ಕಾವ್ಯ ಸಂಗಾತಿ
ಜಯಶ್ರೀ.ಭ.ಭಂಡಾರಿ ಅವರ
ಗಜಲ್

ಹಿಂಡನು ತಪ್ಪಿಸಿಕೊಂಡು ದೂರದಿ ಬಂದಿದೆ ಜಿಂಕೆಮರಿ.
ಕಂಡರೆ ಕಾಡುಮೃಗಗಳು ಉಳಿಸಲಾರವು ಎಂದಿದೆ ಜಿಂಕೆಮರಿ
ಹೆದರಿದ ಹರಿಣ ಅತ್ತಿತ್ತ ನೋಡುತ್ತಾ ನಿಂತಿದೆಯಲ್ಲವೇ
ಕದಲದ ಕಂಗಳಲಿ ಮೌನಭಾಷೆ ಮಿಂದಿದೆ ಜಿಂಕೆಮರಿ.
ಉದ್ದಾದ ಕಿವಿಗಳು ನಿಮಿರಿ ಏನನ್ನೊ ಆಲಿಸುತ್ತಿವೆ.
ಮುದ್ದಾದ ಮುಖದಲಿ ಚಿಂತೆಗೆರೆಗಳ ತಂದಿದೆ ಜಿಂಕೆಮರಿ.
ಮನುಜನಂತೆ ಮಾತು ತಿಳಿದಿದ್ದರೆ ವಿಷಯ ಅರಹುತ್ತಿತ್ತು.
ಅನುಜನ ಹುಡುಕಿ ಆಡುತಾಡುತ ಕುಂದಿದೆ ಜಿಂಕೆಮರಿ.
ಮಾರೀಚಮುನಿಗಳ ವೇಷ ಹಾಕಿಕೊಂಡ ಪ್ರಾಣಿ ಜಯಾ.
ಮರಣದ ಸಮಯದಿ ಹೇಸೀತಾ ಅಂದಿದೆ ಜಿಂಕೆಮರಿ.
ಜಯಶ್ರೀ ಭಂಡಾರಿ.




