ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಂಜಿನ ಮುಸುಕು ಹೊದ್ದು ಕುಳಿತ ಧರಿತ್ರಿ ,
ಷೋಡಶ ಶೃಂಗಾರದ  ಮಧುವಣಗಿತ್ತಿ ,
ಉದಯ ರವಿಯ ಸ್ವರ್ಣ ರಶ್ಮಿಯು ತಾಗಿದಾಗ ,
ನಸು ನಾಚಿ ಕೆಂಪಾಗುವಳು
ಆ ನವಿರಾದ ಸ್ಪರ್ಶಕೆ ……

ಮದ್ಯಾಹ್ನದ ವೇಳೆಗೆ ಸುಡುವ ಸೂರ್ಯನು
ಧರಣಿಯನು ದಹಿಸುವನು.
ತಾಳ್ಮೆಯಿಂದಲೇ ಸಹಿಸುವಳು.
ಅವಳ ಮೈ ಮೇಲಿನ ಹಸಿರೆಲ್ಲವೂ ಮೆಲ್ಲನೆ
ಒಣಗಿ ಮಾಯವಾಗುವುದು….

ಸಂಜೆ ಬೀಸುವ ಶೀತಲ ಮಂದ ಮಾರುತ ,  
 ಇಡೀ ದಿನ ಕಾದು ಬೆಂದ ಪ್ರಕೃತಿಯಲಿ
ತುಸು ತಂಪಿನ ಸಿಂಚನದ ಅನುಭವ.
ಮೋಡದ ಆ ಅಂಚಿನಲ್ಲಿ ಕೈ ಬೀಸುತ್ತ
ಹೋರಟ ಆದಿತ್ಯ.

ಅದೇನು ಮುನಿಸೊ ಅವನಿಗೆ ,
ಆ ಭೂ ರಮಣೀಯ ಮೇಲೆ ,
ದಿನವೂ ಮರೆಯಾಗುವನು ಇರುಳಿಗೆ .
ಬೆಳಗಿನ ಒಲವು ರಾತ್ರಿಗಿಲ್ಲ ,
ಬಹುಶಃ ಇರುವಳೇನೊ ,
ಒಬ್ಬ ಸವತಿ ಭುವಿಗೂ …..

ಇನಿಯನ ಬರುವಿಕೆಗಾಗಿ
ಕಾಯುವ ಭೂರಮೆ ,
ವಸಂತನ ಆಗಮನಕೆ
ಹಾತೊರೆಯುವ ಪ್ರಕೃತಿ ,
ಜಗದ  ಈ  ಚಕ್ರ ಉರುಳುವುದು ಹೀಗೆ ,
ಒಮ್ಮೆ ನಗಿಸಿ , ಮತ್ತೊಮ್ಮೆ ಅಳಿಸಿ……

———-

About The Author

Leave a Reply

You cannot copy content of this page

Scroll to Top