ಕಾವ್ಯ ಸಂಗಾತಿ
ಮಮತಾ ಜಾನೆ
ನಗುತಿರು ಮನವೇ

ನಗುತಿರು ಮನವೇ
ನಿನ್ನ ನೋವು ನೀ ಮಾತ್ರ ಅರಿವೆ
ಯಾರೂ ಸಂತೈಸುವರಿಲ್ಲ
ನಿನ್ನವರೆ ನೋವು ಕೊಟ್ಟಾಗ
ನೋಯಿಸಿದರೂ ನಗುತಿರು ಮನವೇ
ಜೀವನ ನಿಂತ ನೀರಲ್ಲ
ಬದುಕು ಸಾಗುವುದು
ಯಾರಿದ್ದರು ಇಲ್ಲದಿದ್ದರೂ
ಬದಲಾವಣೆ ಜಗದ ನಿಯಮ
ಅದು ಋಣಾತ್ಮಕವಗಿರದೆ
ಧನಾತ್ಮಕವಾಗಿರಲಿ
ನೋಯಿಸಿದವರು ಪರಿತಪಿಸುವಂತೆ
ನಗುತಿರು ಮನವೇ
ನೋವು ನಲಿವಿನ ದಾರಿಯಲ್ಲಿ
ಸೋಲದೆ ಸಾಗು
ಬದುಕಿನ ಪಯಣದಲಿ
ಈ ಬದುಕೇ ಏರು-ಪೇರು
ಇಲ್ಲಿ ಯಾರಿಗಿಲ್ಲ ಯಾರು
ಬಾಳಲಿ ಏನೆಯಾದರು
ನಗುವಿರಲಿ ಮುಖದಲಿ ಚೂರು….
ಮಮತಾ ಜಾನೆ






ಕಷ್ಪನಷ್ಟಡಳು ಲೆಕ್ಕಿಸದೆ,ದುಖದುಮ್ಮಾನ ಮೆಟ್ಟಿ ನೊಂದ ಮನವ ಸಂತೈಸುವ ಕವಯತ್ರಿಯ ಧೈರ್ಯದ ಮಾತು,ಸಾಂತ್ವಾನ ಶ್ಲಾಘನೀಯವಾಗಿದೆ.
ಡಾ.ವಿಜಯಕುಮಾರ ಪರುತೆ,ಕಲಬುರ್ಗಿ
ಧನ್ಯವಾದಗಳು ಸರ್.
ಏನೇ ನೋವಿದ್ದರೂ, ಏರು ಪೇರು, ಗಳಾದರು ಜೀವನವನ್ನು ಎದುರಿಸುವ ಧೈರ್ಯ ತಂದುಕೊಂಡು ಮುಂದೆ ಸಾಗು ಎಂದು ಹೇಳುವ ಮಾತು ಅವಿಸ್ಮರಣೀಯ ಅನುಭವ.
ಚೆನ್ನಾಗಿ ಬರೆದಿರುವಿರಿ.