ಕಾವ್ಯ ಸಂಗಾತಿ
ಉತ್ತಮ ಎ. ದೊಡ್ಮನಿ
ʼವಿದಾಯʼ

ಮಳೆ ಹೊತ್ತು ತೀರಗುವ
ಮೋಡ
ಒದ್ದೆಯಾದ ಈ ನೆಲ
ಚಿಗುರೋಡೆದ ಮರ-ಬಳ್ಳಿ
ಮಧುವಣಾಗಿತ್ತಿಯಾಗಿ ನಿಂತ
ಅಡವಿ
ಎಲ್ಲವೂ ಕಳಚಿಕೊಂಡು ಬೆತ್ತಲಾಗಬೇಕು
ಇನಿಯಾ…
ದೋಚಲು ಇನ್ನೇನೂ ಇಲ್ಲ
ನೆನಪುಗಳ ಹೊರತು
ಅದು ನನ್ನಲೇ ಇರಲ್ಲಿ ಬಿಡು
ಭಾರವಾಗುತ್ತೆ ಅಂತಲ್ಲ, ನಿನಗೆ
ಆ ನೆನಪುಗಳು ಬದಕಲು ಬಿಡದು
ಹೇಗಿದ್ದರೂ ಈಗ ನಾ ಒಂಟಿಯಲ್ಲವೇ
ರಸ್ತೆ ಗುಂಡಿಯಲ್ಲಿ ದಫನಾದ ಕನಸು
ಹೃದಯದ ಮೇಲೆ ಅಕ್ಷರದ ಸಾಲು
ಕೆತ್ತಿದ ಕೈಗಳಿಗೆ ವಿದಾಯ ಹೇಳಲಾದರೂ
ಒಮ್ಮೆ ನೋಡಿ ಬಿಡು
ಆ ನಿಶಬ್ದ ನಿನ್ನ ತುಟಿಗಳಿಗೆ ಹಿಡಿಸದು
ಮುನಿಸು-ಪಿಸು ಮಾತಿಗೆ
ಇಂದೇ ಕೊನೆ ಮುದ್ರೆ ಅಲ್ಲವೇ,
ಭೂಮಿ ದುಂಡಾಗಿದೆಯಂತ್ತೆ
ಎದುರಾದಾಗ
ಹಾಗೆ ಹೋಗಿ ಬಿಡು
ಗುರ್ತು ಹಿಡಿಯದವನಂತ್ತೆ
ಮಾತನಾಡದೆ ನಿಲ್ಲು
ಎಲ್ಲವೂ ಬಲ್ಲೆ, ನೀನು ನಾನಲ್ಲವೇ
ಕಣ್ಣಿನ ಭಾಷೆಯನ್ನು
ಹೃದಯದಲ್ಲಿ ಇಳಿಸಿ ಬಿಡುವೆ
ಈ ಜನ್ಮಕಾಗುವಷ್ಟು
ಮೋಹಬತಿನ ದೀಪಕ್ಕೆ
ಕಣ್ಣು ತಾಕದ ಹಾಗೆ ಬಚ್ಚಿಡುವೆ
ದಣಿವಾದಾಗ ಬಂದುಬಿಡು
ಸಂಕೋಚ ಬೇಡ, ಬಿಟ್ಟು ಹೋದವನೆಂಬ
ಮಡಿಲು ನಿನಗಾಗಿ ಕಾಯುತ್ತೆ
ಹೂಂ… ಕೊನೆಯದಾಗಿ
ವಿದಾಯಕೂ ಮುನ್ನ
ಮೌನವಾಗಿಯೇ ಬಿಗಿದಪ್ಪು,
ಉಸಿರು ನಿಲ್ಲುವಷ್ಟು
ಮತ್ತೆ
ಹಣೆಯ ಮೇಲೆ ತುಟಿಗಳ
ಗುರುತು ಹಾಕುವುದು ಮರೆಯಬೇಡ
ಎಷ್ಟೇ ಆದರೂ ನಿನ್ನ ಪ್ರೀತಿಗೆ ಹಕ್ಕುದಾರಳಲ್ಲವೇ
ಉತ್ತಮ ಎ. ದೊಡ್ಮನಿ





ಅದ್ಭುತವಾದ ಸಾಲುಗಳಿಂದ ತುಂಬಿದೆ ಇದರಲ್ಲೇ ಅಡಗಿದೆ ಪ್ರೀತಿಯು ಮೌನವಾಗಿದೆ ಎಂದರ್ಥ
ಧನ್ಯವಾದಗಳು