ಕಾವ್ಯ ಸಂಗಾತಿ
ಎ. ಹೇಮಗಂಗಾ
ಗಜಲ್

ಇಂದೇ ನಾನು ನಿನ್ನಿಂದ ದೂರವಾಗಲೇಬೇಕಿದೆ
ಹಿಂದೆ ನಡೆದ ಎಲ್ಲವನೂ ಮರೆಯಲೇಬೇಕಿದೆ
ಪ್ರೀತಿ ಮಾಯೆಯೆಂಬುದು ನಿಜವಲ್ಲವೇ ಹೇಳು
ಉರುಳಾಗಿಹ ಬಂಧವನು ತೊರೆಯಲೇಬೇಕಿದೆ
ಹಾಲಿನಂಥ ಮನಸಿಗೆ ಹುಳಿ ಹಿಂಡಿದವರಾರೋ
ಆರೋಪಗಳ ಬಾಣಕೆ ಬಲಿಯಾಗಲೇಬೇಕಿದೆ
ನಂಬಿಕೆಯ ಬುನಾದಿ ಕುಸಿದು ಹೋಗುತ್ತಲಿದೆ
ನೋವಿನ ಕುಲುಮೆಯಲಿ ಬೇಯಲೇಬೇಕಿದೆ
ಅರ್ಥಹೀನ ಬಾಳು ಬೇಡವಾಗಿದೆ *ಹೇಮ* ಳಿಗೆ
ಚಿರ ನಿದ್ರೆಯಲಿ ಶಾಂತಿ ಕಂಡುಕೊಳ್ಳಲೇಬೇಕಿದ
ಎ. ಹೇಮಗಂಗಾ





Beautiful ❤️
ಭಾವಪೂರ್ಣ ಗಝಲ್. ತುಂಬಾ ಚೆನ್ನಾಗಿದೆ.
ಸುಜಾತಾ ರವೀಶ್