ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರಿಗೆ ದೊರೆತ ಸ್ವತಂತ್ರವಿದು ?
ದಾಸ್ಯ ಕಳಚಿದ್ದು ದೇಹಗಳಿಗೆ .
ಮನಸ್ಸುಗಳು ಇನ್ನೂ ಯಾರದ್ದೋ
ಕಡಿವಾಣದಲ್ಲೇ ನರಳುತ್ತಿವೆ .
ಮನದ ನರ ನಾಡಿಗಳು ಅವರ
ಕೈಯಲ್ಲಿ ಲಗಾಮುಗಳಾಗಿವೆ .

ಯಾರಿಗೆ ದೊರೆತ ಸ್ವತಂತ್ರವಿದು ?
ಗುಲಾಮಗಿರಿ ಪೂರ್ಣ ತೊಲಗಿಲ್ಲ
ರೂಪಂತರವಾಗಿದೆ .
ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ
ಬೇರೆಯವರ ಹಿಡಿತದಲ್ಲಿದ್ದೇವೆ .
ಅಂದು ಪರಕೀಯರ ಅಡಿಯಾಳು
ಇಂದು ನಮ್ಮವರಿಗೆ ನಾವು ಅಳು .

ಯಾರಿಗೆ ದೊರೆತ ಸ್ವಾತಂತ್ರವಿದು ?
ಹಗಲು ದರೋಡೆ , ಮೋಸ , ವಂಚನೆ
ಉಸಿರಾಡಿಕೊಂಡು ರಾಜಾರೋಷವಾಗಿ    
 ಮೆರೆಯುತ್ತಿವೆ .
ಭಹುಷಃ ಹಿಂತಹ ಕೃತ್ಯಗಳಿಗೆ
ದೊರಕಿತೇನೋ  ಸ್ವಾತಂತ್ರ್ಯ .
ಇಲ್ಲಿ ಸತ್ಕಾರ್ಯಕ್ಕೆ ಪರವಾನಿಗೆ ಅಗತ್ಯ
ಪಾಪ ಕರ್ಮಗಳ ನಡೆ ನಿರ್ಭಯ

ಯಾರಿಗೆ ದೊರೆತ ಸ್ವತಂತ್ರವಿದು?
ಪ್ರಾಮಾಣಿಕತೆ , ಸತ್ಯ , ನ್ಯಾಯ ,
ಧರ್ಮಗಳು ತುರ್ತು ನಿಗಾ ಘಟಕದಲ್ಲಿ
ಆಗಲೋ ಈಗಲೋ ಕೊನೆ ಉಸಿರು
ಚೆಲ್ಲುವ ಸ್ಥಿತಿ ಇದೆ .
ಚಿಕಿತ್ಸಕರಿಗಾಗಿ ಕಾಯುತಿವೆ .

ಯಾರಿಗೆ ದೊರೆತ ಸ್ವತಂತ್ರವಿದು ?
ಅವರ್ಯಾರೋ ಪರದೇಸಿಗಳು
ಹೆಣ್ಣು , ಹೊನ್ನು , ಮಣ್ಣನ್ನು
ಕೊಳ್ಳೆ ಹೊಡೆದರು .
ಇವರ್ಯಾರೋ ನಮ್ಮವರೇ
ನಮ್ಮನ್ನು ದೋಚುತಿಹರು .

ಯಾರಿಗೆ ದೊರೆತ ಸ್ವತಂತ್ರವಿದು
ಉಂಡವರಿಗೆ ಜೀರ್ಣಿಸಿಕೊಳ್ಳುವ
ಪೀಕಲಾಟ .
ಊಣಲಾರದವರಿಗೆ ಒಂದು
ತುತ್ತಿಗಾಗಿ ಹೋರಾಟ .
ಹಕ್ಕಿಗಾಗಿ ಹಾತೊರೆಯುತಿವೆ
ಬಡಪಾಯಿ ಮನಸುಗಳು .

ಯಾರಿಗೆ ದೊರೆತ ಸ್ವತಂತ್ರವಿದು ?
ಒಂದೆಡೆ ಕೊಳೆಯುವಷ್ಟು ಸಿರಿ
ಇನ್ನೊಂದೆಡೆ ಕಿತ್ತು ತಿನ್ನುವ ದಾರಿದ್ರ್ಯ
ಎಲ್ಲವೂ ಇದ್ದಲ್ಲಿ ಇನ್ನೂ ಬೇಕೆನ್ನುವ
ಸ್ವಾರ್ಥ ಏನೂ ಇಲ್ಲದ ಖಾಲಿ ಕೈಗೆ
ಹಂಚಬೇಕೆನ್ನುವ ತುಡಿತ .
ಸಮಾನತೆಗಾಗಿ ಕೂಗುತಿವೆ
ನೊಂದ ಆತ್ಮಗಳು .

ಯಾರಿಗೆ ದೊರೆತ ಸ್ವತಂತ್ರವಿದು
 ದೊರೆತು ಇಷ್ಟು
ವರ್ಷಗಳು ಗತಿಸಿದರೂ
ಯಾರಿಗೆ ದೊರೆಯಿತು ಸ್ವತಂತ್ರ…. ?
ಇನ್ನೂ ಯಾರು ಯಾರಿಗೆ
ಯಾವಾಗ ಸಿಗುವುದೋ  
ನಿಜವಾದ ಸ್ವಾತಂತ್ರ್ಯ….

ಯಾರಿಗೆ ದೊರೆತ ಸ್ವತಂತ್ರವಿದು ?
ನಾವು ಭಾರತೀಯರು
ಸಕಲ ಸಹಿಷ್ಣುತೆ ಉಳ್ಳವರು
ಕಾಯುವೆವು ಸಕಾಲಕ್ಕೆ . ಅಲ್ಲಿಯವರೆಗೂ
ಈ ಪ್ರಶ್ನೆಗೆ  ಉತ್ತರದ ಹುಡುಕಾಟ
ಇನ್ನೂ ಜಾರಿಯಲ್ಲಿದೆ……


About The Author

2 thoughts on ““ಯಾರಿಗೆ ದೊರೆತ ಸ್ವಾತಂತ್ರ್ಯ” ಪರವಿನ ಬಾನು ಯಲೀಗಾರ ಅವರ ಕವಿತೆ”

  1. ಈಗಿನ ಕಾಲದ ನೈಜ ಘಟನೆಗಳನ್ನು ಎಳೆ ಎಳೆಯಾಗಿ ಬರೆದಿದ್ದೀರಿ. ಇದೆ ವಸ್ತು ಸ್ಥಿತಿ.

Leave a Reply

You cannot copy content of this page

Scroll to Top