ಕಾವ್ಯ ಸಂಗಾತಿ
ನಿಶ್ಚಿತ ಎಸ್
“ನಿನಗೇನು“


ಬಂದಾಕೆ ಕೇಳಿದಳು ನನ್ನ…
ಅವನೆಂದರೆ ನಿನಗೇನು…?
ಕೋಪಗೊಂಡಾಗ ಕಂಗೊಳಿಸುವ ಮುಂಜಾನೆಯ ಸೂರ್ಯನು ಅವನೇ…
ತಾಳ್ಮೆಯಿಂದ ನನ್ನ ಸಂತೈಸುವ ಮುಸ್ಸಂಜೆಯ ಚಂದ್ರನು ಅವನೇ…
ತಂಪಾದ ಮಾತುಗಳನ್ನಾಡಿ ತಣ್ಣನೆ ಬೀಸುವ ಗಾಳಿಯು ಅವನೇ….
ಜಗಳವಾದಾಗ ಪಟಪಟನೆ ಬಯ್ಯುವ ಮಳೆಹನಿಯೂ ಅವನೇ…
ಒಮ್ಮೊಮ್ಮೆ ಗುಡುಗು ಸಿಡಿಲಿನಂತೆ ಅಬ್ಬರಿಸುವ ಕೋಪಿಷ್ಟನು ಅವನೇ…
ಪ್ರೀತಿಯ ಚಿಲುಮೆಯಲಿ ನನ್ನ ತೇಲಿಸುವ ಅಲೆಯು ಅವನೇ…
ಹೂವಿಗೆ ದುಂಬಿ ಹೇಗೋ ಹಾಗೆ ನನ್ನ ಪೀಡಿಸುವ ಗೆಳೆಯನು ಅವನೇ…
ಸದಾ ನನ್ನ ಕಾಡಿಸುವ ನನ್ನ ಹೃದಯ ಕದ್ದ ಚೋರನು ಅವನೇ…
ನನ್ನೆಲ್ಲ ನಗು ಅಳುವಿನ ಒಡೆಯನು
ಅವನೇ…
ಪ್ರತಿದಿನ ನನ್ನನ್ನು ಜೋಪಾನಿಸುವ ತಾಯಿಯು ಅವನೇ…
ಬೇಕು ಬೇಡವಾದದ್ದನ್ನು ಕೊಡಿಸುವ ಜವಾಬ್ದಾರಿಯುತ ತಂದೆಯು ಅವನೇ…
ನನ್ನೆಲ್ಲ ತುಂಟಾಟಗಳಿಗೆ ಆಸರೆಯಾಗಿರುವ ಮಗುವು ಅವನೇ…
ಒಟ್ಟಾರೆಯಾಗಿ ಈ ಬದುಕಿನ ಭರವಸೆಯೂ ಅವನೇ..ಹುರುಪು ಅವನೇ…ಗೆಲುವು ಅವನೇ..ನಂಬಿಕೆಯು ಅವನೇ..
ನನ್ನೆಲ್ಲ ನಾಳೆಗಳು ಅವನೇ…
ಈಗ ನನ್ನಲ್ಲಿ ಮೂಡಿಬಂದ ಪ್ರಶ್ನೆ ಅವನಿಗೇನು ನಾನು….?
ನಿಶ್ಚಿತ ಎಸ್




