ಕಾವ್ಯ ಸಂಗಾತಿ
ನಾರಾಯಣ ರಾಠೋಡ
“ಅಪ್ಪಾ ಎಂಬ ಆಲದ ಮರ”


ಅಪ್ಪಾ ಎಂಬ ಆಲದ ಮರವು
ತಂಪು ನೆರಳು ನೀಡಿದನು
ಆಗಸದಷ್ಟು ವಿಶಾಲ ಮನವು
ಎಲ್ಲವು ನನಗೆ ಅರ್ಪಿಸಿದನು
ಹರಿದ ಅಂಗಿಯ ತಾನು ತೊಟ್ಟು
ನನ್ನಯ ಮಾನ ಮುಚ್ಚಿದನು
ತಾನು ಕಾಣಲು ಆಗದ ಕನಸನು
ನನ್ನಯ ಕಣ್ಣಲಿ ಕಾಣುವನು
ನನ್ನಯ ಹೊಟ್ಟೆಗೆ ಅನ್ನವ ಹಾಕಲು
ತಾನು ಹಸಿವನು ಕಾಣುವನು
ನನ್ನಯ ಕಾಲಿಗೆ ಚಪ್ಪಲಿ ಕೊಡಿಸಿ
ತಾನೇ ಬರಿಗಾಲದಿ ನಡೆವನು
ನನ್ನಯ ಬದುಕು ಬಂಗಾರವಾಗಲು
ತಾನು ಬೆವರನು ಸುರಿಸುವನು
ತನ್ನಯ ಆಸೆ ಎದೆಯಲಿ ಬಚ್ಚಿಟ್ಟು
ನನ್ನಯ ಬದುಕಿಗೆ ಬೆಂಗಾವಲು ಆಗಿಹನು
ಮಳೆ ಚಳಿ ಎನ್ನದೆ ಬಿರುಬಿಸಿಲೆನ್ನದೆ
ತಾನೇ ಬೆನ್ನು ಒಡ್ದುವನು
ಬದುಕಿನ ಬಂಡಿಯ ಎಳೆಯುವನು
ನಮಗೆ ಆಸರೆ ಯಾಗಿಹನು
ನಾರಾಯಣ ರಾಠೋಡ



