ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶ್ವ ಬೈಸಿಕಲ್  ದಿನಾಚರಣೆ

ನಮ್ಮ ಜೀವನವೇ ಒಂದು ರೀತಿಯ ಸೈಕಲ್. ಸವಾರಿ  ಇದ್ದ ಹಾಗೆ .ಯಾವಾಗಲೂ ಪೆಡಲ್ ತಿಳಿಯುತ್ತಲೇ ಇರಬೇಕು.
ನಾವು ಚಿಕ್ಕವರಿದ್ದಾಗ ಸೈಕಲ್ ಸವಾರಿ ಒಂದು ರೀತಿಯ ಮಜಾ ಕೊಡುತ್ತಿತ್ತು. ಆಗ  ಗಂಟೆಗಿಷ್ಟು  ದುಡ್ಡು ಕೊಟ್ಟರೆ ಬಾಡಿಗೆ ಸೈಕಲ್ ಸಿಗುತ್ತಿತ್ತು.  ಅಟ್ಲಾಸ್,  ಹೀರೋ ಕಂಪನಿಯ ಸೈಕಲ್ ಗಳೆಂದರೆ ನಮಗೆ ಅಂಬಾಸಿಡಾರ್ ಕಾರಿನ ಫೀಲ್ ಆಗುತ್ತಿತ್ತು. ಅವುಗಳಿಗೆ, ಶಂಕರ್ ನಾಗ್, ವಿಷ್ಣುವರ್ಧನ್, ಅವರ ಪೋಸ್ಟರ್ ಹಚ್ಚಿ, ಕುಚ್ಚು ಕಟ್ಟಿ ಬೆಲ್ ಬಾರಿಸುತ್ತಾ ಮಾರ್ಕೆಟ್ನೊಳಗೆ ಹೊರಟರೆ ಎಲ್ಲರೂ ನಮ್ಮನ್ನೇ ನೋಡುತ್ತಾರೆಂಬ ಫೀಲ್ ಆಗುತ್ತಿತ್ತು.
ಟ್ಯುಶನ್, ಮಾರ್ಕೆಟ್, ಸ್ಕೂಲಿಗೆ, ಕಾಲೇಜಿಗೆ, ಅಷ್ಟೇ ಏಕೆ  ಹಾಲು  ಹಾಕುವವರು, ಎಲ್ಲರೂ ಸೈಕಲ್ ಮೇಲೆ ಡಿಪೆಂಡ್.
ಪರಿಸರ ಸ್ನೇಹಿ ಸೈಕಲ್ ,ನ ದರ್ಬಾರ್ ತುಂಬ ಜೋರಾಗಿ ಇದ್ದರೂ, ಬರು ಬರುತ್ತಾ, m-80ಗಾಡಿ, ಲೂನ, ಟಿವಿಎಸ್, ಸ್ಕೂಟಿ ಗಳ ಭರಾಟೆಗೆ ಸಿಕ್ಕು  ಸೈಕಲ್ ನ ಹವಾ ಕ್ಷೀಣಿಸ ತೊಡಗಿದೆ.

ಬನ್ನಿ, ಸೈಕಲ್ ಉಪಯೋಗಿಸಿ ಪರಿಸರ ಉಳಿಸೋಣ, ಬಾಲ್ಯದ ನೆನಪಿಗೆ ಮರಳಿ ಬರೋಣ.
ಚೈನಾ ದೇಶದಲ್ಲಿ ಈಗಲೂ ಸೈಕಲ್ ಗೆ ಸಿಕ್ಕಾ ಪಟ್ಟೆ ಡಿಮ್ಯಾಂಡ್,, ಅಲ್ಲಿ ಸೈಕಲ್ ಹೊಡೆಯುವುದು ಒಂದು ರೀತಿಯ ಟ್ರೆಂಡ್ ಇದ್ದ ಹಾಗೆ,  ನಮ್ಮಲ್ಲಿ  ಸೈಕ್ಲಿಂಗ್  ಒಂದೂ  ರೀತಿಯ  ಜನಪ್ರಿಯ ಕ್ರೀಡೆ . ಉತ್ತರ ಕರ್ನಾಟಕದಲ್ಲಿ   ವಿಜಯಪುರ ಜಿಲ್ಲೆಯನ್ನು ಸೈಕ್ಲಿಂಗ್ ಕ್ರೀಡಾಪಟುಗಳ ಕಣಜ ಇದ್ದ ಹಾಗೆ.  C.M, ಕುರಾಣಿ, ಕವಿತಾ ಮೇಡಂ ಸೈಕ್ಲಿಂಗ್ ಕೋಚ್ ಗಳೆಂದು ಪ್ರಸಿದ್ಧ ರಾಗಿದ್ದಾರೆ.
ಜನ ಜಿಮ್ ಗೆ ಹೋಗುವುದು ಹೇಗೆ ಇಷ್ಟ ಪಡುತ್ತ್ತಾರೋ ಹಾಗೆ ಸೈಕ್ಲಿಂಗ್ ನ್ನು ಇಷ್ಟ ಪಡುವವರು ಇದ್ದಾರೆ. ಪುನೀತ್ ರಾಜ್ ಕುಮಾರ್ ಹೊಸ ಹೊಸ ಸೈಕಲ್ ಗಳ   ಪಟ್ಟಿ ಇಟ್ಟು ಕೊಂಡಿ ದ್ದರು.


About The Author

Leave a Reply

You cannot copy content of this page

Scroll to Top