ಅನುವಾದ ಸಂಗಾತಿ
ಬೆಳಕಿನೆಡೆಗೆ
ತೆಲುಗು ಮೂಲ :
ಡಾ|| ರಾಧೇಯ
ಕನ್ನಡಾನುವಾದ:
ಕೊಡೀಹಳ್ಳಿ ಮುರಳೀಮೋಹನ್



ದುಃಖಕ್ಕೆ ಛಂದಸ್ಸು ಇದೆಯೇ?
ವೇದನೆಗೆ ಅಲಂಕಾರ ಇದೆಯೇ?
ದುಃಖ ಸಹಾರಾ ಮರುಭೂಮಿಯಂತೆ ಹರಡಿದ್ದರೆ,
ವೇದನೆ ಮಧ್ಯಧರಾ ಸಮುದ್ರದಂತೆ ಆಳವಾಗಿದೆ.
ಕತ್ತಲೆಯಲ್ಲಿ ಬೆಳಕನ್ನು ಹುಡುಕುವುದು ದುಃಖ,
ಬೆಳಕಿಗಾಗಿ ಕತ್ತಲಲ್ಲಿ ಹೋರಾಡುವುದೇ ವೇದನೆ.



