ಕಾವ್ಯಸಂಗಾತಿ
ಎಮ್ಮಾರ್ಕೆ
ನಾನು ನೀನು


ರಾಶಿ ಹೂವ ಹಾಸಿ ಕರೆದೆ
ನಿನ್ನ ನನ್ನೆದೆ ಗೂಡಿಗೆ,
ನೀನೇ ತಾನೇ ಚರಣವು
ನಾನು ಹಾಡೋ ಹಾಡಿಗೆ
ಈ ಜೀವದ ಭಾವಸೌಧ
ಇಂದು ನಿನ್ನದಾಯಿತು,
ಬಲಗಾಲನ್ನಿಟ್ಟು ಬರಲು
ಬಾಳು ಧನ್ಯವಾಯಿತು
ಮನೆಯ ಜತೆಗೆ ಮನವ
ಬೆಳಗಿದಂತ ನಲ್ಲೆಯೇ,
ನನ್ನ ಒಳಹೊರಗುಗಳೆಲ್ಲ
ಎಷ್ಟೊಂದು ಬಲ್ಲೆಯೇ?
ಯಾವ ಜನ್ಮದಿ ಪುಣ್ಯವ
ನಾವಿಬ್ಬರೂ ಗೈದೆವೋ?,
ಈ ಜನ್ಮದಿ ನಲುಮೆಯ
ನದಿಯೊಳಗೆ ಮಿಂದೆವು
ಕಷ್ಟ-ಸುಖದ ಉಭಯಕೂ
ಏಕರೂಪವ ತಾಳುವಾ,
ನಂಗೆ ನೀನು ನಿಂಗೆ ನಾನು
ಎಂದುಕೊಂಡೇ ಬಾಳುವಾ
ಎಮ್ಮಾರ್ಕೆ



