ಕಾವ್ಯ ಸಂಗಾತಿ
ಸುವರ್ಣ ಕುಂಬಾರ
“ಪ್ರೀತಿಯ ಅರಮನೆ ಕಟ್ಟಿರಲು”

ಮುಂಗಾರು ಮಳೆಯಲ್ಲಿ ನೆನೆಯುತ್ತಿದೆ ಧರಣಿ
ನಿನ್ನನೋಟಕ್ಕೆ ಸೆರೆಯಾದ ಮನವಾಗಿದೆ ಅರಗಿಣಿ
ಜೀವನಕ್ಕೆ ನಿನ್ನೂಲವಾಗಲಿ ಅಮೃತ ವರ್ಷಿಣಿ
ಮೌನಮುರಿದು ಮಾತಾಡಲು ತಡವರಿಸುವ ನಿನ್ನಧಣಿ
ಮಳೆಹನಿ ಮುತ್ತಿಟ್ಟು ಅರಳುತ್ತಿದೆ ಬಾಳದಾರಿ
ಸಂಧಿಸುವ ತಂಗಾಳಿಯ ಅಪ್ಪುಗೆಯಲ್ಲಿ ಪ್ರೇಮಸಿರಿ
ಜನ್ಮ ಜನ್ಮದ ಅನುಬಂಧಗಳಲ್ಲಿ ಆತ್ಮಗಳ ಬೆರೆಸಿ
ಒಪ್ಪಿ ಒಪ್ಪಂದಕ್ಕೆ ಹೃದಯವೇ ಅಡಮಾನವಿರಿಸಿ
ಬರೆಯುವೆ ಗೆಳತಿ ಒಲವಿನ ಕಾದಂಬರಿ
ಪ್ರತಿಪುಟದಲು ನಿನ್ನ ನಗುವಿಗೆ ಉಸಿರಸಿರಿ
ಅರ್ಪಿಸಿ ಅನಂತದವರೆಗೆ ಜೊತೆಗಿರುವೇ ಮಯೂರಿ
ನಾವಾಗೋಣ ಒಲವ ಪಲ್ಲವಿಯಲಿ ಚಂದ್ರಚಕೋರಿ
ಮನಸ್ಸಿನೊಳಗೊಂದು ಪ್ರೀತಿಯ ಅರಮನೆ ಕಟ್ಟಿರಲು
ಸುಸ್ವಾಗತಕ್ಕೆ ಆಸೆ ಹೂತೋರಣವಾ ಅಲಂಕಾರಿಸಿರಲು
ಬದುಕಿನ ಪಥದಲ್ಲಿ ನೋವುನಲಿವಿಗೆ ಜೊತೆಗಿರಲು
ಸಪ್ತಪದಿಯ ಶಾಸ್ತ್ರ ಮಾಡಿಕೊಳುವ ಒಂದಾಗಲು
————————–

ಸುವರ್ಣ ಕುಂಬಾರ



