ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
” ದೀಪ”


ಹಬ್ಬದಲಿ ಹಚ್ಚೋಣ ಸಾಲು ದೀಪವ
ಕವಿದ ಕತ್ತಲೆಯ ಓಡಿಸುವ ಜಗದ ರೂಪವ
ದ್ವೇಷ ಅಸೂಯೆಯ ಉರಿಸುತ
ತೋರಿಸೋಣ ಸಹಸ್ಪಂದನದ ಸಹಮತ
ಆಗಲಿ ನಿರಾಸೆಯ ಬಾಳಿಗೆ ಆಶಾದೀಪ
ಬೆಳಗಿಸೋಣ ಬಾಳಲಿ ಸದ್ಗುಣಗಳ ಹೊಳಪ
ಬಾಳ ಬಾಂದಳದಿ ಬೆಸೆಯಲಿ ಸೌಹಾರ್ದ ಭಾವ
ಹೆಗಲಿಗೆ ಹೆಗಲು ಕೊಟ್ಟು ಮರೆಯೋಣ ನೋವ
ಅಜ್ಞಾನದ ಕತ್ತಲು ಕಳೆಯಲಿ
ಮನದ ಕೊಳೆಯು ತೊಳೆದು ಹೋಗಲಿ
ದೀಪವಾಗಿ ಹೊಳೆವ ಬೆಳಕಿನ ರೂಪ
ಪ್ರತಿದಿನ ಹಚ್ಚೋಣ ನಂದಾದೀಪ
ಪೂರ್ಣಿಮಾ ಸಾಲೆತ್ತೂರು



