ಕಾವ್ಯ ಸಂಗಾತಿ
ಪ್ರೀತಿ ಹನಿಗಳು
ಗೀತಾ ಆರ್

ಕಳೆದು ಹೋದೇ ನಾ ನಿನ್ನಾ
ಕಣ್ಣಾ ನೋಟಕ್ಕೆ ಅಂದು…
ಹುಡುಕುತ್ತಿವೆ ನನ್ನ ಕಣ್ಗಳು
ನಿನ್ನ ಹೃದಯದಲ್ಲಿ ಇಂದು…
ನಾನು ಸಾಯುವವರೆಗೂ ನಿನ್ನ ಪ್ರೀತಿ
ನನ್ನೊಡನಿರಲಿ ಗೆಳೆಯ,ಇಲ್ಲ ನಿನ್ನ
ಪ್ರೀತಿ ಇರುವವರೆಗೆ ನನ್ನ ಆಯಸ್ಸು
ನನ್ನೋಡಲಲ್ಲಿರಲಿ ಒಡೆಯ.
ಪ್ರೀತಿ ತೊರೆದು ನನ್ನ ಬಿಟ್ಟು
ಮುಂದೆ ಹೋದಾ ಕತ್ತಲಲ್ಲಿ
ನನ್ನೀನೀಯಾ …..
ಹುಡುಕುತ್ತಿರುವೆ ಅವನಿಂದೆ
ದೀಪ ಹಿಡಿದು ಕಳೆದುಹೋದ
ನನ್ನ ಹೃದಯ…..
ಗೀತಾ ಆರ್.




