ಗಜಲ್ ಲೋಕ
ಎ.ಹೇಮಗಂಗಾ
ಗಜಲ್

ಬರಡಾದ ಮನದ ಹೊಲಕೆ ಒಲವ ಮಳೆ ಸುರಿಸಿದವನು ನೀನು
ಬಾಳ ಬಾನಿನ ಚೆಲುವಿಗೆ ಇಂದ್ರಚಾಪ ಮೂಡಿಸಿದವನು ನೀನು
ಇಷ್ಟು ಕಾಲ ಬತ್ತಿ ಹೋದ ಬಯಕೆಯ ಒರತೆ ಮತ್ತೆ ಚಿಮ್ಮುತಿದೆ
ಬಣ್ಣ ಮಾಸಿದ ಕನಸಿಗೆ ಹೊಸ ರಂಗನು ಲೇಪಿಸಿದವನು ನೀನು
ನಡೆವ ಹಾದಿಯದು ಮರುಭೂಮಿಯಾಗಿ ದಣಿವು ಆವರಿಸಿತ್ತು
ಪ್ರೀತಿ ಹಸಿರನು ಚಿಗುರಿಸಿ ಬೇಗೆ ಮರೆಸಿ ತಣಿಸಿದವನು ನೀನು
ಕಾಡುವ ನೋವು ಪ್ರತಿ ಇರುಳೂ ನಿದಿರೆಯ ಕಸಿಯಿತೇಕೋ
ಅಪ್ಪಿ ಮುದ್ದಿಸಿ ಮಾಂತ್ರಿಕನಂತೆ ಮಂಪರು ತರಿಸಿದವನು ನೀನು
ನಿನ್ನ ಸಹಚರ್ಯದಿ ಪ್ರತಿ ಕ್ಷಣವೂ ಮುದ ಕಂಡಿಹಳು *ಹೇಮ*
ಆತ್ಮ ಸಂಗಾತಿಯಾಗಿ ಬದುಕಿಗೆ ಅರ್ಥ ಉಳಿಸಿದವನು ನೀನು
ಎ. ಹೇಮಗಂಗಾ





ಬರವಣಿಗೆ.ಯ ಶೈಲಿ ಪ್ರಬುದ್ಧ ವಾಗಿ ಮೂಡಿ ಬಂದಿದೆ.ಆತ್ಮ ಸಂಗಾತಿಯ ಸಾಂಗತ್ಯದ ನೆನಪುಗಳನ್ನು ನವಿರಾಗಿ ಚಿತ್ರಿಸುದ್ದೀರಿ. ಗಜಲ್ ಬರವಣಿಗೆ ಯಲ್ಲಿ ನಿಮ್ಮ ಕೈ ಪಳಗಿರುವುದಂತು ಸತ್ಯ.