ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಾಗುತಿಹುದು ನಿತ್ಯ ನಿರಂತರ
ನಿಲ್ಲದಲೆಯೆ ವಿಧಿಯ ಬಂಡಿ
ಬದುಕಿನಾ ಸುಖ-ದುಃಖ ಗಳನು
ಕಷ್ಟ ನಷ್ಟಗಳ ಹೇರಿಕೊಂಡು..!

ಹಗಲು ರಾತ್ರಿಯ ಪರಿವೆ ಇಲ್ಲದೆ
ಯಾರಿಗಾಗಿಯೂ ಕ್ಷಣವೂ ಕಾಯದೆ
ಓಡುತಿಹುದು ಹಿಂದೆ ನೋಡದೆ
ಸೃಷ್ಟಿ ನಿಯಮವ ಮೀರದೆ..!

ಯಾರ ಪಾಲಿನ ನೋವುಗಳೋ
ಯಾರ ಮಡಿಲಿನ ನಲಿವುಗಳೋ
ನೀಡುತಲಿ ತಾ ಭೇದವಿಲ್ಲದೆ
ಹೋಗುತಿಹುದು ಕಾಣದಂತೆ

ನಾವು ಮಾಡಿದ ಕರ್ಮಗಳಲಿ
ಫಲವ ಪಡೆವೆವು ನೆನಪಿರಲಿ..!
ವಿಧಿಯ ಆಟವ ಬಲ್ಲೆವೇನು..?
ಅರಿತು ಬಾಳಬೇಕು ಇದನು..!

About The Author

5 thoughts on “ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ವಿಧಿಯ ಬಂಡಿ…”

  1. ಸೂಪರ್ ಕವಿತೆ ಇದೆರಿ ಮೇಡಂರ ನಿಮ್ಮ ವಿಧಿಯ ಬಂಡಿ ಜೀವನದ ನಾನಾ ತರ ದ ಹುದುಲೊಳಗೆ ಸಿಕ್ಕು ಮುಂದೆ ಸಾಗುವ ಭರವಸೆಯ ಬಂಡಿ….

  2. ಎಷ್ಟೊಂದು ಚೆನ್ನಾಗಿ ಕವಿತೆ ಬರೆದಿದ್ದೀರಾ ಮೇಡಂ.

    ಬದುಕು ಜಟಕಾ ಬಂಡಿ,
    ವಿಧಿ ಅದರ ಸಾಹೇಬ………

  3. ತಿದ್ದಿದರೆ ಉತ್ತಮ ಭಾವಗೀತೆಯಾಗಬಲ್ಲ ಎಲ್ಲಾ ಲಕ್ಷಣಗಳು ಈ ಕವಿತೆಗಿದೆ. ಉತ್ತಮ ರಚನೆ

  4. ಸ್ಪಂದಿಸಿದ ಎಲ್ಲ ಸಹೃದಯರಿಗೆ ಧನ್ಯವಾದಗಳು

    ಹಮೀದಾ ಬೇಗಂ.

  5. ಬದುಕಿನ ನಿತ್ಯ ಸತ್ಯಗಳನ್ನು ಹೇಳುವ ಕವನ ಅಮ್ಮ , ಚೆನ್ನಾಗಿದೆ..

Leave a Reply

You cannot copy content of this page

Scroll to Top