ಕಾವ್ಯ ಸಂಗಾತಿ
ರಾಹುಲ್ ಸರೋದೆ
ಕಾಲ ಬದಲಾಯಿತು


ಚಿಕ್ಕವರಿದ್ದಾಗ ಅಪ್ಪ ಜಾತ್ರ್ಯಾಗ
ಹೆಗಲು ಮೇಲೆ ಕೂಡಿಸಿಕೊಂಡು
ಊರು ಸುತ್ತುತ್ತಿದ್ದರು, ಮಗ
ಕೇಳಿದಾಕ್ಷಣ ಬೇಕಾದ್ದು ಕೊಡಿಸುತ್ತಿದ್ದರು
ಕಾಲ ಬದಲಾಯಿತು.
ಈಗ ಮಗ ದೂರದ ಊರಾಗ
ಕೆಲಸಕ್ಕೆಂದು ಊರು ಬಿಟ್ಟಾನ,
ಕಾಲಕ್ಕೆ ತಕ್ಕಂತೆ ಅಪಡೇಟ್ ಆಗ್ಯಾನ
ಕೈಬೆರಳಲ್ಲಿ ಆಟೋ ಗಾಡಿ ಬುಕ್ ಮಾಡ್ತಾನ
ಕಾಲ ಬದಲಾಯಿತು.
ಬಾಳ ದಿನದ ಮೇಲೆ ನೋಡಾಕ
ಹೋದ್ರಾ ಸ್ವಿಗಿ, ಜೋಮ್ಯಾಟೋದಾಗ
ಬೇಕಾದ ಊಟ ಆರ್ಡರ್ ಮಾಡ್ತಾನ
ಊರಿಗೆ ಬಂದ ತಂದೆಯನ್ನು ಬಿಟ್ಟು
ಕಾಲ್ ಮೇಲೆ ಕಾಲ್ ಮಾತಾಡ್ತಾ ಬಹಳ ಬ್ಯೂಸಿ ಆಗ್ಯಾನ
ಕಾಲ ಬದಲಾಯಿತು.
ನಮಗಾಗಿ ಸಮಯ ಕೊಟ್ಟವರಿಗೆ
ನಾವೇನು ಕೊಟ್ಟೆವೂ ಕೆಲಸ, ಫೋನ್ ಕಾಲು,
ಮೀಟಿಂಗು, ಡೇಟಿಂಗು, ಎಲ್ಲಾ ಬರ್ತಾವು
ನಮ್ಮನ್ನು ಹೆತ್ತು ಹೊತ್ತು ಸಲುಹಿದವರಿಗೆ
ಎರಡೊತ್ತು ಮಾತು, ಒಂಚೂರು ಪ್ರೀತಿ
ನೀಡುವುದಕ್ಕಾಗುವಲ್ದು
————-
ರಾಹುಲ್ ಸರೋದೆ



