ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನ್ನಾ ಕರೇನಿನಾ, ಯುದ್ಧ ಮತ್ತು ಶಾಂತಿ ಎಂದ ಕೂಡಲೇ ನೆನಪಾಗುವುದು ವಿಶ್ವ ವಿಖ್ಯಾತ  ರಷ್ಯನ್  ಕವಿ ಲೇಖಕ, ಅಧ್ಯಾತ್ಮಿ  ಲಿಯೋ ಟಾಲ್ ಸ್ಟಾಯ್.  ಆದರೇ ಸೋಫಿಯಾ  ಟಾಲ್ ಸ್ಟಾಯ್ ಬಹಳ ಜನಕ್ಕೆ  ಗೊತ್ತಿಲ್ಲ, ಸೋಫಿಯಾ  ಲಿಯೋ ಟಾಲ್ ಸ್ಟಾಯ್ ಅವರ ಪತ್ನಿ.

ಟಾಲ್ ಸ್ಟಾಯ್ ರ   “ಯುದ್ಧ ಮತ್ತು ಶಾಂತಿ” ಮತ್ತು “ಅನ್ನಾ ಕರೆನಿನಾ” ಬರಹದಲ್ಲಿ ಒಬ್ಬ ಮಹಿಳೆಯ ನೆರಳು  ಕಂಡುಬoದರೆ ಅದು ಸೋಫಿಯಾ ಟಾಲ್‌ಸ್ಟಾಯ್.
ಈಕೆ ಕೇವಲ ಟಾಲ್‌ಸ್ಟಾಯ್ ಅವರ ಪತ್ನಿಯಾಗಿರಲಿಲ್ಲ. ಅವಳು ಟಾಲ್ ಸ್ಟಾಯ್ ಬರಹಗಳ  ಸಂಪಾದಕಿ, ನಕಲುಗಾರ್ತಿ, ಟೈಪಿಸ್ಟ್, ಸಾಹಿತ್ಯ ವ್ಯವಸ್ಥಾಪಕಿ, ಪ್ರಕಾಶಕಿಯೂ ಆಗಿರುತಿದ್ದರು. ಆಕೆ ಹದಿಮೂರು ಮಕ್ಕಳ ತಾಯಿಯೂ ಹೌದು ಆಕೆ ಪ್ರತಿಭಾನ್ವಿತ, ಪ್ರಕ್ಷುಬ್ಧ ವ್ಯಕ್ತಿಗೆ ಭಾವನಾತ್ಮಕ ಆಧಾರವಾಗಿದ್ದವರು
ಎನ್ನುವುದು ಜನಜನಿತ . ಟಾಲ್ ಸ್ಟಾಯ್ ಬರೆದ ” ಯುದ್ಧ ಮತ್ತು ಶಾಂತಿಯನ್ನು” ಮೂಲ ಪ್ರತಿ ಅದು ನೀಟಾದ, ಅಕ್ಷರಗಳ ತಪ್ಪಿಲ್ಲದ ಹಸ್ತಪ್ರತಿಯಾಗಿರಲಿಲ್ಲ – ಅದು ಅವ್ಯವಸ್ಥೆಯ  ಗೀಚಿದ ಪುಟಗಳ, ಚದುರಿದ ವಿಚಾರಗಳ, ಕಚ್ಚಾ ಬರಹವಾಗಿತ್ತು . ಅವಳು ಅದನ್ನು ಏಳು ಬಾರಿ ಕೈ ಬರಹದಲ್ಲಿ ನಕಲು ಪ್ರತಿ ಸಿದ್ದ ಮಾಡಿಕೊಂಡಳು , ಕವಿಯ   ಭಾವರ್ಥವನ್ನು  ಅರ್ಥೈಸಿಕೊಂಡು ಇಂದು ನಮಗೆ ತಿಳಿದಿರುವ ಮೇರುಕೃತಿಯಾಗಿ ರೂಪಿಸಿಕೊಟ್ಟವಳು ಇದೇ ಸೋಫಿಯಾ ಟಾಲ್ ಸ್ಟಾಯ್.

ಸೋಫಿಯಾ  ಟಾಲ್ ಸ್ಟಾಯ್ ಅವರ ಕೃತಿ ರಚನೆಯಲ್ಲಿನ ಕೆಲಸವಲ್ಲದೆ  ಎಸ್ಟೇಟ್ ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸುತ್ತಿದ್ದಳು, ಪುಸ್ತಕ ಪ್ರಕಾಶಕರೊಂದಿಗೆ ಮಾತುಕತೆ ನಡೆಸುತಿದ್ದವಳು  ಇದೇ ಸೋಫಿಯಾ. ಟಾಲ್ ಸ್ಟಾಯ್ ಆಧ್ಯಾತ್ಮಿಕ ಪ್ರಪಂಚದಲ್ಲಿ ಮುಳುಗಿದಾಗ   ಸಂಸಾರ ನಿಭಾಯಿಸಿಕೊಂಡು ಹೋದವಳು ಅವಳು, ಮಕ್ಕಳನ್ನು ಬೆಳೆಸಿದಳು.
ಟಾಲ್ ಸ್ಟಾಯ್ ಲೌಕಿಕ, ಭೌತಿಕ ಜಗತ್ತನ್ನು ತೊರೆದಾಗಲೂ ಅವಳು ಕುಟುಂಬವನ್ನು ಜೀವಂತವಾಗಿಟ್ಟಳು. ಅವಳ ದಿನಚರಿಗಳಲ್ಲಿ ಅವಳು ತೀಕ್ಷ್ಣ, ಗ್ರಹಿಕೆ, ಹಾಸ್ಯಮಯ ಮತ್ತು ನೋವಿನಿಂದ ಕೂಡಿದ್ದರೂ ಆಕೆ ಪ್ರಾಮಾಣಿಕಳಾಗಿದ್ದಳು.

ಟಾಲ್‌ಸ್ಟಾಯ್  ರೈಲ್ವೇ  ಸ್ಟೇಷನ್ ನಲ್ಲಿ ನಿಧನರಾದಾಗ, ಸೋಫಿಯಾ  ಆ ಸ್ಥಳಕ್ಕೆ  ಬಂದಾಗ . ಜನಜಂಗುಳಿ ಹೊರಗೆ ನಿಂತು ಪರದಾಡಬೇಕಾಗಿತ್ತು.

ಸೋಫಿಯಾ  ಟಾಲ್ ಸ್ಟಾಯ್ ಅವರ ಆಧಾರಸ್ತಂಭವಾಗಿದ್ದಳು. ಟಾಲ್ ಸ್ಟಾಯ್ ಅವರ ಸಾಹಿತ್ಯ ಕ್ರಾಂತಿಯ ಸಹ-ಶಿಲ್ಪಿ ಆಕೆ . ಮೇರುಕೃತಿಗಳ ಹಿಂದಿನ ಅದೃಶ್ಯ ಶಾಯಿ ಆಗಿದ್ದವಳು ಆಕೆ . ಸೋಫಿಯಾಳನ್ನು  ನೆನೆಯದೆ  ಟಾಲ್‌ಸ್ಟಾಯ್ ಅವರನ್ನು  ಹಾಡಿ ಹೊಗಳಿದರೆ  ಅದು ಅಪೂರ್ಣ ಎನ್ನುವುದು  ಕಟು ಸತ್ಯ ಎನ್ನುವುದು ಅಲ್ಲಿನ ಸಾಹಿತ್ಯ ವಲಯದ ಭಾವನೆ.  ಟಾಲ್ ಸ್ಟಾಯ್ ಅವರ  ಶ್ರೇಷ್ಠತೆಯ ಭಾರವನ್ನು ಹೊತ್ತ ಮತ್ತು ಜನಮಾನಸದಲ್ಲಿ ಅವರನ್ನು ಇರುವಂತೆ ನೋಡಿಕೊಂಡ ಮಹಿಳೆ  ಈ ಸೋಫಿಯಾ ಎನ್ನುವುದೇ ಹೆಗ್ಗಳಿಕೆ.


About The Author

2 thoughts on “ಲಿಯೊ ಟಾಲ್‌ಸ್ಟಾಯ್‌ ಅವರ “ವಾರ್‌ ಆಂಡ್ ಪೀಸ್” ಮತ್ತು “ಅನ್ನಾಕರೆನಿನ”ಗಳ ಹಿಂದಿನ ಶಕ್ತಿ ಸೋಫಿಯಾ ಟಾಲ್‌ ಸ್ಟಾಯ್.ಅಂಗ್ಲಲೇಖನದ( Emran Emon)ಕನ್ನಡಾನುವಾದ ರೇಖಾ ಶಂಕರ್”

Leave a Reply

You cannot copy content of this page

Scroll to Top