ಕಾವ್ಯ ಸಂಗಾತಿ
ಅಶ್ವಿನಿ ಬಸವರಾಜ ಪಾಟೀಲ
“ವಿಶ್ವವೇ ಲಿಂಗ”


ಭೂಮಿ ತಿರುಗುತ್ತಿದೆ
ನಾವು ಎದ್ದಿರಲಿ
ಬಿದ್ದಿರಲಿ ಬದುಕಿರಲಿ
ರಜೆ ತೆಗೆದುಕೊಂಡಿಲ್ಲ
ಅದೆಷ್ಟೋ ಗ್ರಹಗಳು
ಸೂರ್ಯನ ಸುತ್ತ
ಸುತ್ತುತ್ತಿವೆ
ಇಲ್ಲಿ ಗುಡಿಯಲ್ಲಿ
ನವಗ್ರಹ ಪೂಜೆ
ಚಂದ್ರ ಗುರು ಶುಕ್ರ
ಶನಿ ರಾಹು ಕೇತುವಿನ
ನಿತ್ಯ ಕಾಟ
ಪೂಜೆ ಹವನ ಹೋಮ
ನಿಂತಿಲ್ಲ
ಅಂದೇ ಬಸವಣ್ಣ ಹೇಳಿದ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ
ವಿಶ್ವವೇ ಲಿಂಗ
ಅದನ್ನರಿಯದ
ನಾವು ನೀವು ಮಂಗ
————————-
ಅಶ್ವಿನಿ ಬಸವರಾಜ ಪಾಟೀಲ




ಅತ್ಯುತ್ತಮ ಕವನ
ಸತ್ಯ ಮಾತು
ಸುಂದರ ಕವಿತೆ ಮೇಡಂ
ಅಶ್ವಿನಿ ಬಸವರಾಜ ಪಾಟೀಲ ಮೇಡಂ ಕವನ ಸುಂದರವಾಗಿದೆ ನಿರಂತರ ಬರೆಯಿರಿ
Ok Geeta avare
Very good poem