ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಗುತಿರು ಮನವೇ
ನಿನ್ನ ನೋವು ನೀ ಮಾತ್ರ ಅರಿವೆ
ಯಾರೂ ಸಂತೈಸುವರಿಲ್ಲ
ನಿನ್ನವರೆ ನೋವು ಕೊಟ್ಟಾಗ

ನೋಯಿಸಿದರೂ ನಗುತಿರು ಮನವೇ
ಜೀವನ ನಿಂತ ನೀರಲ್ಲ  
ಬದುಕು ಸಾಗುವುದು
ಯಾರಿದ್ದರು ಇಲ್ಲದಿದ್ದರೂ

ಬದಲಾವಣೆ ಜಗದ ನಿಯಮ
ಅದು ಋಣಾತ್ಮಕವಗಿರದೆ
ಧನಾತ್ಮಕವಾಗಿರಲಿ
ನೋಯಿಸಿದವರು ಪರಿತಪಿಸುವಂತೆ

ನಗುತಿರು ಮನವೇ
ನೋವು ನಲಿವಿನ ದಾರಿಯಲ್ಲಿ
ಸೋಲದೆ ಸಾಗು
ಬದುಕಿನ ಪಯಣದಲಿ

ಈ ಬದುಕೇ ಏರು-ಪೇರು
ಇಲ್ಲಿ ಯಾರಿಗಿಲ್ಲ ಯಾರು
 ಬಾಳಲಿ ಏನೆಯಾದರು
ನಗುವಿರಲಿ ಮುಖದಲಿ ಚೂರು….




About The Author

3 thoughts on “ಮಮತಾ ಜಾನೆ ಅವರ ಕವಿತೆ,ನಗುತಿರು ಮನವೇ”

  1. ಕಷ್ಪನಷ್ಟಡಳು ಲೆಕ್ಕಿಸದೆ,ದುಖದುಮ್ಮಾನ ಮೆಟ್ಟಿ ನೊಂದ ಮನವ ಸಂತೈಸುವ ಕವಯತ್ರಿಯ ಧೈರ್ಯದ ಮಾತು,ಸಾಂತ್ವಾನ ಶ್ಲಾಘನೀಯವಾಗಿದೆ.

    ಡಾ.ವಿಜಯಕುಮಾರ ಪರುತೆ,ಕಲಬುರ್ಗಿ

  2. ಏನೇ ನೋವಿದ್ದರೂ, ಏರು ಪೇರು, ಗಳಾದರು ಜೀವನವನ್ನು ಎದುರಿಸುವ ಧೈರ್ಯ ತಂದುಕೊಂಡು ಮುಂದೆ ಸಾಗು ಎಂದು ಹೇಳುವ ಮಾತು ಅವಿಸ್ಮರಣೀಯ ಅನುಭವ.
    ಚೆನ್ನಾಗಿ ಬರೆದಿರುವಿರಿ.

Leave a Reply

You cannot copy content of this page

Scroll to Top