಲು
ಆಸೆ ಬಯಕೆ ನಿತ್ಯ ಜೊತೆಯಿರಲು
ಇನ್ನೂ ಎಷ್ಟು ದಿನ ನೀನೊಂದು ತೀರ
ದೇವರೇ ಗೀಚಿದ ಸಂಬಂಧವೇ ಸುಮಧುರ
ನಮ್ಮಿಬ್ಬರ ಬಾಳ ಪಯಣ ಹೊರಡಲಿ
ಸಂತೋಷ ತುಂಬಿರೋ ದಾರಿಯಲಿ
ನನಸಿನ ರಥ ಮುಂದೆ ಮುಂದೆ ಸಾಗಲಿ
ಎಡವದಿರುವ ಜೀವನದ ಪಥದಲಿ
ಸತೀಶ್ ಬಿಳಿಯೂರು



