ಕಾವ್ಯ ಸಂಗಾತಿ
ನೀನೆಂದರೆಪ್ರೀತಿ”
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ


ನೀನೆಂದರೆ ಪ್ರೀತಿ
ಬವಣೆ ಕಳೆದ
ಭರವಸೆ ರೀತಿ
ಭಾವ ತವರ ಪ್ರೇಮ
ನಿನ್ನೊಲುಮೆ ಸ್ನೇಹ
ನೆಲದ ಮರೆಯ ಹೇಮ
ನಿನ್ನ ಗುಣ ಮನ
ಸಿರಿ ಸಗ್ಗದ ತಾಣ
ಸುಳಿವ ಗಾಳಿಯ
ನಡುವೆ ಅರಳು
ಮಲ್ಲಿಗೆ ಹೂವು
ನಿನ್ನ ಪ್ರೇಮದಲಿ
ಮರೆವೆ ನೋವು
ನೀನೆಂದರೆ ಪ್ರೀತಿ
________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಅರ್ಥಪೂರ್ಣ ಕಾವ್ಯ ಸರ್
“ನೀನೆಂದರೆ ಪ್ರೀತಿ ” ಭಾವಪೂರ್ಣ ಕವನ ಮಸ್ತ್ ಇದೆ…
ನೀನೆಂದರೇನೇ ಪ್ರೀತಿ ಎಂದ ಕವಿಗಿದೋ ಅಭಿನಂದನೆ. ಧನ್ಯರು ನೀವು. ಎಲ್ಲರಿಗೂ ದಕ್ಕುವಂಥದ್ದಲ್ಲ ನಿರ್ಮಲ ಪ್ರೀತಿ.
ಪ್ರೀತಿಯ ಕಣಜ ತುಂಬಿದೆ.
ಅಕ್ಕಮಹಾದೇವ