ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಗಜಲ್

ನಿನಗೂ ಒಂದು ವ್ಯಕ್ತಿತ್ವವಿದೆ
ತಾಳ್ಮೆಯಿಂದಿರು ಮನವೇ /
ನಿನಗೂ ಒಂದು ಅಸ್ತಿತ್ವವಿದೆ
ಸಹನೆಯಿಂದಿರು ಮನವೇ /
ಉರಿಯುವ ಬೆಂಕಿಗೆ ತುಪ್ಪ
ಸುರಿಯುವ ಕಾಲವಿದು /
ನಿನಗೂ ಒಂದು ಅಸ್ಮಿತೆಯಿದೆ
ತಲ್ಲಣಿಸದಿರು ಮನವೇ /
ಗಾಳಿ ಬಂದಾಗ ತೂರಿಕೊಳ್ಳುವ
ಜಾಣರ ಲೋಕವಿದು /
ನಿನಗೂ ಒಂದು ಕಾಲವಿದೆ
ಮೌನಿಯಾಗಿರು ಮನವೇ /
ತಮ್ಮದೇ ವ್ಯವಹಾರದಲ್ಲಿ
ಎಲ್ಲರೂ ಮುಳುಗಿಹರು /
ನಿನಗೂ ಒಂದು ಗೌರವವಿದೆ
ಶಾಂತಿಯಿಂದಿರು ಮನವೇ /
ಸರ್ವಮಂಗಳ ಜಯರಾಂ.





Nice
Savita Deshmukh
Nice mam
Savita Deshmukh