ಕಾವ್ಯ ಸಂಗಾತಿ
ʼನನ್ನ ಶರಣರುʼ
ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಎತ್ತ ಹೋದರು
ನನ್ನ ಶರಣರು
ಸತ್ಯ ಸಾಧಕ
ಯೋಧರು
ನಿತ್ಯ ಅನುಭವ
ಲಿಂಗ ಜಂಗಮ
ಮರ್ತ್ಯ ಕಟ್ಟಿದ
ಭೂಪರು
ಹಾಸಿ ದುಡಿದು
ಹಂಚಿ ತಿಂದರು
ಶಾಂತಿ ಸಮತೆಯ
ಶ್ರೇಷ್ಠರು
ಜಾತಿ ಕಸವ
ಕಿತ್ತೊಗೆದು
ಭಕ್ತಿ ಬಿತ್ತಿದ ರೈತರು
ಜಗದಿ ಮೆರೆವ
ಬಸವ ತಂದೆಯ
ಮಮತೆ ಕರುಣೆ
ಮಕ್ಕಳು
ಮತ್ತೆ ಬರುವರು
ನನ್ನ ಶರಣರು
ಸುತ್ತು ಕಹಳೆ
ಮೊಳಗಿತು
ವಿಶ್ವ ಪ್ರೇಮ
ನ್ಯಾಯ ನೀತಿ
ನನ್ನ ಶರಣರು
ಅಮರರು
ಡಾ ಶಶಿಕಾಂತ ಪಟ್ಟಣ ರಾಮದುರ್ಗ





Beautiful poem Sir
ನನ್ನ ಶರಣರು
ಎಲ್ಲೂ ಹೋಗಿಲ್ಲಾ.
ಇಲ್ಲಿಯೇ… ನಮ್ಮ ಜೊತೆ………
ಬಹಳ ಚೆನ್ನಾಗಿ ನೋಡಿ ಶರಣರ ಬಗ್ಗೆ ಭಾವ ಸವಿತಾ ದೇಶಮುಖ
ಅರ್ಥ ಪೂರ್ಣ ಕವನ ಸರ್
ವ್ಹಾ ಎಷ್ಟು ಅರ್ಥಗರ್ಭಿತ ಕವನ ಸರ್
ಶರಣರು ಬರುತ್ತಾರೆ ಎನ್ನುವ ಭರವಸೆ ಇದೆ
ಕಲ್ಯಾಣ ಕ್ರಾಂತಿಯ ನಂತರದ ಕಾಲದಲ್ಲಿ ಶರಣರ ಮೇಲೆ ಹಲ್ಲೆ ಗೈದ ವೈದಿಕರ ಕುತಂತ್ರ
ಮತ್ತೆ ಬರುವರು ಶರಣರು ಮಸ್ತ್ ಮಸ್ತ್ ಕವನ ಇದೆ ಸರ್
ನೀವು ದಾರ್ಶನಿಕರು,ಬಸವ ತತ್ವದ ಪ್ರತಿಪಾದಕರು,ಪಂಡಿತರು,ಹಾಗೂ ವಾಗ್ಮಿಗಳು.
ಶರಣರು ಎಂದೆಂದಿಗೂ ಅಮರರು…ಪ್ರತಿಯೊಬ್ಬರಲ್ಲೂ ಅವರಿದ್ದಾರೆ…
ಜಾಗೃತ ಮಾಡಬೇಕು ಅಡಿಗಡಿಗೆ ನಿಮ್ಮ ಕವನ ಗಳಿಂದ…. ಸರ್
ಸುತೇಜ