ಕಾವ್ಯ ಸಂಗಾತಿ
ಪ್ರಮೋದ ಜೋಶಿ
“ನಮಗೆ ನಾವೇ ಮೆರೆಯೋಣ”

ಮಾಡಲಾದರೂ ಏನು
ಮರವಿಂದು ಸಸಿಯಾಯ್ತು
ಹರೆ ಬರುವುದೆಂದು ಖುಷಿಪಡಲೇ
ಶ್ರಮದ ವ್ಯರ್ಥಕೆ ದುಃಖಿಸಲೇ
ಅರಿವಿನ ಅರಿವು ಈಗಾಯ್ತು
ಬೋರ್ಗಲ್ಲ ಮೇಲೆ ನೀರು ಸುರಿದಿದ್ದು
ಹರಯದ ಆಯು ಮುಗಿದರೂ
ಹತ್ತಬೇಕು ಒಂದನೆ ಮೆಟ್ಟಿಲು
ಅಳುಕಿ ಅಳುವದಕ್ಕಿಂತಾ
ದುಡಿದು ಬದುಕುವುದು ಲೇಸು
ಸಸಿ ಮತ್ತೆ ಬೆಳೆಯಲು
ಬೇಲಿ ಬೇಕು ಆಸುಪಾಸು
ಇಡದಿದ್ದರೆ ನೀಗಾ ಕಳುವಿಗೆ ಜಾಗಾ
ಎಚ್ಚರಿತ ರಕ್ಷಣೆ ಬೇಕೇಬೇಕು
ನಿರ್ಲಕ್ಷ್ಯದಿ ಕಳೆದ ಕ್ಷಣಕೆ
ಒಪ್ಪಿ ತಲೆ ಬಾಗಲೇಬೇಕು
ದುಡಿಯಲು ಯಾವ ಭಯವಿಲ್ಲಾ
ಆಯುವಿನ ಕೃಪೆ ಬೇಕೇ ಬೇಕು
ಬರುವುದು ಹೋಗುವುದು ಇದ್ದದ್ದೆಂದು
ಬದುಕಲು ಬದುಕು ಬದುಕಬೇಕು
ಹಂಗೇ ಇಲ್ಲದ ಜೀವಿಗೆ
ಭಂಗವೆಂದೂ ಬಾರದು
ನಂಬಿಕೆಯಿಂದಲೇ ಆಗುವುದೆಲ್ಲಾ
ನಂಬಿ ಎಂದೂ ಕೆಡಬಾರದು
ಬರುವ ಕ್ಷಣ ಸ್ವಾಗತಿಸುತ
ಕಳೆದ ಕ್ಷಣ ಮರೆಯೋಣ
ಹೆಣಗುತ್ತಲಾದರು ಬದುಕಿ
ನಮಗೆ ನಾವೇ ಮೆರೆಯೋಣ
ಪ್ರಮೋದ ಜೋಶಿ





,Kavan chennagide Devar anugrah irarali
ಬದುಕಲು ಬದುಕು ಬದುಕಬೇಕು super pramodji hats off .
ಕವನ ತುಂಬಾ ಚನ್ನಾಗೀ ಮೂಡಿ ಬಂದಿದೆ ಸರ್ ಸೂಪರ್